ಗಿಲ್ಲಿ ಪ್ರಾಪರ್ಟಿ ಕಾಮಿಡಿ ದಾಸನಿಗೆ ಬಲು ಇಷ್ಟವಂತೆ! ಆ ಕನಸು ಈಡೇರುತ್ತಾ?

Published : Feb 10, 2026, 04:08 PM IST
Bigg Boss Gilli Nata

ಸಾರಾಂಶ

ಬಿಗ್ ಬಾಸ್ ವಿಜೇತ ಗಿಲ್ಲಿ ನಟ, ನಟ ದರ್ಶನ್‌ರ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ 'ದಿ ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಚಿತ್ರದ ಸಂಭ್ರಮವನ್ನು ತಪ್ಪಿಸಿಕೊಂಡಿದ್ದ ಗಿಲ್ಲಿ, ಇದೀಗ ಜೈಲಿನಲ್ಲಿರುವ ದರ್ಶನ್‌ರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದಾರೆ.

ಬಿಗ್ ಬಾಸ್ ವಿಜೇತ ಗಿಲ್ಲಿ ನಟ, ದರ್ಶನ್​ ಅಭಿಮಾನಿ ಅನ್ನೋದು ಗೊತ್ತೇ ಇದೆ. ದರ್ಶನ್ ಜೊತೆ ಗಿಲ್ಲಿ ನಟಿಸಿದ್ದ ದಿ ಡೆವಿಲ್ ಸಿನಿಮಾ , ಬಿಗ್​ ಬಾಸ್ ನಡೆಯೋವಾಗಲೇ ರಿಲೀಸ್ ಆಗಿತ್ತು. ಸೋ ಗಿಲ್ಲಿ ಡೆವಿಲ್ ಸಂಭ್ರಮ ಮಿಸ್ ಮಾಡಿಕೊಂಡಿದ್ದಾನೆ. ಆದ್ರೇನಂತೆ ಸದ್ಯದಲ್ಲೇ ನೇರವಾಗಿ ದಾಸನನ್ನ ಮೀಟ್ ಮಾಡೋದಕ್ಕೆ ಸಜ್ಜಾಗಿದ್ದಾನೆ.

ದಾಸನ ದರ್ಶನಕ್ಕೆ ಗಿಲ್ಲಿ ನಟನ ಪ್ಲ್ಯಾನ್..!

ಯೆಸ್ ಈ ಸಾರಿ ದಾಖಲೆಯ ವೋಟ್ ಪಡೆದು ಬಿಗ್ ಬಾಸ್ ಶೋ ಗೆದ್ದಿರೋ ಗಿಲ್ಲಿ ನಟನಿಗೆ ಈಗ ದೊಡ್ಡ ಅಭಿಮಾನಿ ಬಳಗ ಕ್ರಿಯೇಟ್ ಆಗಿದೆ. ಆದ್ರೆ ಗಿಲ್ಲಿ ನಟ ದಾಸನ ಅಭಿಮಾನಿ ಅನ್ನೋ ವಿಷ್ಯ ನಿಮಗೆ ಗೊತ್ತಾ? ಖುದ್ದು ಗಿಲ್ಲಿ ಈ ಮಾತನ್ನ ಅನೇಕ ಬಾರಿ ಹೇಳಿಕೊಂಡಿದ್ದಾನೆ. ಮಂಡ್ಯ ಹೈದನಾದ ಗಿಲ್ಲಿಗೆ ದರ್ಶನ್ ಸಿನಿಮಾಗಳಂದ್ರೆ ಪ್ರಾಣ. ರಿಯಾಲಿಟಿ ಶೋಗಳ ಮೂಲಕ ಮನೆಮಾತಾದ ಮೇಲೆ ಗಿಲ್ಲಿಗೆ, ದರ್ಶನ್​ ದಿ ಡೆವಿಲ್ ಚಿತ್ರದಲ್ಲಿ ನಟಿಸೋ ಚಾನ್ಸ್ ಸಿಕ್ಕಿತ್ತು. ತನ್ನ ನೆಚ್ಚಿನ ನಟನ ಜೊತೆ ನಟಿಸೋ ಅವಕಾಶ ಸಿಕ್ಕಿದ್ದಕ್ಕೆ ಗಿಲ್ಲಿ ನಟ ಫುಲ್ ಖುಷ್ ಆಗಿದ್ದ.

ಗಿಲ್ಲಿ ದೊಡ್ಮನೆಯಲ್ಲಿದ್ದಾಗಲೇ ಡೆವಿಲ್ ರಿಲೀಸ್!

