
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ರಾಜಾ ರಾಣಿ' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಒಂದು ಜೋಡಿ. ನಿನ್ನೆ ಹಾಗೂ ಇಂದು ಪ್ರಸಾರವಾಗುತ್ತಿರುವ ಎಪಿಸೋಡ್‌ನಲ್ಲಿ ಪ್ರತಿ ಜೋಡಿಯೂ ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ತಮ್ಮಲ್ಲಿರುವ ನೋವುಗಳನ್ನು ಹೇಳಿಕೊಳ್ಳುತ್ತಾರೆ. ಚಂದನ್ ಶೆಟ್ಟಿ ಕೂಡ ಬಹುದಿನಗಳಿಂದ ಕಾಡುತ್ತಿರುವ ನೋವನ್ನು ಹಂಚಿಕೊಂಡಿದ್ದಾರೆ.
2019ರಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಯುವ ದಸರಾದಲ್ಲಿ ಚಂದನ್ ಶೆಟ್ಟಿ ತಮ್ಮ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡುತ್ತಾರೆ. ಕಾರ್ಯಕ್ರಮಕ್ಕೆ ನಿವೇದಿತಾಗೆ ಆಹ್ವಾನ ನೀಡದಿದ್ದರೂ ಆಗಮಿಸಿದ್ದರು ಹಾಗೂ ತಮ್ಮ ವೈಯಕ್ತಿಕ ವಿಚಾರಗಳಿಗೆ ವೇದಿಕೆ ಬಳಸಿಕೊಂಡರು ಎಂಬ ಆರೋಪ ಕೇಳಿ ಬಂದಿತ್ತು. ಮೂರ್ನಾಲ್ಕು ದಿನ ಈ ವಿಚಾರವೇ ದೊಡ್ಡ ಸುದ್ದಿ ಆಗಿತ್ತು.
'ನಾನು ವೇದಿಕೆ ಮೇಲೆ ಪ್ರಪೋಸ್ ಮಾಡಿದೆ, ಅದು ನಿಜಕ್ಕೂ ಕನಸಿನಂತಿತ್ತು. ಆದರೆ ಮರುದಿನ ವಿವಾದ ಆಯ್ತು. ಸಂಪೂರ್ಣ ಖುಷಿ ಒಂದೇ ಕ್ಷಣದಲ್ಲಿ ಹಾಳಾಗೋಯ್ತು' ಎಂದು ನಿವೇದಿತಾ ಹೇಳುತ್ತಾರೆ. 'ಆ ದಿನ ನಾನೊಬ್ಬ ತೆಗೆದುಕೊಂಡ ನಿರ್ಧಾರ...ಇವತ್ತು ಆ ವಿಡಿಯೋ ನೋಡಿದರೆ ಬೇಸರವಾಗುತ್ತದೆ' ಎಂದು ಚಂದನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ.
ಇದಾದ ನಂತರ ಇಬ್ಬರೂ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಆನಂತರ ಅದ್ಧೂರಿಯಾಗಿ ಮದುವೆ ಆದರು. ಮದುವೆ ನಂತರ ಲಾಕ್‌ಡೌನ್ ಆದ ಕಾರಣ ಸಂಪೂರ್ಣ ಲಾಕ್‌ಡೌನ್ ಮನೆಯಲ್ಲಿ ಅಡುಗೆ, ಮನೆ ಕೆಲಸ, ಮ್ಯೂಸಿಕ್ ಅಂತ ಸಮಯ ಕಳೆದೆವು ಎಂದು ವೇದಿಕೆ ಮೇಲೆ ತಮ್ಮ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.