7 ದಿನದಲ್ಲಿ 100 ಕಿ.ಮೀ ಓಡಿ 5 ಕೆಜಿ ತೂಕ ಇಳಿಸಿಕೊಂಡ ಚಂದನ್ ಕುಮಾರ್!

By Suvarna News  |  First Published Jul 6, 2021, 1:39 PM IST

ಎಸ್‌ಪಿ ವಿಕ್ರಾಂತ್‌ ಆಗಿ ಬರುತ್ತಿರುವ ಚಂದನ್ ಕುಮಾರ್ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 


ನಟಿ ಕವಿತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಚಂದನ್ ಕುಕ್ಕು ವಿತ್ ಕಿರಿಕ್ಕು ಅಡುಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆನಂತರ ಚಂದನ್ ಕೈಯಲ್ಲಿ ಯಾವ ಪ್ರಾಜೆಕ್ಟ್ ಇದೆ ಎನ್ನುವಾಗಲೇ ಖಡಕ್ ಪೊಲೀಸ್ ಲುಕ್ ಹಾಗೂ ತೂಕ ಇಳಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮರಳಿ ಮನಸ್ಸಾಗಿ' ಧಾರಾವಾಹಿಯಲ್ಲಿ ಚಂದನ್ ಎಸ್‌ಪಿ ವಿಕ್ರಾಂತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹಿಂದಿ 'ಘುಮ್ ಹೈ ಕಿಸಿಕೆ ಪ್ಯಾರ್ ಮೆಯಿನ್' ರಿಮೇಕ್ ಎನ್ನಲಾಗಿದೆ. 'ಪ್ರತಿಯೊಬ್ಬ ಕಲಾವಿದನ ಕನಸಿನ ಪಾತ್ರ ಇದಾಗಿರುತ್ತದೆ. ವಿಕ್ರಾಂತ್ ಎ ನಾಯಕ್ ಎಸ್‌ಪಿ,' ಎಂದು ಚಂದನ್ ಬರೆದುಕೊಂಡಿದ್ದಾರೆ.

Tap to resize

Latest Videos

undefined

ಮಾಸ್ಕ್ ಧರಿಸಿ ಸರಳ ಮದುವೆಯಾದ ಚಂದನ್-ಕವಿತಾ, ಶುಭಾಶಯ 

ಇನ್ನು ಲಾಕ್‌ಡೌನ್‌ನಲ್ಲಿ ಚಂದನ್ ಕೊಂಚ ದಪ್ಪಗಾಗಿದ್ದಾರೆ. ಪಾತ್ರಕ್ಕೆ ಫಿಟ್ ಆಗಿರಬೇಕೆಂದು 7 ದಿನದಲ್ಲಿ 100 ಕಿ.ಮೀ ಓಡಿ 5 ಕೆಜೆ ತೂಕ ಇಳಿಸಿಕೊಂಡಿದ್ದಾರೆ.  ತೂಕ ಇಳಿಸಿಕೊಳ್ಳಲು ಶಾರ್ಟ್‌ ಕಟ್‌ ಬೇಕೆಂದರೆ ಕಿಲೋಮಿಟರ್‌ಗಟ್ಟಲೆ ಓಡುವುದು. ಇದು ಸುಲಭವಲ್ಲ,' ಎಂದು ಚಂದನ್ ಬರೆದುಕೊಂಡಿದ್ದಾರೆ.  7 ದಿನಗಳಲ್ಲಿ ತೂಕ ಇಳಿಸಿಕೊಂಡಿರುವುದು ಸಾಧನೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಇದು ಲಾಕ್‌ಡೌನ್‌ ಎಫೆಕ್ಟ್ ಆಲ್ಲ, ಮ್ಯಾರೇಜ್ ಎಫೆಕ್ಟ್‌ ಎಂದು ಕಾಲೆಳೆದಿದ್ದಾರೆ

 

click me!