ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ವಾರದಲ್ಲಿ ಅಜಾನುಬಾಹು ತ್ರಿವಿಕ್ರಮ್ ಅವರು ಟಾಸ್ಕ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಅಪಾಯಕಾರಿ ಆಟಗಳಿಂದಾಗಿ ವಿವಾದ ಎದುರಾಗಿದ್ದರೂ, ಈ ಬಾರಿಯೂ ಅಂತಹುದೇ ಟಾಸ್ಕ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು (ಅ.04): ಬಿಗ್ ಬಾಸ್ ಕನ್ನಡ ಸೀಸನ್ 11 ಆಭವಾಗ ಇನ್ನೂ ಒಂದು ವಾರವೂ ಕಳೆದಿಲ್ಲ. ಅದಾಗಲೇ ಟಾಸ್ಕ್ ಒಂದರಲ್ಲಿ ರಾಕ್ಷಸರಂತೆ ನಾವು ಫೈನಲ್‌ಗೆ ತಲುಪಿದ್ದೇವೆ ಎಂಬಂತೆ ಆಟವಾಡಿ ಅಜಾನುಭಾಹು ತ್ರವಿಕ್ರಮ್ ಅವರು ಗಾಯ ಮಾಡಿಕೊಂಡಿದ್ದಾರೆ. ಟಾಸ್ಕ್ ನಡೆಯುವ ವೇಳೆಯೇ ತ್ರಿವಿಕ್ರಮ್ ಪ್ರಜ್ಞೆ ತಪ್ಪಿ ಬಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಬಿಗ್ ಬಾಸ್ ಸೀಸನ್‌ನಲ್ಲಿ ಅಪಾಯಕಾರಿ ಆಟವನ್ನು ಆಡಿಸಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈ ಬಾರಿಯೂ ಮೊದಲ ವಾರವೇ ಅಪಾಯಕಾರಿ ಆಟವಾಡಿಸಿರುವ ಬಿಗ್ ಬಾಸ್ ಸರ್ಧಿಗಳ ಕೈಕಾಲು ಮುರಿದು ಮನೆ ಕಳಿಸುವ ಆಲೋಚನೆ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಕನ್ನಡದ ಬಿಗ್ ಬಾಸ್ ಸೀಸನ್ 10 ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಟಿಆರ್‌ಪಿ ಪಡೆದಂತಹ ರಿಯಾಲಿಟಿ ಶೋ ಎನಿಸಿಕೊಂಡಿತ್ತು. ಆದರೆ, ಸೀಸನ್ ಅಲ್ಲಿ ಅಪಾಯಕಾರಿ ಆಟವಾಡಿಸಿದ್ದ ಬಿಗ್ ಬಾಸ್ ತಂಡದಿಂದಾಗ ಇಬ್ಬರು ಕಂಟೆಸ್ಟೆಂಟ್‌ಗಳು ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಅವರು ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿತ್ತು. ಇಷ್ಟಾದರೂ ಬಿಗ್ ಬಾಸ್ ತಂಡಕ್ಕೆ ಇನ್ನೂ ಬುದ್ಧಿ ಬಂದಂತಿಲ್ಲ. ಇದೀಗ ಮೊದಲ ವಾರವೇ ಎಲ್ಲ ಕಂಟೆಸ್ಟೆಂಟ್‌ಗಳು ಶಕ್ತಿ ಪ್ರದರ್ಶನ ಮಾಡುವಂತಹ ಟಾಸ್ಕ್ ಕೊಟ್ಟು ಆಟವಾಡಿಸಿದ್ದಾರೆ. ಈ ಆಟದ ವೇಳೆ ಹಲವು ಕಂಟೆಸ್ಟೆಂಟ್‌ಗಳು ಗಾಯಗೊಂಡಿದ್ದಾರೆ. ಆದರೂ, ಆಟವನ್ನು ಮುಂದುವರಿಸಿದ್ದರಿಂದ ಬಿಗ್ ಬಾಸ್ ಮನೆಯೊಳಗಿನ ಆನೆ ಎಂದೇ ಖ್ಯಾತವಾಗಿರುವ ಅಜಾನುಬಾಹು ವ್ಯಕ್ತಿ ತ್ರಿವಿಕ್ರಮ್ ಗಾಯಗೊಂಡಿದ್ದಾರೆ. ಗಂಭೀರ ಗಾಯದಿಂದಾಗಿ ಧಾರಾವಾಹಿ ನಟ ತ್ರಿವಿಕ್ರಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
undefined
ಇದನ್ನೂ ಓದಿ: ಅಲ್ಲಿ ಬಿಗ್ ಬಾಸ್‌ಗೇ ಬೆದರಿಸಿದ ಲಾಯರ್ ಜಗದೀಶ: ಇಲ್ಲಿ ವಕೀಲಿಕೆ ಲೈಸೆನ್ಸ್ ರದ್ದುಗೊಳಿಸಿದ ಬಾರ್ ಕೌನ್ಸಿಲ್!
