ಚಂದನ್​ ಶೆಟ್ಟಿ ಹಾಡಿಗೆ ಸಕತ್​ ಸ್ಟೆಪ್​ ಹಾಕಿ ಮೋಡಿ ಮಾಡಿದ ಬ್ರಹ್ಮಗಂಟು ದೀಪಾ-ಅಚ್ಚು: ವಿಡಿಯೋ ವೈರಲ್​

Published : Feb 10, 2025, 06:06 PM ISTUpdated : Feb 11, 2025, 10:04 AM IST
ಚಂದನ್​ ಶೆಟ್ಟಿ ಹಾಡಿಗೆ ಸಕತ್​ ಸ್ಟೆಪ್​ ಹಾಕಿ ಮೋಡಿ ಮಾಡಿದ ಬ್ರಹ್ಮಗಂಟು ದೀಪಾ-ಅಚ್ಚು: ವಿಡಿಯೋ ವೈರಲ್​

ಸಾರಾಂಶ

'ಬ್ರಹ್ಮಗಂಟು' ಧಾರಾವಾಹಿಯ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಮತ್ತು ಅರ್ಚನಾ ಪಾತ್ರಧಾರಿ ಸನ್ಮಿತಾ ಇಬ್ಬರೂ ರೀಲ್ಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ದಿಯಾ, ಬಾಲನಟಿಯಾಗಿ 'ಕಿನ್ನರಿ' ಧಾರಾವಾಹಿಯಲ್ಲಿ ನಟಿಸಿದ್ದರು. 'ಅಮ್ಮಚ್ಚಿಯೆಂಬ ನೆನಪು' ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ದೀಪಾಳ ವೇಷಭೂಷಣ ಬದಲಾಗದೇ ಇರುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

ದೀಪಾ- ಚಿರು ಇನ್ನೇನು ಡಿವೋರ್ಸ್​ ಆಗುವುದರಲ್ಲಿದೆ. ದೀಪಾಳನ್ನು ತನ್ನ ಜೀವನದಿಂದ ದೂರ ಮಾಡಲು ಚಿರು ನೋಡಿದ್ರೆ, ಆತನ ಪ್ರೀತಿಯನ್ನು ಪಡೆಯಲು ದೀಪಾ ಪ್ರಯತ್ನಿಸುತ್ತಿದ್ದಾಳೆ. ಅದಕ್ಕೆ ತಕ್ಕಂತೆ ಚಿರು ಅತ್ತಿಗೆ ಸೌಂದರ್ಯ, ಚಿರು ತಲೆಯಲ್ಲಿ ಮನೆಹಾಳು ಐಡಿಯಾ ತುಂಬಿ ಸಂಬಂಧ ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ವಿಧಿಯಾಟದ ಮುಂದೆ ಸದ್ಯ ಸೌಂದರ್ಯ ತಲೆಬಾಗಲೇ ಬೇಕಿದೆ. ಚಿರು, ದೀಪಾಳಿಂದ ದೂರವಾಗಲು ಪ್ರಯತ್ನಿಸಿದಷ್ಟೂ ದೈವಲೀಲೆ ಅವರನ್ನು ಒಂದು ಮಾಡುತ್ತಲೇ ಇದೆ. ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್​ ಕಥೆ. ಇದರಲ್ಲಿ, ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​ ಧರಿಸಿರುವ ದೀಪಾಳ ವೇಷ ಯಾವಾಗ ಬದಲು ಮಾಡುತ್ತಾರೆ ಎನ್ನುವುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಸದ್ಯ ಅದು ಬದಲಾಗುವಂತೆ ಕಾಣುತ್ತಿಲ್ಲ. 

