ಬೆಡ್ ರೂಮ್ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ; ಇದಕ್ಕಂತಲೇ ಡಿವೋರ್ಸ್ ಕೊಟ್ಟಿದ್ದಾ ಎಂದ ಚಂದನ್ ಫ್ಯಾನ್ಸ್

By Sathish Kumar KH  |  First Published Jul 14, 2024, 7:11 PM IST

ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟ ಬಳಿಕ ಲಂಗು ಲಗಾಮಿಲ್ಲದ ಸ್ವತಂತ್ರ ಹಕ್ಕಿಯಾಗಿರುವ ನಿವೇದಿತಾ ಗೌಡ ಬೆಡ್‌ ರೂಮಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.


ಬೆಂಗಳೂರು (ಜು.14): ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಅಂಡ್ ಕ್ಯೂಟ್ ಜೋಡಿಗಳಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಿದ್ದಾಳೆ. ಲಂಗು ಲಗಾಮಿಲ್ಲದ ಸ್ವತಂತ್ರ ಹಕ್ಕಿಯಾಗಿರುವ ನಿವೇದಿತಾ ಗೌಡ ಬೆಡ್‌ ರೂಮಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಚಂದನ್ ಶೆಟ್ಟಿಯನ್ನು ನೀನು ಬಿಟ್ಟು ಹೋಗಿದ್ದಲ್ಲ, ಈ ನಿನ್ನ ವಿಡಿಯೋ ನೋಡಿ ಅವನೇ ಬಿಟ್ಟು ಹೋಗುತ್ತಿದ್ದನು ಎಂದು ಕಾಮೆಂಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಕಳೆದ ತಿಂಗಳು ಜೂನ್ 7ರಂದು, ಅಂದರೆ 07 ಜೂನ್ 2024ರಂದು ಸಿಂಗರ್ ಹಾಗು ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಅವರಿಬ್ಬರೂ ತಮ್ಮ ದಾಂಪತ್ಯಕ್ಕೆ ಗುಡ್ ಬೈ ಹೇಳಿದ್ದಾರೆ. ಸದ್ಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಚಂದನ್ ಅವರು ತನ್ನ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಮೋಶನ್‌ ಡ್ಯೂಟಿಗೆ ದುಬೈಗೆ ತೆರಳಿದ್ದಾರೆ. ದುಬೈನಲ್ಲಿ ಆ ಚಿತ್ರದ ಪ್ರಮೋಶನ್‌ ಪ್ರಯುಕ್ತ ಪ್ರೀಮಿಯರ್ ಶೋ  ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಚಿತ್ರವು ಜು.19ರಂದು ರಿಲೀಸ್ ಆಗಲಿದೆ. ಹೀಗಾಗಿ, ಹಾಡು ಸೇರಿದಂತೆ ಇನ್ನಿತರೆ ಅಂತಿಮ ಕ್ಷಣದ ಕೆಲಸಗಳಲ್ಲಿ ಚಂದನ್ ಬ್ಯುಸಿ ಆಗಿದ್ದಾರೆ. ಆದರೆ, ಇತ್ತಕಡೆ ತಾನೂ ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ನಿವೇದಿತಾ ಗೌಡ ರೀಲ್ಸ್‌ ಮಾಡುವುದನ್ನು ಮಾರೆತಿಲ್ಲ.

Tap to resize

Latest Videos

ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು; ನಿವೇದಿತಾ ಗೌಡಗೆ ಇದೆಂಥಾ ಕಾಮೆಂಟ್!

ಚಂದನ್ ಶೆಟ್ಟಿಯಿಂದ ವಿಚ್ಛೇದನ ತೆಗೆದುಕೊಂಡ  ಬಳಿಕ ನಿವೇದಿತಾ ಸ್ವತಂತ್ರ ಹಕ್ಕಿಯಾಗಿ ಹಾರಾಡುತ್ತಿದ್ದಾರೆ. ತಮ್ಮಿಷ್ಟದ ಬಟ್ಟೆ, ತಮಗಿಷ್ಟವಾದ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀವು ಕನ್ನಡದ ಊರ್ಫಿ ಜಾವೇದ್ ಆಗಬೇಡಿ ಎಂದು ಸಲಹೆ ನೀಡಿದ್ದಾರೆ. ಏಕೆಂದರೆ ನಿವೇದಿತಾ ತಮ್ಮ ಮನೆಯ ಬೆಡ್‌ರೂಮ್ ವಿಡಿಯೋ ಹಂಚಿಕೊಂಡಿದ್ದಾರೆ. ಬೆಡ್‌ರೂಮಿನಲ್ಲಿ ತುಂಡುಡುಗೆ ತೊಟ್ಟು ಎದೆಸೀಳು ತೋರಿಸಿಕೊಂಡು ದಿಂಬನ್ನು ತಬ್ಬಿಕೊಂಡು ಇಂಗ್ಲೀಷ್ ರೊಮ್ಯಾಂಟಿಕ್ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀನು ಸರಿಯಾಗಿ ಬಟ್ಟೆ ಹಾಕಮ್ಮಾ ಎಂದು ತಿಳಿ ಹೇಳಿದ್ದಾರೆ.

