
ಕಿರುತೆರೆ ನಟಿ ಕೀರ್ತಿ ಭಟ್ ಇತ್ತೀಚೆಗೆ ತಮ್ಮ ಬ್ರೇಕಪ್ ಮಾಡಿಕೊಂಡಿರೋದಾಗಿ ಹೇಳಿದ್ದರು. ಆದರೆ ನಾನು ಮದುವೆಯಾಗಲು ಸಿದ್ಧನಿದ್ದೆ, ಆದರೂ ಕೀರ್ತಿಯೇ ತನ್ನನ್ನು ಬಿಟ್ಟು ಹೋದಳು ಎಂದು ಮಾಜಿ ಬಾಯ್‌ಫ್ರೆಂಡ್ ಕಾರ್ತಿಕ್ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಕೀರ್ತಿ ಭಟ್ ಅವರು 'ಮನಸಿಚ್ಚಿ ಚೂಡು', 'ಕಾರ್ತಿಕ ದೀಪಂ' ನಂತಹ ಸೀರಿಯಲ್‌ಗಳಿಂದ ಬಹಳ ಜನಪ್ರಿಯರಾದರು. ನಂತರ ಬಿಗ್ ಬಾಸ್ ಸೀಸನ್ 6ರಲ್ಲಿಯೂ ಭಾಗವಹಿಸಿದ್ದರು. ಆ ಸೀಸನ್‌ನಲ್ಲಿ ಕೀರ್ತಿ ಟಾಪ್ 3 ತಲುಪಿದ್ದರು. ಬಿಗ್ ಬಾಸ್‌ನಿಂದ ಹೊರಬಂದ ಕೆಲವೇ ದಿನಗಳಲ್ಲಿ ನಟ, ನಿರ್ದೇಶಕ ವಿಜಯ್ ಕಾರ್ತಿಕ್ ಜೊತೆಗೆ ಲವ್‌ನಲ್ಲಿ ಇರೋದಾಗಿ ಹೇಳಿದ್ದರೂ. ಆಮೇಲೆ ಇಬ್ಬರೂ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ಟಿವಿ ಶೋಗಳಿಗೆ ಜೋಡಿಯಾಗಿ ಬಂದಿದ್ದರು. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವಾಗಲೇ, ಇದ್ದಕ್ಕಿದ್ದಂತೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಿದ್ದೇವೆ ಎಂದು ಕೀರ್ತಿ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿ ಶಾಕ್ ನೀಡಿದ್ದರು.
ಕೀರ್ತಿ ಸೀರಿಯಲ್ ಮೂಲಕ ಪರಿಚಿತರಾಗಿದ್ದರೂ, ತಮ್ಮ ಜೀವನ ಕಥೆಯಿಂದ ಹೆಚ್ಚು ಜನರ ಮನಗೆದ್ದಿದ್ದರು. ಮಂಗಳೂರು ಮೂಲದ ಕೀರ್ತಿ ಭಟ್ ಅವರು, ಅಪಘಾತದಲ್ಲಿ ಕುಟುಂಬವನ್ನು ಕಳೆದುಕೊಂಡಿದ್ದರು, ಅದೇ ಅಪಘಾತದಲ್ಲಿ ಮಕ್ಕಳನ್ನು ಹೊಂದುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದರು.
