
ಬೆಂಗಳೂರು (ಅ.08): ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸೂಚನೆಯ ಮೇರೆಗೆ 'ಬಿಗ್ ಬಾಸ್ ಕನ್ನಡ ಸೀಸನ್ 12' ರಿಯಾಲಿಟಿ ಶೋ ಸ್ಥಗಿತಗೊಂಡಿರುವ ಕುರಿತು ಬಿಗ್ ಬಾಸ್ ಕನ್ನಡ ಸೀಸನ್ 6 ರ ವಿಜೇತ ಶಶಿಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವಾಗ ನಿರ್ಮಾಣ ಸಂಸ್ಥೆಯಾದ ಜಾಲಿವುಡ್ ಸ್ಟುಡಿಯೋಸ್ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ. ಬಿಗ್ ಬಾಸ್‌ನಂತಹ ಕಾರ್ಯಕ್ರಮ ನಡೆಸುವಾಗ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿದ್ದರೆ, ಪೊಲ್ಯೂಷನ್ ಕಂಟ್ರೋಲ್ ಮಂಡಳಿ ನೋಟಿಸ್ ನೀಡುವುದು ಸರಿಯಾಗಿದೆ ಎಂದು ಹೇಳಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಬಂದಿದ್ದರೂ ಜಾಲಿವುಡ್ ಸ್ಟುಡಿಯೋಸ್ ಅದನ್ನು ನಿರೀಕ್ಷಿಸಿದೆ ಎಂದು ಶಶಿಕುಮಾರ್ ಆರೋಪಿಸಿದ್ದಾರೆ. 'ಟಿಸ್‌ಗಳಿಗೆ ಸ್ಪಂದಿಸಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕಿತ್ತು. ಆದರೆ ಜಾಲಿವುಡ್ ಅದನ್ನು ನಿರೀಕ್ಷಿಸಿದೆ. ಇದು ಸಂಪೂರ್ಣವಾಗಿ ಜಾಲಿವುಡ್‌ನವರ ಜವಾಬ್ದಾರಿ'ಎಂದು ಸ್ಪಷ್ಟಪಡಿಸಿದರು. ಸಾಮಾನ್ಯವಾಗಿ ಕಾರ್ಯಕ್ರಮದ ಆಯೋಜಕರು (ಚಾನೆಲ್ ಅಥವಾ ಪ್ರೊಡಕ್ಷನ್ ಹೌಸ್) ನಿರ್ಮಾಣ ಸಂಸ್ಥೆಯು ಎಲ್ಲಾ ಸರ್ಕಾರಿ ನಿಯಮಗಳನ್ನು ಪಾಲಿಸಿದೆ ಎಂಬ ವಿಶ್ವಾಸದಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ, ಜಾಲಿವುಡ್ ಸರ್ಕಾರದ ' ಬ್ರೇಕ್ ಮಾಡಿದರ ಪರಿಣಾಮ'ಇವತ್ತು ಬಿಗ್ ಬಾಸ್ ಆಯೋಜಕರು (ಎಂಡೆಮೋಲ್ ಶೈನ್) ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ ಎಂದು ಶಶಿಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಸ್ಥಗಿತಗೊಂಡಿರುವ ಈ ಘಟನೆ ಇತರ ಎಲ್ಲ ಉದ್ಯಮಗಳಿಗೂ ಒಂದು ಮಾದರಿ (Lesson) ಆಗಬೇಕು ಎಂದಿರುವ ಶಶಿಕುಮಾರ್, ಈ ಮೂಲಕ ಒಂದು ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ರೂಲ್ಸ್ ಫಾಲೋ ಮಾಡ್ಲೇಬೇಕು ಅನ್ನೋ ಮೆಸೇಜ್ ಎಲ್ಲ ಇಂಡಸ್ಟ್ರಿಗಳಿಗೆ ತಲುಪಿದೆ, ಎಂದು ಅವರು ಒತ್ತಿ ಹೇಳಿದರು. ಕೊನೆಯಲ್ಲಿ, ಈ ಕಾನೂನು ತೊಡಕುಗಳನ್ನು ಬಗೆಹರಿಸಿಕೊಂಡು ಶೀಘ್ರದಲ್ಲೇ ಬಿಗ್ ಬಾಸ್ ಶೋ ಪುನಾರಂಭವಾಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಬಿಗ್ ಬಾಸ್‌ನಂತಹ ಬೃಹತ್ ಶೋಗೆ ಎದುರಾದ ಈ ಅಡಚಣೆಗೆ ಶಶಿಕುಮಾರ್ ನೇರವಾಗಿ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯವನ್ನೇ ಹೊಣೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.