ಅಪ್ಪನ ಜೊತೆ ಗದ್ದೆಯಲ್ಲಿ ಡ್ರೋನ್ ಪ್ರತಾಪ್, ಸುದೀಪ್‌ ನೆನೆದ ನೆಟ್ಟಿಗರು

Published : Sep 26, 2024, 12:19 PM ISTUpdated : Sep 26, 2024, 01:45 PM IST
ಅಪ್ಪನ ಜೊತೆ ಗದ್ದೆಯಲ್ಲಿ ಡ್ರೋನ್ ಪ್ರತಾಪ್, ಸುದೀಪ್‌ ನೆನೆದ ನೆಟ್ಟಿಗರು

ಸಾರಾಂಶ

ಬಿಗ್ ಬಾಸ್ 10 ಸ್ಪರ್ಧಿ ಡ್ರೋನ್ ಪ್ರತಾಪ್ ಸುಂದರ ವಿಡಿಯೋ ಒಂದು ವೈರಲ್ ಆಗಿದೆ. ಇದ್ರಲ್ಲಿ ಅಪ್ಪ – ಮಗ ಒಟ್ಟಿಗೆ ಗದ್ದೆಯಲ್ಲಿ ಕುಳಿತು ಊಟ ಮಾಡ್ತಿದ್ದು, ಇದನ್ನು ನೋಡಿ ಫ್ಯಾನ್ಸ್ ಭಾವುಕರಾಗಿದ್ದಾರೆ.  

ಡ್ರೋನ್ (drone) ವಿಚಾರಕ್ಕೆ ಇಡೀ ದೇಶದಾದ್ಯಂತ ಸುದ್ದಿ ಮಾಡಿ ಕನ್ನಡಿಗರ ಕಣ್ಣಲ್ಲಿ ಬ್ಯಾಡ್ ಬಾಯ್ ಎನ್ನಿಸಿಕೊಂಡಿದ್ದ ಡ್ರೋನ್ ಪ್ರತಾಪ್ (Drone Pratap) ವರ್ಚಸ್ಸು ಬದಲಾಗಿದ್ದು ಬಿಗ್ ಬಾಸ್ ಗೆ ಬಂದ್ಮೇಲೆ. ಬಿಗ್ ಬಾಸ್ ಸೀಸನ್ 10ರಲ್ಲಿ ಕಾಣಿಸಿಕೊಂಡಿದ್ದ ಡ್ರೋನ್ ಪ್ರತಾಪ್, ಕರ್ನಾಟಕದ ಜನರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದರು. ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಡ್ರೋನ್ ಪ್ರತಾಪ್, ಬಿಗ್ ಬಾಸ್ (Bigg Boss) ಮನೆಯಿಂದ ಹೊರಗೆ ಬಂದ್ಮೇಲೂ ಆಗಾಗ ಸುದ್ದಿ ಮಾಡ್ತಿರುತ್ತಾರೆ. ಬಡ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಣ ಸಹಾಯ ಮಾಡ್ತಿರುವ ಪ್ರತಾಪ್, ಅಪ್ಪ – ಅಮ್ಮನ ಜೊತೆ ಹಳ್ಳಿಯಲ್ಲಿ ಕೆಲಸ ಮಾಡ್ತಿದ್ದಾರೆ. ಅಪ್ಪನಿಗೆ ಗದ್ದೆ ಕೆಲಸದಲ್ಲಿ ಸಹಾಯ ಮಾಡ್ತಿರುವ ಡ್ರೋನ್, ಸೋಶಿಯಲ್ ಮೀಡಿಯಾ (Social Media )ದಲ್ಲಿ ಇದ್ರ ಫೋಟೋಗಳನ್ನು ಹಂಚಿಕೊಳ್ತಿರುತ್ತಾರೆ. ಈ ಹಿಂದೆ ಗದ್ದೆ ನಾಟಿ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದರು. ಈಗ ಅಪ್ಪನ ಜೊತೆಗಿರುವ ಸುಂದರ, ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಡ್ರೋನ್ ಪ್ರತಾಪ್ ತಮ್ಮ ತಂದೆ ಮರಿಮಾದಯ್ಯ ಅವರ ಜೊತೆ ಗದ್ದೆಯಲ್ಲಿ ಕೆಲಸ ಮಾಡ್ತಿದ್ದಾರೆ. ಗದ್ದೆ ಕಂಟದ ಮೇಲೆ ಕುಳಿತ ಮಗನಿಗೆ ಅಪ್ಪ, ಎಲೆಯಲ್ಲಿ ಅನ್ನ, ಸಾಂಬಾರ್ ಹಾಕಿಕೊಡ್ತಾರೆ. ಅಪ್ಪನ ಜೊತೆ ಖುಷಿಯಾಗಿ ಊಟ ಮುಗಿಸುವ ಡ್ರೋನ್ ಪ್ರತಾಪ್, ಅದೇ ನೀರಿನಲ್ಲಿ ಕೈ ತೊಳೆದುಕೊಳ್ತಾರೆ. ಅವರ ಬಟ್ಟೆ ಕೊಳಕಾಗಿದ್ದು, ಕೈ ಕೆಸರಾದ್ರೆ ಬಾಯಿ ಮೊಸರು ಎಂಬುದನ್ನು ಪ್ರತಾಪ್ ಅರಿತಂತಿದೆ.

