ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್​! ಉಫ್​... ನಿಮ್​ ಸಹವಾಸವೇ ಬೇಡ ಅಂದಳಾ ಚಾರ್ಲಿ?

By Suvarna News  |  First Published Oct 9, 2023, 12:37 PM IST

ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಚಾರ್ಲಿ 777 ಖ್ಯಾತಿಯ ನಾಯಿ ಬಿಗ್​ಬಾಸ್​ ಮನೆಗೆ ಎಷ್ಟು ಕರೆದರೂ ಬರಲೇ ಇಲ್ಲ. ವೇದಿಕೆಯಲ್ಲಿ ಆಗಿದ್ದೇನು?  
 


ಕನ್ನಡ ಬಿಗ್​ಬಾಸ್ 10 ನಿನ್ನೆ ಭರ್ಜರಿ ಓಪನಿಂಗ್​ ಕಂಡಿದೆ. ಬೇರೆ ಬೇರೆ ಕ್ಷೇತ್ರಗಳ ಘಟಾನುಘಟಿಗಳು ಎಂಟ್ರಿ ಕೊಟ್ಟಾಗಿದೆ. ಇನ್ನು ಕೆಲವರು ವೇಟಿಂಗ್​ ಲಿಸ್ಟ್​ನಲ್ಲಿ ಇದ್ದಾರೆ. ಈ ಮೂಲಕ  ಈ ಕಾರ್ಯಕ್ರಮ ಯಾವಾಗ, ಯಾವ ಚಾನೆಲ್​ನಲ್ಲಿ ಶುರುವಾಗುತ್ತೆ, ಯಾವೆಲ್ಲಾ ಸ್ಪರ್ಧಿಗಳು ಮನೆಯೊಳಕ್ಕೆ ಹೋಗಲಿದ್ದಾರೆ ಎನ್ನುವ ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಅವರು ಹೋಗುತ್ತಾರೆ, ಇವರು ಹೋಗುತ್ತಾರೆ ಎನ್ನುವ ಗುಸುಗುಸು ಪಿಸುಪಿಸುಗಳಿಗೆ ಫುಲ್​ಸ್ಟಾಪ್​ ಬಿದ್ದಿದೆ. ನಾನು ಹೋಗಲ್ಲ, ಅವರು ಹೋಗಲ್ಲ ಎಂದು ಸೆಲೆಬ್ರಿಟಿಗಳು ಕ್ಲಾರಿಫಿಕೇಷನ್​ ಕೊಡುವುದೂ ನಿಂತಿದೆ. ಈಗ ಏನಿದ್ದರೂ ಎಲಿಮಿನೇಷನ್​ ಮೇಲೆ ಎಲ್ಲರ ಕಣ್ಣು.

ಇವೆಲ್ಲವುಗಳ ಮಧ್ಯೆಯೇ ಬಿಗ್​ಬಾಸ್​ ಪ್ರಿಯರಿಗೆ ಬಹಳ ನೋವು, ಬೇಸರ ಕೊಟ್ಟ ಸಂಗತಿಯೂ ನಡೆದಿದೆ. ಅದೇನೆಂದರೆ, ಮೊದಲ ಸ್ಪರ್ಧಿಯಾಗಿ ಮನೆಯೊಳಕ್ಕೆ ಹೋಗಬೇಕಿದ್ದ ಚಾರ್ಲಿ 777 ಖ್ಯಾತಿಯ ನಾಯಿ ಬಿಗ್​ಬಾಸ್​ಗೆ ಬರಲೇ ಇಲ್ಲ! ಹೌದು. ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಸ್ಪರ್ಧಿಗಳ ಹೆಸರುಗಳನ್ನು ಕೊನೆಯವರೆಗೂ ಸೀಕ್ರೆಟ್​ ಆಗಿ ಇಡಲಾಗಿತ್ತಾದರೂ ಚಾರ್ಲಿ ಹೆಸರನ್ನು ಮೊದಲೇ ಬಿಗ್​ಬಾಸ್​ ತಂಡ ಅನೌನ್ಸ್​ ಮಾಡಿತ್ತು. ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್​ ಸಂದರ್ಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಬಗ್ಗೆ ಘೋಷಿಸಲಾಗಿತ್ತು.  ಈ ಬಾರಿ   17 ಸ್ಪರ್ಧಿಗಳು ಬಿಗ್​ಬಾಸ್​ನಲ್ಲಿ ಇರುತ್ತಾರೆ.  ಆದರೆ ಇವರಲ್ಲಿ ತುಂಬಾ ಡಿಫರೆಂಟ್​ ಆಗಿರೋದು ಮೊದಲ ಸ್ಪರ್ಧಿ, ಅದುವೇ ಚಾರ್ಲಿ ಎಂದು ಘೋಷಿಸಲಾಗಿತ್ತು. 

Tap to resize

Latest Videos

Bigg Boss ಮನೆಗೆ ಸ್ಪರ್ಧಿಯಾಗಿ ಚಾರ್ಲಿ! ಖುಷಿಯಿಂದ ಕುಣಿದ ನಾಯಿಗಳು ಏನ್​ ಹೇಳಿದ್ವು ಕೇಳಿ...

