ಆ್ಯಂಕರ್ ಅನುಶ್ರೀ ಅವರು ರೈಲಿನಲ್ಲಿ ಸಕತ್ ಎಂಜಾಯ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದರೂ ಫ್ಯಾನ್ಸ್ ಅವರ ಮದುವೆಯ ಬಗ್ಗೆಯೇ ಕೆದಕುತ್ತಲೇ ಇದ್ದಾರೆ. ಈಗ ಏನು ಹೇಳಿದ್ದಾರೆ ನೋಡಿ!
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಅವರಿಗೆ ಎಲ್ಲಿಯೇ ಹೋದ್ರೂ ಎದುರಾಗುವ ಪ್ರಶ್ನೆ ಒಂದೇ ನಿಮ್ಮ ಮದ್ವೆ ಯಾವಾಗ ಎನ್ನುವುದು. ಇದಾಗಲೇ ಈ ಪ್ರಶ್ನೆಗೆ ನಟಿ ತಮ್ಮದೇ ಆದ ರೀತಿಯಲ್ಲಿ ಹಲವಾರು ವಿಧನಾಗಿ ಉತ್ತರಿಸಿದ್ದಾರೆ. 1987ರಲ್ಲಿ ಹುಟ್ಟಿರುವ ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು. ಮದುವೆಯ ವಯಸ್ಸು ಮೀರುತ್ತಿದ್ದರೂ ಮದ್ವೆ ಯಾಕೆ ಆಗ್ತಿಲ್ಲ ಎನ್ನೋ ಆತಂಕದಲ್ಲಿ ಇರುವಂತೆ ತೋರುತ್ತಿದೆ ಅನುಶ್ರೀ ಫ್ಯಾನ್ಸ್. ಮದುವೆಯ ವಿಷಯವಾಗಿ ನಟಿ ಎಷ್ಟೇ ಸಮಜಾಯಿಷಿ, ಎಷ್ಟೇ ಉತ್ತರ ಕೊಟ್ಟರೂ ಅಭಿಮಾನಿಗಳಿಗೆ ಸಮಾಧಾನವಾಗುವುದಿಲ್ಲ. ಆದ್ದರಿಂದ ಎಲ್ಲಿಯೇ ಹೋದರೂ ಮದ್ವೆಯ ಪ್ರಶ್ನೆಯೇ ಎದುರಾಗುತ್ತದೆ. ಮದುವೆಯ ವಿಷಯವಾಗಿ ನಟಿ ಎಷ್ಟೇ ಸಮಜಾಯಿಷಿ, ಎಷ್ಟೇ ಉತ್ತರ ಕೊಟ್ಟರೂ ಅಭಿಮಾನಿಗಳಿಗೆ ಸಮಾಧಾನವಾಗುವಂತೆ ಕಾಣುತ್ತಿಲ್ಲ.
ಇದೀಗ ಅನುಶ್ರೀ (Anchor Anushree) ಟ್ರೇನಿನಲ್ಲಿ ಪ್ರಯಾಣ ಮಾಡುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ರೈಲು ಪ್ರಯಾಣ ಚಂದಾನೇ.. ಪ್ರಯಾಣದಲ್ಲಿ ಸಾಗೋ ಅಂದ ಚಂದಾನೇ ಎಂದು ಶೀರ್ಷಿಕೆ ಕೊಟ್ಟು ನೀನ್ ಚಂದನಾ ಹಾಡಿನ ಹಿನ್ನೆಲೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ವಂದೇ ಭಾರತ್ ರೈಲಿನಂತೆ ಇದು ತೋರುತ್ತಿದೆ. ರೈಲಿನಲ್ಲಿ ಸಕತ್ ಎಂಜಾಯ್ ಮಾಡ್ತಿದ್ದಾರೆ ನಟಿ. ಇವರ ಫ್ಯಾನ್ಸ್ ಸೂಪರ್ ಎಂದು ಹಾಡಿ ಹೊಗಳುತ್ತಿದ್ದಾರೆ. ಹಲವರು ಹಾರ್ಟ್ ಇಮೋಜಿ ಕಳುಹಿಸಿದರೆ, ಇನ್ನು ಕೆಲವರು ಎಲ್ಲಿಗೆ ಪಯಣ ಎಂದು ಪ್ರಶ್ನಿಸುತ್ತಿದ್ದಾರೆ. ಇಂಥ ಐಷಾರಾಮಿ ಬೋಗಿ ಬದಲು ಜನರಲ್ ಬೋಗಿಯಲ್ಲಿ ಪ್ರಯಾಣಿಸಿ ಈ ರೀತಿ ಹಾಡು ಹೇಳಿ ನೋಡ್ವಾ ಎಂದು ಇನ್ನು ಕೆಲವರು ಅನುಶ್ರೀಯವರ ಕಾಲೆಳೆಯುತ್ತಿದ್ದಾರೆ.
