
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸ್ಯದ ಮಾತಿನಿಂದಲೇ ಕಾರ್ಯಕ್ರಮಗಳಲ್ಲಿ ಎಲ್ಲರನ್ನೂ ರಂಜಿಸುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆದ ಅನುಬಂಧ ಅವಾರ್ಡ್ಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದು, ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕೆಲವು ವೈಯಕ್ತಿಕ ವಿಷಯಗಳನ್ನು ಅವರು ಹಾಸ್ಯದ ರೂಪದಲ್ಲಿಯೇ ತಿಳಿಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಹೆಂಡ್ತಿಯನ್ನು ಏನಂತ ಕರೀತಾರೆ? ಪ್ರೀತಿ ಉಕ್ಕಿ ಹರಿದಾಗ ಏನಂತ ಹೇಳ್ತಾರೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಂಡ್ತಿಗೆ ಹೆದರ್ತಾರಾ ಅಥವಾ....? ಹೀಗೆ ಕೆಲವು ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದು, ಅದು ಸಕತ್ ವೈರಲ್ ಆಗುತ್ತಿದೆ.
ನಿರೂಪಕಿ ಸುಷ್ಮಾ ಅವರು, ಸಿದ್ದರಾಮಯ್ಯನವರಿಗೆ ನಿಮ್ಮ ಪತ್ನಿಯ ಹೆಸರು ಏನು ಎಂದು ಕೇಳಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ಪಾರ್ವತಿ ಎಂದಿದ್ದಾರೆ. ನಂತರ ನಿಮ್ಮ ಪತ್ನಿಯನ್ನು ಏನೆಂದು ಕರೆಯುತ್ತೀರಿ ಎಂದಾಗ ಬೇರೇನೂ ಹೆಸರಿಂದ ಕರೆಯಲ್ಲ, ಪಾರ್ವತಿ ಎಂದೇ ಕರೆಯುತ್ತೇನೆ ಎಂದಿದ್ದಾರೆ. ನಂತರ ಸುಷ್ಮಾ ಅವರು, ತುಂಬಾ ಪ್ರೀತಿ ಉಕ್ಕಿದಾಗ ಏನೆಂದು ಕರೆಯುತ್ತೀರಿ ಎಂದು ಪ್ರಶ್ನಿಸಿದಾಗ ಆಗಲೂ ಪಾರ್ವತಿ ಅಂತನೇ ಕರೀತೀನಿ. ಬೇರೆ ಹೆಸರಿನಿಂದ ಕರೆಯೋಕೆ ಆಗತ್ತಾ ಎಂದಿದ್ದಾರೆ.
ಎಲ್‌ಎಲ್‌ಬಿ ಓದುವಾಗ ಸಿದ್ದರಾಮಯ್ಯಗೆ ಲವರ್ ಇದ್ರಾ? ಗೂಗ್ಲಿ ಪ್ರಶ್ನೆಗೆ ಸಿಎಂ ಉತ್ತರವೇನು?
ಇದಾದ ಬಳಿಕ ಪ್ರೆಸ್ಮೀಟ್ಗಳಲ್ಲಿ ನೀವು ಏನು ಉತ್ತರ ಕೊಡಬೇಕು ಎಂದು ಯೋಚನೆ ಮಾಡದೇ ನೇರವಾಗಿ ಉತ್ತರ ಕೊಡುತ್ತೀರಾ. ಹಾಗೆನೇ ನೀವು ಹೆಂಡ್ತಿ ಹತ್ರ ಯಾವಾಗಾದ್ರೂ ಬೈಸಿಕೊಂಡಿದ್ದೀರಾ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಸಿದ್ದರಾಮಯ್ಯನವರು, ಅನಗತ್ಯವಾಗಿ ಯಾರಿಗೂ ಹೆದರಿಕೊಳ್ಳಲ್ಲ. ಆದ್ರೆ ರಾಜ್ಯದ ಜನರಿಗೆ ಹೆದರಿಕೊಳ್ತೇನೆ ಎಂದರು. ನಿಮಗೆ ಅಡುಗೆ ಮಾಡಲು ಬರತ್ತಾ ಎಂದು ಪ್ರಶ್ನೆ ಕೇಳಿದಾಗ, ಬರಲ್ಲ, ಅನ್ನ ಮಾತ್ರ ಬರುತ್ತೆ ಎಂದ ಮುಖ್ಯಮಂತ್ರಿ, ವಿದ್ಯಾರ್ಥಿಯಾಗಿದ್ದಾಗ ಅನ್ನ ಮಾಡಿಕೊಂಡು ಹೋಟೆಲ್ನಿಂದ ಸಾಂಬಾರ್ ತೆಗೆದುಕೊಂಡು ಬಂದು ಊಟ ಮಾಡುತ್ತಿದ್ದೆ. ಹಾಗಾಗಿ ಅನ್ನ ಮಾಡೋದು ಮಾತ್ರ ಬರತ್ತೆ ಎಂದರು.
ನಂತರ 'ಒಲವಿನ ನಿಲ್ಡಾಣ' ಧಾರಾವಾಹಿಯ ನಟಿ 'ತಾರಿಣಿ' ಕೇಳಿದ ಪ್ರಶ್ನೆಗೆ ಜನರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದೇ ವೇಳೆ ಕನ್ನಡ ಬರದ ನಟಿ ಕನ್ನಡದಲ್ಲಿಯೇ ಪ್ರಶ್ನೆ ಕೇಳಿದ್ದಕ್ಕೆ ಭೇಷ್ ಎಂದಿದ್ದಾರೆ. ಅಷ್ಟಕ್ಕೂ ತಾರಿಣಿ ಅವರು, ಒಂದೇ ಒಂದು ಪ್ರಶ್ನೆ ಎಲ್ಲರ ಪರವಾಗಿ ಕೇಳುತ್ತೇನೆ ಎನ್ನುತ್ತಾ, 'ನೀವು ಎಲ್‌ಎಲ್‌ಬಿ ಓದುವಾಗ ಯಾರನ್ನಾದರೂ ಲವ್ ಮಾಡಿದ್ರಾ?' ಎಂದು ನಟಿ ತಾರಿಣಿ ಪ್ರಶ್ನೆ ಕೇಳಿದರು. ಇದಕ್ಕೆ ನಕ್ಕ ಮುಖ್ಯಮಂತ್ರಿ, ಲವ್ ಮಾಡಿದ್ದೆ ಅಂತ ಅಥವಾ ಮಾಡಿಲ್ಲ ಅಂತಲೂ ಉತ್ತರ ಕೊಡದೇ ಎಲ್ಲರ ನಗೆಯೊಡನೆ ತಮ್ಮ ನಗೆಯನ್ನು ಸೇರಿಸಿಬಿಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.