ಹೌದು ದಿ ಡೆವಿಲ್ ಸಿನಿಮಾ ರಿಲೀಸ್ ಆಗಿದ್ದು ಕಳೆದ ಡಿಸೆಂಬರ್ 12ನೇ ತಾರೀಖು. ಆಗ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದ. ಸೋ ತನ್ನನ್ನ ದರ್ಶನ್ ಸಿನಿಮಾದಲ್ಲಿ ಬಿಗ್ ಸ್ಕ್ರೀನ್ ಮೇಲೆ ನೋಡೋ ಚಾನ್ಸ್ ಮಿಸ್ ಮಾಡಿಕೊಂಡಿದ್ದ. ಅಸಲಿಗೆ ಡೆವಿಲ್ ಸಿನಿಮಾದಲ್ಲಿ ದರ್ಶನ್ ಬಂದಾಗ ಎಷ್ಟು ಶಿಳ್ಳೆ, ಕ್ಲಾಪ್ಸ್ ಬಿದ್ದಿದ್ದವೋ ಗಿಲ್ಲಿ ತೆರೆ ಮೇಲೆ ಬಂದಾಗಲೂ ಅಷ್ಟೇ ಕ್ಲಾಪ್ಸ್ ಬಿದ್ದಿದ್ವು. ಇದನ್ನ ನೋಡಿದ ಜನ ಬಿಗ್ ಬಾಸ್​ನಲ್ಲೂ ಗಿಲ್ಲಿ ಹವಾ. ಬಿಗ್ ಸ್ಕ್ರೀನ್​ನಲ್ಲೂ ಗಿಲ್ಲಿ ಹವಾ ಅಂತ ಕೊಂಡಾಡಿದ್ರು.

ಪರಪ್ಪನ ಅಗ್ರಹಾರಕ್ಕೆ ಗಿಲ್ಲಿ ನಟ ವಿಸಿಟ್..?

ಹೌದು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಪರಪ್ಪನ ಅಗ್ರಹಾರಕ್ಕೆ ಹೋಗಬೇಕು, ದರ್ಶನ್‌ರನ್ನು ಮೀಟ್ ಮಾಡಬೇಕು ಅಂತ ಗಿಲ್ಲಿ ಪ್ರಯತ್ನ ಪಟ್ಟಿದ್ದಾನಂತೆ. ಆದ್ರೆ ಸದ್ಯ ದರ್ಶನ್ ಭೇಟಿಗೆ ಯಾರಿಗೂ ಅನುಮತಿ ಸಿಕ್ತಾ ಇಲ್ಲ. ಸೋ ಅವರು ಹೊರಬಂದ ಮೇಲೆ ಹೋಗಿ ಆಶಿರ್ವಾದ ಪಡೀತೀನಿ ಅಂದಿದ್ದಾನೆ ಗಿಲ್ಲಿ ನಟ.

ಗಿಲ್ಲಿ ಪ್ರಾಪರ್ಟಿ ಕಾಮಿಡಿ ದಾಸನಿಗೆ ಬಲು ಇಷ್ಟ!

ಹೌದು ಗಿಲ್ಲಿ ನಟ ರಿಯಾಲಿಟಿ ಶೋನಲ್ಲಿ ಪ್ರಾಪರ್ಟಿ ಕಾಮಿಡಿ ಮಾಡಿ ಸಖತ್ ಫೇಮಸ್ ಆಗಿದ್ದ. ಅದನ್ನ ನೋಡಿ ದರ್ಶನ್ ಕೂಡ ಮೆಚ್ಚಿಕೊಂಡಿದ್ರಂತೆ. ಡೆವಿಲ್ ಸಿನಿಮಾ ಶೂಟ್ ಟೈಂನಲ್ಲಿ ಗಿಲ್ಲಿಯಿಂದ ಪ್ರಾಪರ್ಟಿ ಕಾಮಿಡಿ ಮಾಡಿಸಿದ್ರಂತೆ. ಸದ್ಯ ಗಿಲ್ಲಿ ಬಿಗ್ ಬಾಸ್ ಗೆದ್ದ ಸಂಭ್ರಮದಲ್ಲಿದ್ದಾನೆ. ಹಲವು ಕಾರ್ಯಕ್ರಮಗಳು, ಸಿನಿಮಾ ಪ್ರಮೋಷನ್ಸ್​ ಅಂತ ಬ್ಯುಸಿ ಆಗಿದ್ದಾನೆ. ಬಿಗ್ ಬಾಸ್ ಟ್ರೋಫಿ ಹಿಡಿದು ನೆಚ್ಚಿನ ನಟರು, ರಾಜಕಾರಣಿಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾನೆ. ಆದ್ರೆ ದಾಸನ ಭೇಟಿ ಮಾಡುವ ಗಿಲ್ಲಿ ಆಸೆ ಮಾತ್ರ ಈಡೇರಿಲ್ಲ. ಅದು ಯಾವಾಗ ಈಡೇರುತ್ತೆ ಅನ್ನೋದು ಕೂಡ ಗೊತ್ತಿಲ್ಲ!

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial Twist: ಡಾ.ನಿಧಿ ಈಗ ಲಾಯರ್​ ನಿಧಿ! Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?
99 ದೇಶಗಳನ್ನು ಸುತ್ತಿದ ಬಳಿಕ Dr. Bro ಹಾದಿ ಹಿಡಿದ Flying Passport ಜೋಡಿ