ನರ್ಸ್ ಗೆ ಅಮೃತಧಾರೆಯಲ್ಲಿ ಅವಮಾನ, ರೊಚ್ಚಿಗೆದ್ದ ಫ್ಯಾನ್ಸ್

ಡ್ರೋನ್ ಪ್ರತಾಪ್ ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಪ್ಪ – ಮಗನನ್ನು ಒಟ್ಟಿಗೆ ನೋಡಿದ ಜನರ ಕಣ್ಣಲ್ಲಿ ನೀರು ತುಂಬಿದೆ. ಬಿಗ್ ಬಾಸ್ ಅದ್ರಲ್ಲೂ  ವಿಶೇಷವಾಗಿ ಕಿಚ್ಚ ಸುದೀಪ್ (Kiccha Sudeep) ಅವ್ರಿಂದ ಇದೆಲ್ಲ ಸಾಧ್ಯವಾಯ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಈ ಪುಣ್ಯ ಬಿಗ್ ಬಾಸ್ ಮತ್ತು ಕಿಚ್ಚ ಸುದೀಪ್ ಅವರಿಗೆ ಸಲ್ಲಬೇಕು. ಬಿಗ್ ಬಾಸ್ ನಿಂದ ದೂರವಾಗಿದ್ದ ಅಪ್ಪ – ಮಗನ ಸಂಬಂಧ ಹತ್ತಿರವಾಯಿತು ಎಂಬ ಕಮೆಂಟ್ ಬಂದಿದೆ. 

ಬಿಗ್ ಬಾಸ್ ಶೋಗೆ ಬಂದು ಪ್ರತಾಪ್ ಗೆ ಅಂಟಿದ್ದ ಕಳಂಕ ದೂರವಾಗಿದೆ, ಇದಕ್ಕೆ ಸುದೀಪ್ ಸರ್ ಗೆ ಧನ್ಯವಾದ ಹೇಳ್ಬೇಕು ಎಂದು ಡ್ರೋನ್ ಪ್ರತಾಪ್ ಅಭಿಮಾನಿಗಳು ಬರೆದಿದ್ದಾರೆ. ಒಟ್ಟಿನಲ್ಲಿ ಡ್ರೋನ್ ಮಾಡ್ತಿರೋ ಕೆಲಸ, ಅವರ ಪ್ರಸಿದ್ಧಿಗೆ ಬಿಗ್ ಬಾಸ್, ಕಿಚ್ಚ ಸುದೀಪ್ ಕಾರಣ ಎಂಬುದು ನೆಟ್ಟಿಗರ ಮಾತು.

ಮಗಳು ಸುಂದ್ರಿ ಅಂದ್ಕೊಂಡೆ ಆದರೆ ನೀವು ತ್ರಿಪುರ ಸುಂದರಿ; ಚಾರು ತಾಯಿ ಜೊತೆಗಿರುವ ಫೋಟೋ ವೈರಲ್!

ಬಿಗ್ ಬಾಸ್ ಸೀಸನ್ 10ರ ಮನೆ ಸೇರಿದ್ದ ಡ್ರೋನ್ ಪ್ರತಾಪ್ , ಆರಂಭದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆ ನಂತ್ರ ಅವರ ವ್ಯಕ್ತಿತ್ವದ ಪರಿಚಯ ಜನರಿಗೆ ಆಗ್ತಾಹೋಯ್ತು. ಮೂರು ವರ್ಷಗಳಿಂದ ಡ್ರೋನ್, ಅಪ್ಪನ ಜೊತೆ ಮಾತನಾಡಿರಲಿಲ್ಲ. ಈ ವಿಷ್ಯವನ್ನು ಅವರು ಬಿಗ್ ಬಾಸ್ ಮನೆಯಲ್ಲಿ ಆಗಾಗ ಹೇಳ್ತಿದ್ದರು. ಮನೆಯವರ ಊಟ, ಪತ್ರ ಬಂದಾಗ್ಲೂ ಡ್ರೋನ್, ಪತ್ರ ಮಿಸ್ ಮಾಡ್ಕೊಂಡಿದ್ದರು. ಪಾಯಸವನ್ನಷ್ಟೇ ತಿಂದಿದ್ದ ಡ್ರೋನ್ ಪ್ರತಾಪ್ ಗೆ ಇದು ಎಲ್ಲಿಂದ ಬಂದಿದ್ದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್, ಡ್ರೋನ್ ಗೆ ಮರೆಯಲಾಗದ ಉಡುಗೊರೆ ನೀಡಿದ್ದರು. ಅಪ್ಪನಿಗೆ ಕರೆ ಮಾಡಿ ಮಾತನಾಡಿಸಿದ್ರು. ಮೂರು ವರ್ಷದ ನಂತ್ರ ಅಪ್ಪನ ಧ್ವನಿ ಕೇಳಿ ಖುಷಿಯಾಗಿದ್ದ ಡ್ರೋನ್ ಪ್ರತಾಪ್, ಸುದೀಪ್ ಹಾಗೂ ಬಿಗ್ ಬಾಸ್ ಗೆ ಧನ್ಯವಾದ ಹೇಳಿದ್ದರು. ಅವರ ತಂದೆ ಕೂಡ ಕಿಚ್ಚ ಸುದೀಪ್  ಗೆ ಧನ್ಯವಾದ ತಿಳಿಸಿದ್ದರು. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದಾದ ತಂದೆ – ಮಗ ಸದಾ ಖುಷಿಯಾಗಿರಲಿ ಅನ್ನೋದೇ ಫ್ಯಾನ್ಸ್ ಆಶೀರ್ವಾದ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!