
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿ ಇದೇ ತಿಂಗಳು ನಾಲ್ಕು ವರ್ಷ ಪೂರೈಸಿದೆ. ಕಳೆದ ತಿಂಗಳು 1000 ಕಂತುಗಳನ್ನು ಪೂರೈಸಿದೆ. ಇಡೀ ತಂಡ ಡಬಲ್ ಸೆಲೆಬ್ರೇಶನ್ ಮಾಡಿದೆ. ಕೊರೋನಾ ಲಾಕ್‌ಡೌನ್ ಇಲ್ಲದಿದ್ದರೆ ಕೇಕ್ ಕತ್ತರಿಸಿ ಸಂಭ್ರಮಿಸಲಾಗುತ್ತಿತ್ತು.
1000 ಕಂತು ಪೂರೈಸಿದ ಬ್ರಹ್ಮಗಂಟು;ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು ಸಂಭ್ರಮ!
'ಗುಂಡಮ್ಮ' ಪಾತ್ರದಲ್ಲಿ ಗೀತಾ ಮಿಂಚುತ್ತಿದ್ದರೆ, ಭರತ್ ಬೋಪಣ್ಣ ಲಕ್ಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಷಕರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಿರ್ದೇಶಕ ಟಿ.ಎಸ್. ನಾಗಾಭರಣ್ ಕಮ್ ಬ್ಯಾಕ್ ಮಾಡಿದ್ದಾರೆ. ಗೀತಾ ಪ್ರಭಾಕರ್, ವನಿತಾ ವಾಸು, ಶೋಭಾ ಶಿವಣ್ಣ, ಹರ್ಷ, ಪ್ರಥಮ್ ಪ್ರಸಾದ್ ಸೇರಿದಂತೆ ಅನೇಕ ಕಲಾವಿದರು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ನಾಲ್ಕು ವರ್ಷಗಳನ್ನು ಪೂರೈಸಿದ ಪ್ರಯುಕ್ತ ಭರತ್ ತಮ್ಮ ಪಾತ್ರದ ಎಂಟ್ರಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನನ್ನ ಪಾತ್ರ ಪರಿಚಯದ ವಿಡಿಯೋ ಇದು. ನಾನು ಲಕ್ಕಿಯಾಗಿ ನಾಲ್ಕು ವರ್ಷ. ನಿಮ್ಮಲ್ಲರ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ನಾನು ಋಣಿ,' ಎಂದು ಬರೆದುಕೊಂಡಿದ್ದಾರೆ.
ಧಾರಾವಾಹಿನಿಂದ ನಟಿ ಗೀತಾ ಹೊರ ಬಂದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಇನ್ನು ಕೆಲವು ದಿನಗಳ ಹಿಂದೆ ಭರತ್ ಬೋಪಣ್ಣ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಸಂಭ್ರಮದಲ್ಲಿ ತೇಲುತ್ತಿರುವ ಇಡೀ ತಂಡಕ್ಕೆ ಶುಭಾಶಯಗಳನ್ನು ತಿಳಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.