ಧರ್ಮ‌ ಬೈಕ್ ಹಿಂದೆ ಅನುಷಾ, ಬಿಗ್ ಬಾಸ್ ಲವ್ ಕಪಲ್ ವಿಡಿಯೋ ವೈರಲ್

By Roopa Hegde  |  First Published Oct 14, 2024, 3:06 PM IST

ಬಿಗ್ ಬಾಸ್ ಸೀಸನ್ 11ರಲ್ಲಿ ತ್ರಿಕೋನ ಲವ್ ಸ್ಟೋರಿ ಸದ್ದು ಮಾಡ್ತಿದೆ. ಸುದೀಪ್ ಮುಂದೆ, ವೇದಿಕೆ ಮೇಲೆಯೆ ಕುಟುಂಬಸ್ಥರ ಆಶೀರ್ವಾದ ಪಡೆದು ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಅನುಷಾ ಹಾಗೂ ಧರ್ಮರ ಮಧ್ಯೆ ಐಶ್ವರ್ಯ ಬಂದಿದ್ದು, ಈಗ ಪ್ರೇಮಿಗಳ ವಿಡಿಯೋ ವೈರಲ್ ಆಗಿದೆ.
 


ಬಿಗ್ ಬಾಸ್ ಸೀಸನ್ 11 ರಲ್ಲಿ (Bigg Boss Season 11) ಟ್ರೈ ಆಂಗಲ್ ಲವ್ ಸ್ಟೋರಿ (Triangle Love Story) ಶುರು ಆಗಿದೆ. ನಟ ಧರ್ಮ (Actor Dharma) ಕೀರ್ತಿರಾಜ್ ಮೇಲೆ ನಟಿ ಐಶ್ವರ್ಯ ಸಿಂದೋಗಿ (Actress Aishwarya Sindogi) ಹಾಗೂ ಅನುಷಾ ರೈ (Anusha Rai) ಕಣ್ಣು ಬಿದ್ದಿದೆ. ಜೋಡಿಯಾಗೆ ಬಿಗ್ ಬಾಸ್ ಮನೆಗೆ ಬಂದಿರುವ ಧರ್ಮ ಹಾಗೂ ಅನುಷಾ ಮಧ್ಯೆ ಐಶ್ವರ್ಯ ಪ್ರವೇಶವಾಗಿದೆ.  ನಾವಿಬ್ಬರೂ ಫ್ರೆಂಡ್ಸ್, ನಾಲ್ಕೈದು ವರ್ಷದಿಂದ ಪರಿಚಯ. ಇಬ್ಬರು ಮೂರು ಸಿನಿಮಾ ಒಟ್ಟಿಗೆ ಮಾಡಿದ್ದೇವೆ ಎನ್ನುತ್ತ ತಮ್ಮಿಬ್ಬರ ಮಧ್ಯೆ ಏನೂ ಇಲ್ಲ ಎಂಬ ಸ್ಪಷ್ಟನೆಯನ್ನು ಅನುಷಾ ಹಾಗೂ ಧರ್ಮ ನೀಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇವರಿಬ್ಬರೂ ಹಾಯಾಗಿದ್ರೆ ಮನೆ ಹೊರಗೆ ಅವರ ವಿಡಿಯೋ ವೈರಲ್ ಆಗಿದೆ. 

ಅನುಷಾ ಹಾಗೂ ಧರ್ಮ ಬರೀ ಫ್ರೆಂಡ್ಸಾ ಅಥವಾ ಇಬ್ಬರ ಮಧ್ಯೆ ಫ್ರೆಂಡ್ಶಿಪ್ ಗೆ ಮೀರಿದ್ದು ಇದ್ಯಾ ಎಂಬ ಪ್ರಶ್ನೆ ಈ ವಿಡಿಯೋ ನೋಡಿದ ನಂತ್ರ ಫ್ಯಾನ್ಸ್ ತಲೆಹೊಕ್ಕಿದೆ. ಇನ್ಸ್ಟಾ ಖಾತೆಯಲ್ಲಿ ಅನುಷಾ ಹಾಗೂ ಧರ್ಮ ಒಟ್ಟಿಗೆ ಇರುವ ವಿಡಿಯೋ ಪೋಸ್ಟ್ ಮಾಡಲಾಗಿದೆ. mr.dpictures ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಅನುಷ್ಕಾ ರೈ, ಧರ್ಮ ಲವ್ ವಿಡಿಯೋ ವೈರಲ್ ಅಂತ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋದಲ್ಲಿ ಧರ್ಮ ಬೈಕ್ ರೈಡ್ ಮಾಡ್ತಿದ್ದರೆ, ಅನುಷಾ ಹಿಂದೆ ಕುಳಿತು ವಿಡಿಯೋ ಮಾಡ್ತಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಧರ್ಮ ಪೊಲೀಸ್ ಡ್ರೆಸ್ ಹಾಕಿದ್ರೆ, ಅನುಷಾ ಕೈನಲ್ಲಿ ಲಾಠಿ ಹಿಡಿದು ನಿಂತಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್, ಬೆಸ್ಟ್ ಕಪಲ್ ಅಂತ ಕಮೆಂಟ್ ಮಾಡಿದ್ದಾರೆ. ಹಾಗೆಯೇ ಇದು ಲವ್ ಅಂತ ಹೇಗೆ ಹೇಳ್ತೀರಾ ಎಂದು ಪ್ರಶ್ನೆ ಕೂಡ ಮಾಡಿದ್ದಾರೆ. 