ಯಾರೂ ಇಲ್ಲದ ತನಗೆ ಸಂಬಂಧಿಕರೂ ಸಹಾಯ ಮಾಡಲಿಲ್ಲ, ತಾನು ಒಬ್ಬಳೇ ಈ ಇಂಡಸ್ಟ್ರಿಗೆ ಬಂದೆ ಎಂದು ಕೀರ್ತಿ ಹೇಳುತ್ತಿದ್ದರು. ತನಗೆ ಮಕ್ಕಳಾಗುವುದಿಲ್ಲ ಎಂದು ತಿಳಿದಿದ್ದರೂ ಕಾರ್ತಿಕ್ ಮದುವೆಯಾಗಲು ಒಪ್ಪಿಕೊಂಡಿದ್ದಾಗಿ ಅವರೇ ಹೇಳಿದ್ದರು. ಇದ್ದಕ್ಕಿದ್ದಂತೆ ಬೇರೆಯಾಗಿದ್ದೇವೆ ಎಂದಾಗ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೀರ್ತಿಯನ್ನು ಬಿಡಬೇಡಿ ಪ್ಲೀಸ್ ಎಂದು ಕಾರ್ತಿಕ್‌ಗೆ ಮೆಸೇಜ್ ಮಾಡುತ್ತಿದ್ದಾರೆ. ಹೀಗಾಗಿ ಕಾರ್ತಿಕ್ ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
'ನಾನು ಈ ವಿಡಿಯೋ ಮಾಡಬೇಕೆಂದು ಅಂದುಕೊಂಡಿರಲಿಲ್ಲ. ಆದರೆ ನಿನ್ನೆ ಕೀರ್ತಿ ಅವರು ನಾವು ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ ಎಂದು ಮೆಸೇಜ್ ಹಾಕಿದಾಗಿನಿಂದ ಎಲ್ಲರೂ ನನಗೆ ಮೆಸೇಜ್ ಮಾಡುತ್ತಿದ್ದಾರೆ. ದಯವಿಟ್ಟು ಕೀರ್ತಿಯನ್ನು ಬಿಡಬೇಡಿ, ಏನಾದರೂ ಇದ್ದರೆ ಕುಳಿತು ಮಾತನಾಡಿ ಎಂದು ಹೇಳುತ್ತಿದ್ದಾರೆ. ಆದರೆ ನಿಜ ಏನೆಂದರೆ, ನನಗೆ ಅವಳಿಂದ ದೂರವಾಗಲು ಇಷ್ಟವಿಲ್ಲ. ಅವಳನ್ನು ಮದುವೆಯಾಗಿ ಜೀವನದಲ್ಲಿ ಸೆಟಲ್ ಆಗಬೇಕೆಂದುಕೊಂಡಿದ್ದೆ. ಹಾಗಿದ್ದಾಗ ನಾನು ಯಾಕೆ ಬೇರೆಯಾಗಲು ಬಯಸುತ್ತೇನೆ? ಅದು ಕೇವಲ ಅವಳ ನಿರ್ಧಾರ. ನಾನು ಇನ್ನೂ ಆರ್ಥಿಕವಾಗಿ ಸ್ಥಿರವಾಗಿಲ್ಲ ಎಂದು ಅವಳು ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಡಿಸೆಂಬರ್‌ನಲ್ಲೇ ಅವಳು ನನಗೆ ಈ ವಿಷಯ ಹೇಳಿದ್ದಳು” ಎಂದು ಕಾರ್ತಿಕ್ ಹೇಳಿದ್ದರು.
ತನ್ನ ಜೀವನ ಹೇಗಿರಬೇಕೆಂದು ನಿರ್ಧರಿಸುವ ಹಕ್ಕು ಅವಳಿಗಿದೆ. ಅವಳು ಈಗಾಗಲೇ ತನ್ನ ಹೊಸ ಜೀವನವನ್ನು ಪ್ರಾರಂಭಿಸಿದ್ದಾಳೆ. ಅವಳ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಅವಳನ್ನು ಒಪ್ಪಿಸಲು ತುಂಬಾ ಪ್ರಯತ್ನಿಸಿದೆ. ಆದರೆ ಅವಳು ಒಪ್ಪಲಿಲ್ಲ. ಕಾಂಪ್ರಮೈಸ್ ಆಗಿ ಬದುಕುವುದು ಇಷ್ಟವಿಲ್ಲ ಎಂದು ಹೇಳಿದಳು. ಈಗಾಗಲೇ ಅವಳಿಗೆ ಉತ್ತಮ ಆಯ್ಕೆ ಸಿಕ್ಕಿದೆ. ಬಿಟ್ಟುಬಿಟ್ಟರೆ, ತಾನು ಸಂತೋಷವಾಗಿ ಹೊಸ ಜೀವನ ನಡೆಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದಳು. ಅವಳು ಎಲ್ಲೇ ಇದ್ದರೂ, ಅವರಿಬ್ಬರೂ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ ಎಂದು ಕೀರ್ತಿ ಭಟ್ ಮಾಜಿ ಪ್ರಿಯತಮ ಹೇಳಿದ್ದಾರೆ.
