ಸೀರಿಯಲ್ ತಾರೆಯರಿಂದ 'ಬಿಂಕದ ಸಿಂಗಾರಿ' ಹಾಡಿಗೆ ರೀಲ್ಸ್ ಮಾಡುವ ಟ್ರೆಂಡ್ ಶುರುವಾಗಿದೆ. ಇದೀಗ ಅಮೃತಧಾರೆ ಟೀಂನಿಂದ ಭರ್ಜರಿ ಸ್ಟೆಪ್ ಹಾಕಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ.
1963ರಲ್ಲಿ ಬಿಡುಗಡೆಯಾದ ಡಾ.ರಾಜ್ಕುಮಾರ್ ಮತ್ತು ಲೀಲಾವತಿ ಅಭಿನಯದ ಕನ್ಯಾರತ್ನ ಚಿತ್ರದ ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು 60 ವರ್ಷಗಳ ಬಳಿಕವೂ ಇಂದಿಗೂ ಜನಜನಿತವಾಗಿದೆ. ಡಾ.ರಾಜ್ಕುಮಾರ್ ಅವರ ಚಿತ್ರದ ಹಾಡುಗಳೆಂದರೆ ಹಾಗೇ ಅಲ್ಲವೆ? ಶತಮಾನ ಕಳೆದರೂ ನೆನಪಿನಲ್ಲಿ ಇರುವ ಮಧುರ ಗೀತೆಗಳವು. ಇಂದಿನ ಸಿನಿಮಾಗಳ ಬಹುತೇಕ ಹಾಡುಗಳು ಅರ್ಥಹೀನವಾಗಿದ್ದರೆ, ಕೆಲವು ತಿಂಗಳುಗಳು ರೀಲ್ಸ್ ರೂಪದಲ್ಲಿ ಹಿಟ್ ಆಗುತ್ತಲೇ ಅದೇ ವೇಗದಲ್ಲಿ ಮರೆತೇ ಹೋಗುವಂಥದ್ದು. ಆದರೆ 60-80ರ ದಶಕದ ಹಾಡುಗಳ ಮಾಧುರ್ಯವೇ ಬೇರೆ. ಅದರ ಸೊಗಡು, ಸೊಗಸೇ ಬೇರೆ. ಅವು ಎಂದೆಂದಿಗೂ ಜನಜನಿತವೇ. ಅಂಥವುಗಳಲ್ಲಿ ಒಂದು ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು. 60 ವರ್ಷಗಳ ಅಂದಿನ ಹಾಡಿಗೆ ಇದಾಗಲೇ ಹಲವು ಸೀರಿಯಲ್ ತಾರೆಯರು ರೀಲ್ಸ್ ಮಾಡಿದ್ದಾರೆ.
ಸೀತಾರಾಮ ಸೀರಿಯಲ್ನ ಸೀತಾ-ರಾಮ, ಶ್ರೀರಸ್ತು ಶುಭಮಸ್ತು ಸೀರಿಯಲ್ನ ಪೂರ್ಣಿ ಮತ್ತು ದೀಪಿಕಾ ಬಳಿಕ ಇದೀಗ ಅಮೃತಧಾರೆ ಟೀಂ ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದೆ. ಇದರಲ್ಲಿ ಮಲ್ಲಿ, ಆನಂದ್, ಆನಂದ್ ಪತ್ನಿ, ಜೀವಾ, ಅಪ್ಪಿ ಅವರನ್ನು ನೋಡಬಹುದು. ಬಿಂಕದ ಸಿಂಗಾರಿ ಎನ್ನುತ್ತಾ ಇವರು ಕೆಲ ಸೆಕೆಂಡ್ಗಳ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಸೂಪರ್ ಸೂಪರ್ ಎನ್ನುತ್ತಿದ್ದಾರೆ. ಇನ್ನು ಕೆಲವರು ಗೌತಮ್-ಭೂಮಿಕಾ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.
ಬಿಂಕದ ಸಿಂಗಾರಿ ಎಂದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು: ಅಲ್ಲೂ ಹೀಗೆ ಇರೋಕೆ ಏನಾಗತ್ತೆ ಕೇಳಿದ ಫ್ಯಾನ್ಸ್...
ಈ ಮುಂಚೆ ಸೀತಾ ರಾಮ ಜೋಡಿ ಇದೇ ಹಾಡಿಗೆ ಡ್ಯಾನ್ಸ್ ಮಾಡಿತ್ತು. ಈ ಡ್ಯಾನ್ಸ್ ಆರಂಭದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಟಚ್ ಕೊಡಲಾಗಿದ್ದು, ಬಳಿಕ ಮಾಡರ್ನ್ ಟಚ್ ಕೊಡಲಾಗಿದೆ ಇದರಲ್ಲಿ ಸೀತಾ ಮತ್ತು ರಾಮ್ ಪಾತ್ರಧಾರಿಗಳು ಸಕತ್ ಸ್ಟೆಪ್ ಹಾಕಿದ್ದರು. ಈ ಜೋಡಿಯ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಸೀತೆ ಮತ್ತು ರಾಮ್ ನೃತ್ಯ ಮಾಡುವುದನ್ನು ನೋಡಬಹುದು. ಅಷ್ಟಕ್ಕೂ ಸೀತಾ ಪಾತ್ರಧಾರಿ ವೈಷ್ಣವಿ ಗೌಡ, ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಇದ್ದು, ಡ್ಯಾನ್ಸ್ನಲ್ಲಿಯೂ ಎಕ್ಸ್ಪರ್ಟ್. ಈ ರೀಲ್ಸ್ಗೆ ಥಹರೇವಾರಿ ಕಮೆಂಟ್ಸ್ ಬಂದಿವೆ. ನಿಮ್ಮ ಜೋಡಿ ಸೂಪರ್ ಎಂದಿದ್ದರು ಅಭಿಮಾನಿಗಳು.
ಅದಾದ ಬಳಿಕ ಶ್ರೀರಸ್ತು ಶುಭಮಸ್ತು ಸೀರಿಯಲ್ ಸೊಸೆಯಂದಿರಾದ ಪೂರ್ಣಿ ಮತ್ತು ದೀಪಿಕಾ ಇದೇ ಹಾಡಿಗೆ ರೀಲ್ಸ್ ಮಾಡಿದ್ದರು. ಸೀರಿಯಲ್ನಲ್ಲಿ ಹಾವು-ಮುಂಗುಸಿ ಇರೋ ನೀವು ಅಲ್ಲಿಯೂ ಇದೇ ರೀತಿ ಇದ್ದರೆ ಎಷ್ಟು ಚೆಂದ ಎಂದು ಅಭಿಮಾನಿಗಳು ಕಮೆಂಟ್ಸ್ ಮಾಡಿದ್ದರು.
ಬಿಂಕದ ಸಿಂಗಾರಿ... ಡಾ.ರಾಜ್ ಹಾಡಿಗೆ ಸೀತಾ-ರಾಮ ಮಾಡರ್ನ್ ಸ್ಟೆಪ್: ಮನಸೋತ ಅಭಿಮಾನಿಗಳು