
ಕ್ಯೂಟ್ ಬಿಗ್‌ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಕಪಲ್. ಚಂದದ ವಿಡಿಯೋ, ಫೋಟೋಸ್‌ಗಳನ್ನು ಶೇರ್ ಮಾಡಿಕೊಳ್ತಿರ್ತಾರೆ ಈ ಜೋಡಿ.
ಈ ಬಾರಿ ನಿವೇದಿತಾ ಗೌಡ ಶೇರ್ ಮಾಡಿರೋ ವಿಡಿಯೋ ಹೇಗಿದೆ ಗೊತ್ತಾ..? ಗಂಡ ತಮಗೆ ಕಿಸ್ ಮಾಡೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ಈಕೆ. ಆಶ್ಚರ್ಯ ಆಯ್ತಾ..?
ನಿವೇದಿತಾ ಗೌಡ ಮೇಲೆ ಹಲ್ಲೆ; ಮಾಲೀಕರಿಗೆ ಸಹಾಯ ಮಾಡಿದ ನಾಯಿ!
ಹೌದು, ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾಗೆ ಕಿಸ್ ಮಾಡೋ ವಿಡಿಯೋ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಲೇ ಇರೋ ನಿವೇದಿತಾ ಈಗ ಪತಿಯ ಜೊತೆ ರೊಮ್ಯಾಂಟಿಕ್ ರೀಲ್ಸ್ ಶೇರ್ ಮಾಡಿದ್ದಾರೆ.
ಚಂದದ ಮ್ಯೂಸಿಕ್‌ಗೆ ಯಂಗ್ ಜೋಡಿ ಸ್ಟೆಪ್ ಹಾಕಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್‌ನಲ್ಲಿ ಸಖತ್ ಆಗಿ ಕಾಣಿಸಿದೆ ಈ ಜೋಡಿ. ಅಂತೂ ಡ್ಯಾನ್ಸ್ ಮಾಡುತ್ತಲೇ ಕ್ಯಾಮೆರಾ ಮುಂದೆ ಪತ್ನಿಗೆ ಕಿಸ್ ಮಾಡಿದ್ದಾರೆ ಚಂದನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.