
ರಾರಯಪರ್ ಚಂದನ್ ಶೆಟ್ಟಿಹೊಸ ವರ್ಷ ಸ್ವಾಗತಕ್ಕೆ ಭರ್ಜರಿ ‘ಪಾರ್ಟಿ ಫ್ರೀಕ್’ ವೀಡಿಯೋ ಆಲ್ಬಂ ಜೊತೆಗೆ ಬಂದಿದ್ದಾರೆ. ‘ಇಂದು ಶನಿವಾರ ಮೈಯಲ್ಲಿ ಫುಲ್ಲು ಜೋಷಿದೆ. ನಾಳೆ ಭಾನುವಾರ ರೆಸ್ಟಿಗೆ ಫುಲ… ಡೇ ಇದೆ. ತಿನ್ನೋಕೆ ಖಾರ ಖಾರ ಚಿಕನ್ನು ಫ್ರೈ ರೆಡಿ ಇದೆ’ ಎನ್ನುವ ಸಾಲಿನೊಂದಿಗೆ ಶುರುವಾಗುವ ಹಾಡಿನಲ್ಲಿ ಚಂದನ್ ಜೊತೆಗೆ ನಿಶ್ವಿಕಾ ನಾಯ್ಡು ಮಾದಕವಾಗಿ ಹೆಜ್ಜೆ ಹಾಕಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ರಾರಯಪ್ ಸಾಂಗ್‌ಗೆ ಪತಿ ಚಂದನ್ ಜೊತೆ ಮೈ ಬಳುಕಿಸಿದ್ದಾರೆ. ಮದುವೆಯ ಬಳಿಕ ಇಂಡಸ್ಟ್ರಿಗೆ ನಿವೇದಿತಾ ಮೊದಲ ಎಂಟ್ರಿ ಈ ಹಾಡಿನ ಮೂಲಕ ಆಗಿದೆ. ನಟ ಧರ್ಮ ಮುಖ್ಯಪಾತ್ರದಲ್ಲಿ ಗಮನಸೆಳೆದಿದ್ದಾರೆ.
ಯುನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಎರಡೇ ದಿನಕ್ಕೆ ಹತ್ತರತ್ತಿರ 7 ಲಕ್ಷದಷ್ಟುಈ ಆಲ್ಬಂ ಸಾಂಗ್ ನೋಡಿ ಮೆಚ್ಚಿಕೊಂಡಿದ್ದಾರೆ. ತೆಲುಗಿನಲ್ಲೂ ಈ ರಾರಯಪ್ ಮನ್ನಣೆ ಪಡೆದಿದೆ.
ಮದುವೆಯಾದ ನಂತರ ಫ್ಯಾನ್ಸ್‌ಗೆ ಮೊದಲ ಗುಡ್ ನ್ಯೂಸ್ ರಿವೀಲ್ ಮಾಡಿದ ಚಂದನ್-ನಿವೇದಿತಾ!
ಈ ಆಲ್ಬಂನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾರಯಪರ್ ಚಂದನ್ ಶೆಟ್ಟಿ, ‘ನಾವು ಯಂಗ್ ಜನರೇಶನ್‌ಅನ್ನು ಗಮನದಲ್ಲಿಟ್ಟು ಇಂಥ ರಾರಯಪ್‌ಸಾಂಗ್ ಮಾಡ್ತೀವಿ. ಆದರೆ ಇದನ್ನು ಎಲ್ಲಾ ಜನರೂ ಕೇಳ್ತಾರೆ. ನನ್ನ ಈ ಹಿಂದಿನ ಹಾಡುಗಳಿಗೆ ಸಿಕ್ಕ ಜನಪ್ರಿಯತೆಯೇ ಇದಕ್ಕೆ ಸಾಕ್ಷಿ. ಈ ಹಾಡು ಖಂಡಿತಾ ಯೂತ್ ನ್ಯಾಶನಲ್ ಸಾಂಗ್ ಆಗುತ್ತೆ’ ಎಂದರು.
ಈ ಹಾಡಿಗೆ ಬಂಡವಾಳ ಹೂಡಿರುವ ಯುನೈಟೆಡ್ ಪ್ರೊಡಕ್ಷನ್‌ನ ಚೈತನ್ಯ ಲಕಂಸಾನಿ ಮಾತನಾಡಿ, ‘ನಾನು ಮೈನಿಂಗ್ ಬ್ಯುಸಿನೆಸ್ ಮಾಡುತ್ತಿದ್ದೆ. ಆರಂಭದಲ್ಲಿ ನಮ್ಮ ಬ್ಯಾನರ್ ಮೂಲಕ ಸಿನಿಮಾ ಮಾಡುವ ಯೋಚನೆ ಇತ್ತು. ಇದನ್ನು ಅನುಭವಿ ನಟ ಧರ್ಮ ಅವರಲ್ಲಿ ಚರ್ಚಿಸಿದ್ದೆ. ಆಗ ಸಿನಿಮಾಕ್ಕೂ ಮೊದಲು ಈಗ ಟ್ರೆಂಡ್‌ನಲ್ಲಿರುವ ವೀಡಿಯೋ ಆಲ್ಬಂ ಮಾಡುವ ಯೋಚನೆ ಬಂತು. ಅದ್ದೂರಿಯಾಗಿ ಈ ಆಲ್ಬಂ ಮಾಡಿದ್ದೇವೆ. 200ಕ್ಕೂ ಅಧಿಕ ಜನ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದರು.
ಜ್ಯೂಸ್ ಸ್ಟ್ರಾನಲ್ಲಿ ಮ್ಯೂಸಿಕ್ ಬೀಟ್ಸ್: ವೈಫ್ ಜೊತೆ ರಸಂ ಮಾಡ್ಕೊಂಡ್ ಕೂತಿದ್ಯಾ ಎಂದವನಿಗೆ ಚಂದನ್ ಖಡಕ್ ಆನ್ಸರ್
ನಟ ಧರ್ಮ ಮಾತನಾಡಿ, ‘ ಒಂದು ಸಣ್ಣ ಸಿನಿಮಾದಷ್ಟೇ ಬಂಡವಾಳ ಈ ರಾರಯಪ್ ಸಾಂಗ್‌ಗೆ ಖರ್ಚಾಗಿದೆ. ಶೆರ್ಟಾನ್ ಹೊಟೇಲ್‌ನಲ್ಲಿ ಇಡೀ ಹಾಡಿನ ಚಿತ್ರೀಕರಣ ನಡೆದಿದ್ದು, 35 ರಿಂದ 40 ಲಕ್ಷ ರು. ಖರ್ಚು ಮಾಡಿದ್ದೇವೆ. ಮುಂದೆ ಸಿನಿಮಾ ಇನ್ನಷ್ಟುಅದ್ದೂರಿಯಾಗಿ ಬರಲಿದೆ’ ಎಂದರು.
‘ಪಾರ್ಟಿ ಫ್ರೀಕ್ ರಾರಯಪ್ ಸಾಂಗ್‌ಅನ್ನು ಚಂದನ್ ಶೆಟ್ಟಿಬರೆದಿದ್ದು, ಅವರೇ ಸಂಗೀತ ನೀಡಿ, ಹಾಡಿ, ರಾರಯಪ್‌ನ ಭಾಗವೂ ಆಗಿದ್ದಾರೆ. ಇದರಲ್ಲಿ 80ಕ್ಕೂ ಅಧಿಕ ರಷ್ಯನ್ ಡ್ಯಾನ್ಸರ್‌ಗಳಿರೋದು ವಿಶೇಷ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ರಂಜಿತ್ ಸಂಕಲನವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.