ಆಟೋ ಡ್ರೈವರ್ ಮಗ ಈಗ ಡೈಮೆಂಡ್ ಉಂಗುರ ತಗೊಂಡ: ನಿಶ್ಚಿತಾರ್ಥಕ್ಕೆ ರೆಡಿಯಾದ ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ

Published : Jul 31, 2026, 12:40 PM IST
brindavana actor varun aradhya buys diamond ring for engagement

ಸಾರಾಂಶ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬೃಂದಾವನ' ಖ್ಯಾತಿಯ ನಟ ವರುಣ್ ಆರಾಧ್ಯ ಮತ್ತು ನಮ್ರತಾ ಸದ್ಯ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಆಟೋ ಡ್ರೈವರ್ ಮಗ ಈಗ ಡೈಮೆಂಡ್ ಉಂಗುರ ತಗೊಳ್ಳುವ ಹಂತಕ್ಕೆ ಬೆಳದಿದ್ದು, ವೀಕ್ಷರ ಮನಗೆದ್ದಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬೃಂದಾವನ' ಖ್ಯಾತಿಯ ನಟ ವರುಣ್ ಆರಾಧ್ಯ ಮತ್ತು ನಮ್ರತಾ ಗೌಡ ಸದ್ಯ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಜೋಡಿ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವರುಣ್ ತಮ್ಮ ಭಾವಿ ಪತ್ನಿಗಾಗಿ ದುಬಾರಿ ವಜ್ರದ ಉಂಗುರವನ್ನು ಖರೀದಿಸಿದ್ದಾರೆ. ಆಟೋ ಡ್ರೈವರ್ ಮಗನಾಗಿ ಜೀವನ ಆರಂಭಿಸಿ, ಇಂದು ಲಕ್ಷಾಂತರ ರೂಪಾಯಿ ಬೆಲೆಯ ಡೈಮೆಂಡ್ ರಿಂಗ್ ಖರೀದಿಸುವ ಹಂತಕ್ಕೆ ಬೆಳೆದಿರುವ ವರುಣ್ ಅವರ ಜರ್ನಿ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಕುಟುಂಬದ ಜೊತೆ ಎಂಗೇಜ್‌ಮೆಂಟ್ ರಿಂಗ್ ಶಾಪಿಂಗ್

ವರುಣ್ ಆರಾಧ್ಯ ತಮ್ಮ YouTube ಚಾನೆಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ನಿಶ್ಚಿತಾರ್ಥದ ಉಂಗುರ ಖರೀದಿಸಲು ಕುಟುಂಬದೊಂದಿಗೆ ಶಾಪಿಂಗ್‌ಗೆ ತೆರಳಿರುವ ದೃಶ್ಯಗಳಿವೆ. ವೀಡಿಯೊದ ಆರಂಭದಲ್ಲಿ ವರುಣ್ ಮತ್ತು ನಮ್ರತಾ ತಮಾಷೆಯಾಗಿ ಮಾತನಾಡುತ್ತಾ, ತಮ್ಮ ನಿಶ್ಚಿತಾರ್ಥದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಮ್ರತಾ ತಮಗೆ ಎಲ್ಲರಿಗಿಂತ ವಿಭಿನ್ನವಾಗಿರುವ, ಸ್ಪೆಷಲ್ ಮತ್ತು ಯೂನಿಕ್ ಡಿಸೈನ್‌ನ ಉಂಗುರ ಬೇಕು ಎಂದು ಹೇಳಿದ್ದಾರೆ.

ಚಿನ್ನದ ಅಂಗಡಿಯಲ್ಲಿ ಹಲವು ರಿಂಗ್‌ಗಳ ಪರಿಶೀಲನೆ

ವರುಣ್ ಮತ್ತು ನಮ್ರತಾ ತಮ್ಮ ಕುಟುಂಬದ ಸದಸ್ಯರೊಂದಿಗೆ ಚಿನ್ನದ ಅಂಗಡಿಗೆ ತೆರಳಿ ಹಲವು ಬಗೆಯ ಉಂಗುರಗಳನ್ನು ಪರಿಶೀಲಿಸಿದ್ದಾರೆ. ಇಬ್ಬರೂ ಮ್ಯಾಚಿಂಗ್ ಉಂಗುರಗಳನ್ನು ಖರೀದಿಸಬೇಕಾ ಅಥವಾ ವಿಭಿನ್ನ ಡಿಸೈನ್‌ಗಳನ್ನು ಆಯ್ಕೆ ಮಾಡಬೇಕಾ ಎಂಬುದರ ಬಗ್ಗೆಯೂ ಚರ್ಚಿಸಿದ್ದಾರೆ. ನಮ್ರತಾ ಅವರಿಗೆ ರೋಸ್ ಗೋಲ್ಡ್ ಜೊತೆಗೆ ಡೈಮೆಂಡ್ ಇರುವ ಉಂಗುರ ಇಷ್ಟ ಎಂಬುದು ಈ ವೇಳೆ ತಿಳಿದುಬಂದಿದೆ.