ಕೀರ್ತಿ ನನ್ನ ಫೋಟೋಗಳನ್ನು ಡಿಲೀಟ್ ಮಾಡಿದ್ದಾಳೆ, ನಾನು ಯಾಕೆ ಮಾಡಿಲ್ಲ ಎಂದು ಹಲವರು ಕೇಳುತ್ತಿದ್ದಾರೆ. ಪ್ರತಿ ಫೋಟೋಗೂ ಒಂದು ಭಾವನೆ ಇರುತ್ತದೆ, ಅದಕ್ಕೆ ಡಿಲೀಟ್ ಮಾಡಲು ಆಗಲಿಲ್ಲ. ಕೀರ್ತಿ ತನಗೆ ಸಿಕ್ಕ ಹೊಸ ಸಂಗಾತಿಯೊಂದಿಗೆ ಸಂತೋಷವಾಗಿರಲಿ ಎಂದು ನಾನು ಕೂಡ ಅಯ್ಯಪ್ಪನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಕಾರ್ತಿಕ್ ತನ್ನ ವಿಡಿಯೋದಲ್ಲಿ ಹೇಳಿದ್ದಾರೆ. ಇದರಿಂದ, ಕೀರ್ತಿ ಹೀಗೆ ಮಾಡಿದ್ದು ಸರಿ ಅಲ್ಲ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಕೀರ್ತಿ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದು, “ಕೇವಲ ಒಂದು ಕಡೆಯ ಮಾತುಗಳನ್ನು ಕೇಳಿ ಸ್ಪಷ್ಟತೆ ಸಿಕ್ಕಿದೆ ಎಂದು ಭಾವಿಸುವವರಲ್ಲಿ ನನ್ನದೊಂದು ವಿನಂತಿ, ದಯವಿಟ್ಟು ಏಕಪಕ್ಷೀಯ ಸಮರ್ಥನೆಗಳ ಆಧಾರದ ಮೇಲೆ ನನ್ನನ್ನು ನಿರ್ಣಯಿಸಬೇಡಿ (Judge ಮಾಡಬೇಡಿ). ನೀವು ನನ್ನ ಪೋಸ್ಟ್ ಅನ್ನು ಗಮನಿಸಿದ್ದರೆ, ಅದರಲ್ಲಿ ನಾನು ಯಾರ ದೌರ್ಬಲ್ಯಗಳ ಬಗ್ಗೆಯಾಗಲಿ ಅಥವಾ ನಾನು ಅನುಭವಿಸಿದ ವೈಯಕ್ತಿಕ ಪರಿಸ್ಥಿತಿಗಳ ಬಗ್ಗೆಯಾಗಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ನನಗೆ ಬೇಕಾಗಿದ್ದು ಕೇವಲ ಪರಸ್ಪರ ತಿಳುವಳಿಕೆ ಮಾತ್ರ. ಅದೊಂದೇ ಕಾರಣಕ್ಕಾಗಿ ನಾನು ಕಾನೂನುಬದ್ಧವಾಗಿ, ದರ್ಶಕವಾಗಿ ಈ ವಿಷಯವನ್ನು ಹೊರಹಾಕಲು ನಿರ್ಧರಿಸಿದೆ. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳಲ್ಲಿ ನಡೆಯುತ್ತಿರುವ ಊಹಾಪೋಹಗಳು, ಚರ್ಚೆಗಳು ಮತ್ತು ಸೃಷ್ಟಿಸಲಾಗುತ್ತಿರುವ ಕಥೆಗಳು ಆದರೆ ಈಗ ನನಗೆ ತುಂಬ ನೋವುಂಟು ಮಾಡುತ್ತಿದೆ. ಮಾನಸಿಕವಾಗಿ ಈ ಹಂತವು ನನ್ನನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ನಾನು ಕೆಲವು ಹೆಸರುಗಳನ್ನು ಮತ್ತು ವೇದಿಕೆಗಳನ್ನು ಗುರುತಿಸಿದ್ದೇನೆ. ಇನ್ನು ಮುಂದೆ ನನ್ನ ಜೀವನದಲ್ಲಿ ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಅಥವಾ ಅದರ ಪರಿಣಾಮಗಳಿಗೆ ಈ ಪರಿಸ್ಥಿತಿಯನ್ನು ಹರಡುತ್ತಿರುವ ಅಥವಾ ದುರುಪಯೋಗಪಡಿಸಿಕೊಳ್ಳುತ್ತಿರುವವರೇ ಕಾರಣರಾಗಿರುತ್ತಾರೆ” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.