Tap to resize

Latest Videos

undefined

ಬಿಗ್​ಬಾಸ್​ ಫ್ಯಾನ್ಸ್​ಗೆ ಮತ್ತೊಂದು ಆಘಾತ: ಸುದೀಪ್​ ಬಳಿಕ ಮನೆಯಿಂದ ಖುದ್ದು ಬಿಗ್​ಬಾಸೇ ಹೊರಕ್ಕೆ! ಏನಾಗ್ತಿದೆ ಇಲ್ಲಿ?

ನಿನ್ನೆ ಸೂಪರ್ ಸಂಡೆ ವಿತ್ ಸುದೀಪ್ (Sudeep) ಶೋನಲ್ಲಿಯೂ ಈ ತ್ರಿಕೋನ ಪ್ರೇಮಕಥೆ ಸುದ್ದಿಯಾಗಿತ್ತು. ಪ್ರಶ್ನೋತ್ತರ ಸೆಷನ್ ನಲ್ಲಿ ಸುದೀಪ್ ಧರ್ಮ, ಅನುಷಾ ಜೊತೆ ಮಾತನಾಡಿದ್ರೆ ಐಶ್ವರ್ಯ ಮುಖ ಸಣ್ಣದಾಗುತ್ತೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಮನೆಯ ಅನೇಕ ಸದಸ್ಯರು ಯಸ್ ಎಂದು ಉತ್ತರ ನೀಡಿದ್ದರು. ಈ ಉತ್ತರಕ್ಕೆ ಅವರು ಕಾರಣ ಕೂಡ ಹೇಳಿದ್ದರು. ಹಿಂದಿನ ಎಪಿಸೋಡ್ ಗಳಲ್ಲಿ ಐಶ್ವರ್ಯ, ಧರ್ಮ ಸ್ವಭಾವವನ್ನು ಹೊಗಳಿದ್ದು ಒಂದಾದ್ರೆ, ಅನುಷಾ ಜೊತೆ ಧರ್ಮ ಬಾತ್ ರೂಮ್ ಗೆ ಹೋಗಿ ಬಂದ್ಮೇಲೆ, ಐಶ್ವರ್ಯ- ಧರ್ಮ ವಾಕ್ ಹೋಗಿದ್ದರು. ಅಲ್ಲದೆ ಅನುಷಾ ಹಾಗೂ ಧರ್ಮ ಹಳೆ ಲವ್ ಸ್ಟೋರಿ ಕೇಳಿ ಐಶ್ವರ್ಯ ಬೇಸರವ್ಯಕ್ತಪಡಿಸಿದ್ದರು. ಇದೆಲ್ಲವನ್ನೂ ನೋಡಿದ ಮನೆ ಸದಸ್ಯರು ಯಸ್ ಅಂತ ಉತ್ತರ ನೀಡಿದ್ರೆ, ಐಶ್ವರ್ಯ ಮಾತ್ರ ಇದನ್ನು ತಳ್ಳಿ ಹಾಕಿದ್ದರು. ನಾನು ಧರ್ಮ ಜೊತೆ ಮಾತನಾಡಿದ್ರೆ ಅನುಷಾಗೆ ಬೇಸರವಾಗುತ್ತೆ ಎಂದಿದ್ದರು.

ದೇವರ, ಕಲ್ಕಿ, ಸಲಾರ್ ಚಿತ್ರಗಳನ್ನು ಟೀಕಿಸಿದವರಿಗೆ ನಿರ್ಮಾಪಕ ನಾಗವಂಶಿ ತಿರುಗೇಟು!

ಈ ಸಂಭಾಷಣೆ ಮಧ್ಯೆ ಗೋಲ್ಡನ್ ಸುರೇಶ್ ಕೂಡ, ಹೌದು, ಅದೇನೋ ಹಳೆ ಲವ್ ಸ್ಟೋರಿ ಇದೆ ಎಂದಿದ್ದರು. ಆದ್ರೆ ಇದನ್ನು ಧರ್ಮ ಸಂಪೂರ್ಣ ತಳ್ಳಿ ಹಾಕಿದ್ದರು. ನಾನು ಮತ್ತು ಅನುಷಾ ಬೆಸ್ಟ್ ಫ್ರೆಂಡ್. ನಾನು ಐಶ್ವರ್ಯ ಕೂಡ ಬೆಸ್ಟ್ ಫ್ರೆಂಡ್ಸ್. ಇಲ್ಲಿ ಯಾರ ಜೊತೆ ಯಾರು ಮಾತನಾಡಿದ್ರೂ ಯಾರಿಗೂ ಬೇಸರವಿಲ್ಲ ಎಂದಿದ್ದರು. ಬ್ರೇಕ್ ವೇಳೆ ಅನುಷಾ ಹಾಗೂ ಐಶ್ವರ್ಯ ಹಗ್ ಮಾಡಿಕೊಂಡಿದ್ದರಲ್ಲದೆ, ಅನುಷಾ, ಸುರೇಶ್ ಅವರನ್ನು ಪರ್ಸನಲ್ ವಿಷ್ಯ ಏಕೆ ಹೇಳ್ತೀರಿ ಎನ್ನುತ್ತ ತರಾಟೆಗೆ ತೆಗೆದುಕೊಂಡಿದ್ದರು. ಬಿಗ್ ಬಾಸ್ ಶುರುವಾದ ಎರಡನೇ ದಿನವೇ ಐಶ್, ಅನುಷಾ ಹಾಗೂ ಧರ್ಮ ಪ್ರೇಮಕಥೆ ಶುರುವಾಗಿತ್ತು. ಇಬ್ಬರು ಒಟ್ಟಿಗೆ ಬಂದ್ರೆ ಏನು ಮಾಡ್ತೀರಿ ಎಂದಾಗ, ಇಬ್ಬರ ಜೊತೆ ಖುಷಿಯಾಗಿರ್ತೇನೆ ಎಂದಿದ್ರು ಧರ್ಮ.  

click me!