ಇವೆಲ್ಲವುಗಳ ನಡುವೆಯೂ ಕೆಲವರು ನಿಮ್ಮ ಮದುವೆ ಯಾವಾಗ ಮೇಡಂ ಎನ್ನೋದನ್ನು ಪ್ರಶ್ನಿಸಲು ಮರೆಯಲಿಲ್ಲ. ಈ ಹಿಂದೆ ನಟಿ, ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದಿದ್ದರು. ಇನ್ನಾದರೂ ತಮ್ಮ ಮದುವೆಯ ಬಗ್ಗೆ ಪ್ರಶ್ನೆ ಮಾಡೋದನ್ನು ನಿಲ್ಲಿಸಿ ಎನ್ನೋ ಅರ್ಥದಲ್ಲಿ ಹೇಳಿದ್ದರು. ಮದುವೆ ಮಾಡಿಕೊಳ್ಳುವ ತುಂಬಾ ಸಮಯವಿದೆ. ಮೊದಲು ಕೆಲಸ ಮಾಡೋಣ ಎಂದಿದ್ದ ಅವರು, ಮದುವೆ ಅನ್ನೋದು ಒಂದು ಸುಂದರ ಅನುಭವ. ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ಈ ಹಿಂದೆ ಹೇಳಿದ್ದರು.
Vijay Raghavendra ಜೊತೆ Anchor Anushree Photo Viral: ಚಿರಕಾಲ ಹೀಗೆ ಇರಲಿ ಸ್ನೇಹ ಎಂದ ಫ್ಯಾನ್ಸ್!
ಮದುವೆ ಅನ್ನೋದು ಬ್ಯೂಟಿಫುಲ್ ಅನುಭವ, ಮದುವೆ ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ ,ಈ ಸಂಬಂಧದ ಒಳಗೆ ಎರಡು ಜೀವಗಳು ಹೊಕ್ಕಬೇಕು. ಇದಕ್ಕೆಲ್ಲಾ ಸ್ವಲ್ಪ ಟೈಮ್ ಬೇಕು. ಸೋ ಸದ್ಯ ಪ್ಲೀಸ್ ನನ್ನ ಮದುವೆ ಬಗ್ಗೆ ಮಾತ್ರ ಕೇಳ್ಬೇಡಿ ಎಂದೂ ಕೆಲವೊಮ್ಮೆ ಅನುಶ್ರೀ ತಮ್ಮ ಅಭಿಮಾನಿಗಳಿಗೆ ನೇರವಾಗಿಯೇ ಹೇಳಿದ್ದುಂಟು. ಇದೇ ವಿಷಯದ ಬಗ್ಗೆ ಮಾತನಾಡುವಾಗ ಹಿಂದೊಮ್ಮೆ ಭಾವುಕರಾಗಿದ್ದ ನಟಿ, ನನ್ನನ್ನು ಯಾರಾದ್ರೂ ಬಿಟ್ಟು ಹೋಗ್ತಾರಾ ಅನ್ನೋ ಭಯವಿದೆ. ನನಗೆ ಆ ದುಃಖವನ್ನು ತಡೆಯುವ ಶಕ್ತಿ ಇಲ್ಲ ಎಂದಿದ್ದರು. ಪ್ಲೀಸ್ ಇಂತಹ ವಿಚಾರವನ್ನು ಕೇಳ್ಬೇಡಿ ನಾನು ಭಾವುಕರಾಗ್ತೀನಿ ಎಂದೂ ಹೇಳಿದ್ದರು. ಆದರೂ ಫ್ಯಾನ್ಸ್ ಮಾತ್ರ ನಟಿ ಮದ್ವೆ ಮಾಡಿಕೊಳ್ಳುವವರೆಗೆ ಕಾಯಲುಕಷ್ಟವಾಗ್ತಿದೆ. ಅನುಶ್ರೀಯವರ ಮದುವೆ ಮಾಡಿಯೇ ತೀರಬೇಕು ಎಂದು ಪಣತೊಟ್ಟಂತಿದೆ!