 ಯಾವುದೇ ಸ್ಪರ್ಧಿ ಮನೆಯೊಳಕ್ಕೆ ಹೋದರೆ ಅದರ ಬಗ್ಗೆ ಅವರ ಸ್ನೇಹಿತರು, ಕುಟುಂಬಸ್ಥರು ಮಾತನಾಡುವುದು ಸಹಜ. ಅದರಂತೆಯೇ ಚಾರ್ಲಿಯ ಕುರಿತೂ ಅದರ ನಾಯಿ ಫ್ರೆಂಡ್ಸ್​ ಒಂದಿಷ್ಟು ಮಾಹಿತಿ ನೀಡಿದ್ದನ್ನೂ ದೊಡ್ಡ ಪರದೆಯ ಮೇಲೆ ತೋರಿಸಲಾಗಿತ್ತು.  ಚಾರ್ಲಿ ತುಂಬಾ ತುಂಟಿ. ಆ್ಯಕ್ಟಿಂಗ್​ ಅಂತ ಬಂದರೆ ತಿಂದ್ ಹಾಕಿ ಬಿಡೋಳು ಎಂದು ಒಂದು ನಾಯಿ ಹೇಳಿದ್ರೆ, ಚಾರ್ಲಿಗೆ ಚಳಿಗಾಲ ಆಗಲ್ಲ, ತುಂಬಾ ನಡುಗಿ ಬಿಡ್ತಾಳೆ, ಆದ್ರೂ ಹಿಮಾಲಯಕ್ಕೆ ಹೋಗಿ ನಟಿಸಿದ್ದು ನೋಡಿ ಕಣ್ಣೀರೇ ಬಂತು ಎಂದು ಇನ್ನೊಂದು ನಾಯಿ ಹೇಳಿತ್ತು. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿದ ಚಾರ್ಲಿಗೆ ನ್ಯಾಷನಲ್​ ಅವಾರ್ಡ್​ ಬಂದಿದ್ದು ನೋಡಿ ಇಡೀ ನಾಯಿ ಪರಂಪರೆಗೆ ಹೆಮ್ಮೆ ತಂದಿದೆ ಎಂದು ಮತ್ತೊಂದು  ನಾಯಿ ಹೇಳಿತ್ತು. 

ಚಾರ್ಲಿಯ ಎಂಟ್ರಿ ಬಗ್ಗೆ ತಂಡ ಇಷ್ಟೆಲ್ಲಾ ಪ್ರಚಾರ ಮಾಡಿದ್ದರೂ ನಿನ್ನೆ ಮಾತ್ರ ಚಾರ್ಲಿ ಪತ್ತೆನೇ ಇಲ್ಲ! ನಿನ್ನೆ ಗ್ರ್ಯಾಂಡ್​ ಓಪನಿಂಗ್​ ದಿನ ಇದು ಹೇಗೆ ಎಂಟ್ರಿ ಕೊಡುತ್ತದೆ ಎಂದು ಅದರ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ನಾಯಿಯ ಬದಲು ‘777 ಚಾರ್ಲಿ’ ಸಿನಿಮಾ ನಾಯಕಿ ಸಂಗೀತಾ ಶೃಂಗೇರಿ ವೇದಿಕೆಗೆ ಬಂದರು.  ಇಡೀ ಕರ್ನಾಟಕ ಒಂದು ಅತಿಥಿಗಾಗಿ ಕಾಯುತ್ತಿದೆ. ಅದು ಯಾರು ಅನ್ನೋದು ನಿಮಗೆ ಗೊತ್ತು ಎಂದು ಸುದೀಪ್​ ಹೇಳಿದಾಗ  ಸಂಗೀತಾ ‘ಚಾರ್ಲಿ’ ಎಂದರು. ಚಾರ್ಲಿ ಹೆಸರನ್ನು ಕರೆಯುವಂತೆ ಸುದೀಪ್ ಹೇಳಿದರು. ‘ಚಾರ್ಲಿ.. ಚಾರ್ಲಿ.. ಟ್ರೀಟ್ ಕೊಡ್ತೀನಿ ಬಾ..’ ಎಂದು ಸಂಗೀತಾ ಕರೆದರೂ ಚಾರ್ಲಿಯ ಸುದ್ದಿನೇ ಇಲ್ಲ. ಇದು ಸುದೀಪ್​ ಅವರಿಗೆ ಮೊದಲೇ ಗೊತ್ತಿತ್ತು ಎನ್ನುವುದರಲ್ಲಿ ಸಂದೇಹವೇ ಇಲ್ಲ.  ಆದರೆ ವೇದಿಕೆ ಮೇಲೆ ಅವರು, ‘ಬಹುಶಃ ನೀವು ಕರೆದಿದ್ದು ಕೇಳಿರುತ್ತದೆ. ಪರ್ಮಿಷನ್ ತೆಗೆದುಕೊಳ್ಳೋಕೆ ಕಾದಿರುತ್ತದೆ. ನಾರ್ತ್ ಇಂಡಿಯಾ ಹೋಗಿದೆ, ಬರುತ್ತೆ’ ಎಂದು ತಮಾಷೆಯಾಗಿ ಹೇಳುವ ಮೂಲಕ ಅಲ್ಲಿಗೇ ಅದರ ವಿಷಯವನ್ನು ನಿಲ್ಲಿಸಿದರು. ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವವರ ಸಹವಾಸವೇ ಬೇಡ ಎಂದು ಅವಳು ಬರಲಿಲ್ಲ, ಬುದ್ಧಿವಂತೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಆದರೆ ಸುದೀಪ್​ ಮಾತು ಕೇಳಿ ಮುಂದಿನ ದಿನಗಳಲ್ಲಿ ಚಾರ್ಲಿ ಪ್ರವೇಶ ಪಡೆಯುವುದು ಖಚಿತ ಎನ್ನಲಾಗುತ್ತಿದೆ. 

ಬಿಗ್​ಬಾಸ್​ ವೇದಿಕೆಯಲ್ಲಿ ಡ್ರೋಣ್​ ಪ್ರತಾಪ್​ ಪ್ರತ್ಯಕ್ಷ! ಕಾಗೆ ಹಾರಿಸೋಕೆ ರೆಡಿನಾ ಅಂತಿದ್ದಾರೆ ನೆಟ್ಟಿಗರು

 

click me!