ಆಟದ ವಿಧಾನ ಇಲ್ಲಿದೆ ನೋಡಿ: ಮೇಲ್ಭಾಗದ ನೆಟ್‌ನಲ್ಲಿ ಇಟ್ಟಿರುವ ದೊಡ್ಡ ಚೆಂಡುಗಳನ್ನು ಕೋಲಿನಿಂದ ಬೀಳಿಸಿ ಅದನ್ನು ಒಂದಷ್ಟು ದೂರದಲ್ಲಿ ಇಟ್ಟಿರುವ ಚೌಕದಲ್ಲಿ ಹೋಗಿ ಇಡಬೇಕು. ಒಂದು ತಂಡದ ಸದಸ್ಯರು ಚೆಂಡನ್ನು ಬಾಕ್ಸ್‌ನಲ್ಲಿ ಇಡಲು ಮುಂದಾದರೆ, ಇನ್ನೊಂದು ತಂಡವು ಅದನ್ನು ತಡೆದು ಚೆಂಡನ್ನು ಕಸಿದುಕೊಳ್ಳಬೇಕು. ಒಂದರೆ ಒಂದು ತಂಡದ ಸದಸ್ಯರು ಚೆಂಡನ್ನು ರಕ್ಷಣೆ ಮಾಡಿಕೊಳ್ಳಬೇಕು, ಇನ್ನೊಂದು ತಂಡದ ಸದಸ್ಯರು ಚೆಂಡನ್ನು ಕಸಿದುಕೊಳ್ಳಬೇಕು. ಹೀಗೆ ಗುದ್ದಾಡುವ ಆಟವನ್ನು ಕೊಟ್ಟರೆ ಅಲ್ಲಿ ಗಾಯಗಳಾಗದೇ ಹೇಗೆ ಆಟವಾಡಬಹುದು. ಇಲ್ಲಿ ಗಾಯ ಆಗದಂತೆ ನೋಡಿಕೊಳ್ಳಲು ಯಾವುದೇ ನಿಯಮಾವಳಿಗಳು ಕೂಡ ಇಲ್ಲ. ಹೀಗಾಗಿ, ಸ್ಪರ್ಧಿಗಳಿಗೆ ಗಾಯಗಳಾಗುತ್ತಿವೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವ ಉಗ್ರಂ ಮಂಜು ಈ ಕಾರಣಕ್ಕೆ ಮದ್ವೆ ಆಗಿಲ್ಲ!
ಭವ್ಯಾಗೌಡ, ಮಾನಸಾ, ಗೋಲ್ಡ್ ಸುರೇಶ್‌ಗೂ ಗಾಯ: ಬಿಗ್ ಬಾಸ್ ಮನೆಯ ಆಟ ಶುರುವಾಗಿ ಇದೀಗ ಕೇವಲ ಒಂದು ವಾರವೂ ಆಗಿಲ್ಲ. ಇದೇ ಅವಧಿಯಲ್ಲಿ ಮೃಗೀಯವಾಗಿ ವರ್ತನೆ ತೋರುವಂತಹ ಟಾಸ್ಕ್ ಅನ್ನು ಸ್ಪರ್ಧಿಗಳಿಗೆ ಕೊಡುವ ಅಗತ್ಯವಿತ್ತೇ ಎಂಬ ಪ್ರಶ್ನೆ ನೋಡುಗರಲ್ಲಿ ವ್ಯಕ್ತವಾಗಿದೆ. ಇಲ್ಲಿ ತ್ರಿವಿಕ್ರಮ್ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ, ಉಳಿದಂತೆ ಇದೇ ಟಾಸ್ಕ್‌ನಲ್ಲಿ ತುಕಾಲಿ ಮಾನಸಾ, ಭವ್ಯಾ ಗೌಡ ಹಾಗೂ ಗೋಲ್ಡ್ ಸುರೇಶ್ ಅವರಿಗೂ ಗಾಯಗಳಾಗಿವೆ. ಆದರೆ, ಇವರಿಗೆ ವೈದ್ಯಕೀಯ ಸಿಬ್ಬಂದಿ ಬಿಗ್ ಬಾಸ್ ಮನೆಗೆ ಬಂದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರಾ ಮನೆ ಸದಸ್ಯರು!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30 pic.twitter.com/Dys963tg5E