ಬಿಗ್ ಬಾಸ್ ಮನೆಯಿಂದ ಮಧ್ಯದಲ್ಲೇ ಹೊರಬಂದ ಚೈತ್ರಾ ಕುಂದಾಪುರ

By Sathish Kumar KH  |  First Published Dec 3, 2024, 1:24 PM IST

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅರ್ಧದಲ್ಲಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಘಟನೆ ಕಿರುತೆರೆ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.


ಬೆಂಗಳೂರು (ಡಿ.03): ರಾಜ್ಯದಲ್ಲಿ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ.ವಂಚನೆ ಮಾಡಿದ ಕೇಸಿನಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಸ್ಪರ್ಧಿಯಾಗಿ ಹೋಗಿದ್ದಾರೆ. ಆದರೆ, ಇದೀಗ ಟಿಕೆಟ್ ವಂಚನೆ ಕೇಸಿನಲ್ಲಿ ಕೋರ್ಟ್ ಕೇಸಿನ ವಿಚಾರಣೆಗೆ ಚೈತ್ರಾ ಕುಂದಾಪುರ ಅವರು ಹೊರಗೆ ಬಂದಿದ್ದಾರೆ.

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗ್‌ನಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ಪಡದು ವಂಚನೆ ಮಾಡಿದ್ದ ಪ್ರಕರಣ ಬಹು ದಿನಗಳ ಕಾಲ ನೆನಪುಳಿಯುವಂತಹ ಕೇಸ್ ಆಗಿದೆ. ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ವಂಚಿಸಿದ ಕೇಸಿನಲ್ಲಿ ಜೈಲು ಸೇರಿದ್ದರು. ಕೆಲವು ತಿಂಗಳ ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದರು. ಇದಾದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಸುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದರು. ಇದೀಗ ಟಿಕೆಟ್ ವಂಚನೆ ಕೇಸಿನಲ್ಲಿ ವಿಚಾರಣೆ ಎದುರಿಸಲು ಹೊರಗೆ ಬಂದಿದ್ದಾರೆ.

Tap to resize

Latest Videos

ಇಂದು ಕೋರ್ಟ್‌ಗೆ ಹಾಜರಾದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ವಿಚಾರಣೆಯನ್ನು ಎದುರಿಸಿದ್ದಾರೆ. ಚೈತ್ರ ಕುಂದಾಪುರ, ಶ್ರೀಕಾಂತ್, ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿ ಸೇರಿದಂತೆ ಮೂವರು ಆರೋಪಿಗಳು ವಂಚನೆ ಮಾಡಿದ್ದರು. ಈ ಪೈಕಿ ಇಂದು ಚೈತ್ರಾ ಕುಂದಾಪುರ ಸೇರಿದಂತೆ ಮೂವರು ಆರೋಪಿಗಳು ಕೋರ್ಟ್‌ಗೆ ಹಾಜರು ಆಗಿದ್ದರು. ಇನ್ನು ಕೋರ್ಟ್‌ಗೆ ಹಾಜರಾಗಲೇಬೇಕು ಎಂಬ ವಾರೆಂಟ್ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರ ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೂರು ಕಾಸಿಗೂ ಬೆಲೆ ಬಾಳದ ಚೈತ್ರಾ ಕುಂದಾಪುರ!

ಬಿಗ್ ಬಾಸ್ ವಿಚಾರಣೆ 2025ರ ಜ.13ಕ್ಕೆ ಮುಂದೂಡಿಕೆ:
ಚೈತ್ರಾ ಕುಂದಾಪುರ ಅವರು ನೇರವಾಗಿ ಬಿಗ್ ಬಾಸ್ ಮನೆಯಿಂದ ಬಿಗ್ ಬಾಸ್ ರಿಯಾಲಿಟಿ ಶೋನ ಕಾರಿನಲ್ಲಿನೇ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ಗೆ ಬಂದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಈ ವೇಳೆ ವಾರೆಂಟ್ ರೀ ಕಾಲ್ ಮಾಡಿಸಿಕೊಂಡಿದ್ದಾರೆ. ಇದಾದ ನಂತರ ಚೈತ್ರಾ ಅವರ ವಿಚಾರಣೆಯನ್ನು ಕೋರ್ಟ್‌ನಿಂದ ಜನವರಿ 13ಕ್ಕೆ ಮುಂದೂಡಿಕೆ ಮಾಡಲಾಗಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ 64 ದಿನಗಳನ್ನು ಕಳೆದಿರುವ ಚೈತ್ರಾ ಅವರು ಇನ್ನು 36 ದಿನಗಳನ್ನು ಕಳೆದರೆ ಬಿಗ್ ಬಾಸ್ ರಿಯಾಲಿಟಿ ಶೋ 100 ದಿನಗಳನ್ನು ಪೂರೈಸಲಿದ್ದಾರೆ. ಹೀಗಾಗಿ, ಮುಂದಿನ ವಿಚಾರಣೆ ವೇಳೆಗೆ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಹೊರಗಿರುತ್ತಾರೆ.

ಕೋರ್ಟ್ ನಿಂದ ಬಿಗ್ ಬಾಸ್ ಮನೆಗೆ ಹೋಗ್ತಾರಾ ಚೈತ್ರ? 
ಈ ಹಿಂದೆ ಬಿಗ್ ಬಾಸ್ ಮನೆಯಲ್ಲೇ ಅರೆಸ್ಟ್ ಆಗಿ ಜೈಲು ಸೇರಿದ್ದ ವರ್ತೂರು ಸಂತೋಷ್, ಜೈಲಿಂದ ಬಿಡುಗಡೆ ಬಳಿಕ ಮತ್ತೆ ಬಿಗ್ ಬಾಸ್ ಮನೆಗೆ ಹೋಗಿದ್ದರು. ಇದೀಗ ವಾರೆಂಟ್ ಜಾರಿ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋ ಚೈತ್ರ ಅವರು ಮನೆಗೆ ಹೋಗಿ ಬರ್ತಾರಾ ಎಂಬ ಅನುಮಾನ ಬರುವುದು ಸಹಜ. ಆದರೆ, ಇದೀಗ ಬಿಗ್ ಬಾಸ್ ಕಾರಿನಲ್ಲಿಯೇ ನೇರವಾಗಿ ಕೋರ್ಟ್‌ಗೆ ಬಂದಿರುವ ಚೈತ್ರಾ ಅವರನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಕಾಪಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆ ಮುಗಿಸಿ ಪುನಃ ಬಿಗ್ ಬಾಸ್ ಮನೆಗೆ ವಾಪಸ್ ಆಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಎಂಎಲ್ಎ ಸೀಟ್ ಡೀಲ್ ಪ್ರಕರಣ: ವಜ್ರದೇಹಿ ಸ್ವಾಮೀಜಿಗೆ ಸಿಸಿಬಿ ಬುಲಾವ್ ನೋಟಿಸ್‌!

click me!