ಇನ್ನು ಕೆಲವು ನೆಟ್ಟಿಗರು ನೀನು ರೀಲ್ಸ್ ಮಾಡಿರೋ ಹಾಡು ಯಾವ ಬೋ.... ಮಗನಿಗೆ ಅರ್ಥ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬರು, ನಿನ್ ಯೋಗ್ಯತೆಗೆ ಚಂದನ್‌ಶೆಟ್ಟಿ ಬೇಡ ಅಂತೀಯಾ, ಲೆಕ್ಕ ನೋಡಿದರೆ ಅವನೇ ನಿನ್ನನ್ನು ಬೇಡ ಅಂತ ಬಿಟ್ಟು ಹೋಗಬೇಕು' ಎಂದು ತುಸು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ಇಷ್ಟಪಡುವ ಅಭಿಮಾನಿಗಳನ್ನು ಪಡೆಯುವುದಕ್ಕೆ ನೀವೇನೂ ಹೆಚ್ಚಾಗಿ ಪ್ರದರ್ಶನ ಮಾಡಬೇಕಿಲ್ಲ, ನೀವು ಸಭ್ಯರಾಗಿ ಮತ್ತು ಉತ್ತಮ ಪಾತ್ರವನ್ನು ನಿರ್ವಹಣೆ ಮಾಡಿದರೆ ನಿಮ್ಮನ್ನು ಹೆಚ್ಚಿನ ಅಭಿಮಾನಿಗಳು ಹಿಂಬಾಲಿಸುತ್ತಾರೆ ಎಂದು ಸಲಹೆ ಕೊಟ್ಟಿದ್ದಾರೆ.

ನನ್ನೊಂದಿಗೆ ಸದಾ ಜೊತೆಯಾಗಿರು... ಐ ಲವ್​ ಯು ಎಂದ ನಿವೇದಿತಾ! ಯಾರೀ ಹೊಸ ಎಂಟ್ರಿ? ತಲೆ ಕೆಡಿಸಿಕೊಂಡ ಫ್ಯಾನ್ಸ್​

ಶೆಟ್ರು ಮನೆ ಕೋಳಿ ಮೊಟ್ಟೆ ಹಾಕದೇನೆ ಹೋಯ್ತು ಎಂದಿದ್ದ ನೆಟ್ಟಿಗರು: ಚಂದನ್ ಶೆಟ್ಟಿಯಿಂದ ಡಿವೋರ್ಸ್ ಪಡೆದ ನಿವೇದಿತಾ ಗೌಡ ತಮ್ಮ ವೈಯಾರದ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಡಿವೋರ್ಸ್ ನಂತರ ಸ್ವತಂತ್ರವಾಗಿ ಹಾರುತ್ತಿರುವ ಹಕ್ಕಿ, ಪಂಜರದಿಂದ ಹೊರಬಂದ ಗಿಳಿ ಎಂದು ಹಲವರು ಹೊಗಳಿದ್ದಾರೆ. ಆದರೆ, ಇನ್ನು ಕೆಲವರು ನೀವಿಬ್ಬರೂ ಮತ್ತೆ ಒಂದಾಗಿ ಎಲ್ಲ ವೈಮನಸ್ಸು ಬದಿಗಿಟ್ಟು ಸಂಸಾರ ಮಾಡಿ ಎಂದು ಸಲಹೆ ಕೊಡುತ್ತಿದ್ದಾರೆ. ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲೊಬ್ಬ 'ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು ಎಂತ ಕೋಳಿ ಲೇ ಇದು' ಎಂದು ಕಾಮೆಂಟ್ ಮಾಡಿದ್ದರು.

click me!