4 ಲಕ್ಷ, 8 ಲಕ್ಷ ರೂ. ಬೆಲೆ ನೋಡಿ ಶಾಕ್

ಡೈಮೆಂಡ್ ರಿಂಗ್‌ಗಳನ್ನು ನೋಡುತ್ತಿದ್ದ ವೇಳೆ ವರುಣ್ ಅವರ ಅಕ್ಕ ಕೆಲವು ಉಂಗುರಗಳ ಬೆಲೆ ಕೇಳಿ ಅಚ್ಚರಿಗೊಂಡಿದ್ದಾರೆ. 4 ಲಕ್ಷ ಹಾಗೂ 8 ಲಕ್ಷ ರೂಪಾಯಿ ಬೆಲೆಯ ಉಂಗುರಗಳನ್ನು ನೋಡಿದ ಅವರು, ಇಷ್ಟೊಂದು ದುಬಾರಿ ಉಂಗುರಗಳನ್ನು ಯಾರು ಖರೀದಿಸುತ್ತಾರೆ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಇತ್ತ ವರುಣ್ ಮತ್ತು ನಮ್ರತಾ ಕೂಡ ಹಲವು ಉಂಗುರಗಳ ಬೆಲೆ, ಡಿಸೈನ್ ಮತ್ತು ತಮ್ಮ ಆಯ್ಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೊನೆಗೂ ಡೈಮೆಂಡ್ ರಿಂಗ್ ಫೈನಲ್

ಬಹಳಷ್ಟು ಡಿಸೈನ್‌ಗಳನ್ನು ಪರಿಶೀಲಿಸಿದ ಬಳಿಕ ಕೊನೆಗೂ ವರುಣ್ ಮತ್ತು ನಮ್ರತಾ ತಮ್ಮ ನಿಶ್ಚಿತಾರ್ಥಕ್ಕೆ ಇಷ್ಟವಾದ ಉಂಗುರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಮ್ರತಾ ಅವರು 8 ವಜ್ರಗಳನ್ನು ಹೊಂದಿರುವ ರೋಸ್ ಗೋಲ್ಡ್ ಉಂಗುರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವರುಣ್ ಕೂಡ ತಮ್ಮ ನಿಶ್ಚಿತಾರ್ಥಕ್ಕಾಗಿ ಸ್ಪೆಷಲ್ ಡೈಮೆಂಡ್ ರಿಂಗ್‌ವೊಂದನ್ನು ಫೈನಲ್ ಮಾಡಿದ್ದಾರೆ. ಇಬ್ಬರೂ ಲಕ್ಷಾಂತರ ರೂಪಾಯಿ ಮೌಲ್ಯದ ಉಂಗುರಗಳನ್ನು ಆಯ್ಕೆ ಮಾಡಿಕೊಂಡಿರುವುದು ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಆಟೋ ಡ್ರೈವರ್ ಮಗನಿಂದ ಡೈಮೆಂಡ್ ರಿಂಗ್ ತನಕ

ವರುಣ್ ಆರಾಧ್ಯ ಅವರ ಜೀವನದ ಜರ್ನಿ ಕೂಡ ಸಾಕಷ್ಟು ಸ್ಫೂರ್ತಿದಾಯಕವಾಗಿದೆ. ಆಟೋ ಡ್ರೈವರ್ ಕುಟುಂಬದಿಂದ ಬಂದಿರುವ ವರುಣ್, ತಮ್ಮ ಕಠಿಣ ಪರಿಶ್ರಮ ಮತ್ತು ಕಿರುತೆರೆಯಲ್ಲಿನ ಸಾಧನೆಯ ಮೂಲಕ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಒಂದು ಕಾಲದಲ್ಲಿ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ವರುಣ್, ಇದೀಗ ತಮ್ಮ ಭಾವಿ ಪತ್ನಿಗಾಗಿ ಲಕ್ಷಾಂತರ ರೂಪಾಯಿ ಬೆಲೆಯ ಡೈಮೆಂಡ್ ರಿಂಗ್ ಖರೀದಿಸುವ ಹಂತಕ್ಕೆ ತಲುಪಿರುವುದು ಅವರ ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರವಾಗಿದೆ. ಅವರ ಈ ಬೆಳವಣಿಗೆ ಅನೇಕರಿಗೆ ಸ್ಫೂರ್ತಿಯಾಗಿದೆ.

ನಿಶ್ಚಿತಾರ್ಥ, ಮದುವೆ ಬಳಿಕ?

ಒಟ್ಟಿನಲ್ಲಿ, 'ಬೃಂದಾವನ' ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ವರುಣ್ ಆರಾಧ್ಯ ಮತ್ತು ನಮ್ರತಾ ಗೌಡ ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ನಿಶ್ಚಿತಾರ್ಥಕ್ಕಾಗಿ ಡೈಮೆಂಡ್ ರಿಂಗ್ ಖರೀದಿಸಿರುವ ವಿಚಾರದ ಜೊತೆಗೆ, ಮದುವೆಯ ಬಗ್ಗೆಯೂ ವರುಣ್ ನೀಡಿರುವ ಸುಳಿವು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಜೋಡಿಯ ನಿಶ್ಚಿತಾರ್ಥ ಮತ್ತು ಮದುವೆ ಯಾವಾಗ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಸತ್ಯ ತಿಳಿಯದೇ ಪ್ರಚಾರ ಮಾಡಬೇಡಿ': ರಕ್ಷಿತಾ ಶೆಟ್ಟಿ ಏಕಾಏಕಿ ಹೀಗೆ ಹೇಳಲು ಕಾರಣವೇನು?
ಜಗಳ ಆಯ್ತು, ಮಾತು ಬಿಟ್ವಿ; ಕೊನೆಗೂ ಬಾಯ್ ಫ್ರೆಂಡ್ ಹೆಸರು ರಿವೀಲ್ ಮಾಡಿದ ಕಮಲಿ ಸೀರಿಯಲ್ ಅಮೂಲ್ಯಾ