   
ಇಂತಿಪ್ಪ ದೀಪಾಳಿಗೆ ತುಂಬು ಹೃದಯದಿಂದ ಪ್ರೀತಿ ಮಾಡ್ತಿರೋಳು ಎಂದರೆ ನಾದಿನಿ ಅರ್ಚನಾ ಮಾತ್ರ. ಅರ್ಚನಾ ದೀಪಾಳ ಮೇಲೆ ಎಲ್ಲಿಲ್ಲದ ಪ್ರೀತಿ. ಈಗ ದೀಪಾ ಮತ್ತು ಅರ್ಚನಾ ಸೇರಿ ಸಕತ್​ ರೀಲ್ಸ್​ ಮಾಡಿದ್ದಾರೆ. ದೀಪಾ  ಪಾತ್ರಧಾರಿಯಾಗಿರುವ    ದಿಯಾ ಪಾಲಕ್ಕಲ್ , ಅರ್ಚನಾ ಪಾತ್ರಧಾರಿಯಾಗಿರುವ ಸನ್ಮಿತಾ ಪಿ. ಚಂದನ್​ ಶೆಟ್ಟಿ ಅವರ ಕಾಟನ್​ ಕ್ಯಾಂಡಿ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಇನ್ನು ದೀಪಾ ಪಾತ್ರಧಾರಿಯಾಗಿರುವ ದಿಯಾ ಪಾಲಕ್ಕಲ್  ಅವರು ಸೀರಿಯಲ್​ನಲ್ಲಿ ಎಷ್ಟು ಆಂತರಿಕವಾಗಿ ಸುಂದರಿಯಾಗಿದ್ದಾರೋ, ನಿಜ ಜೀವನದಲ್ಲಿ ಬಾಹ್ಯ ಸೌಂದರ್ಯವೂ ಅವರದ್ದು. ಆದರೆ ಸೀರಿಯಲ್​ ಪಾತ್ರಕ್ಕೆ ತಕ್ಕಂತೆ ಆಕೆಗೆ ಮೇಕಪ್​ ಮಾಡುವ ಮೂಲಕ ಎಷ್ಟು ಕೆಟ್ಟಿದ್ದಾಗಿ ತೋರಿಸಲು ಸಾಧ್ಯವೋ ಅಷ್ಟು ತೋರಿಸಲಾಗುತ್ತಿದೆ. ಆದರೆ ಈಕೆಯ ಒಳ್ಳೆಯತನದ ಮುಂದೆ ಧಾರಾವಾಹಿಯಲ್ಲಿ ಸೌಂದರ್ಯ ವೀಕ್ಷಕರಿಗೆ ಗಣನೆಗೆ ಬರುವುದೇ ಇಲ್ಲ. 

ಹಿಂದಿಯಲ್ಲಿ ಒಂದು ಶಬ್ದ ಹೇಳಿ ಎಂದ್ರೆ ಬ್ರಹ್ಮಗಂಟು ಪೆದ್ದಿ ದೀಪಾ ಹೀಗೆ ಹೇಳೋದಾ? ವಿಡಿಯೋ ವೈರಲ್

ಇಂತಿಪ್ಪ ದಿಯಾ ಪಾಲಕ್ಕಲ್​ ಅವರು ಸೋಷಿಯಲ್​  ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದು, ರೀಲ್ಸ್​ ಮಾಡುತ್ತಲೇ ಇರುತ್ತಾರೆ.   ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು.  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ  ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. 

ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ.   2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. ಇನ್ನು ಅರ್ಚನಾ ಪಾತ್ರಧಾರಿಯಾಗಿರುವ ಸನ್ಮಿತಾ ಪಿ. ಕೂಡ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ರೀಲ್ಸ್​ ಮಾಡುತ್ತಿರುತ್ತಾರೆ. ಇವರಿಬ್ಬರ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಡೈರೆಕ್ಟ್ರು ಹೇಳಿದ್ರೂ ಕೇಳ್ದೇ ನನ್ ಪರವಾಗಿನೇ ಇರ್ಬೇಕು ಎಂದು ಲೈವ್‌ನಲ್ಲೇ ಚಿರುಗೆ ಧಮ್ಕಿ ಹಾಕೋದಾ ಸೌಂದರ್ಯ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!