'ಯುಟ್ಯೂಬ್‌ ಪ್ರಮೋಶನ್‌ಗೆ ಇಷ್ಟು ಚಾರ್ಜ್‌ ಮಾಡ್ತೀನಿ'- Sonu Gowda ಆದಾಯ ಕೇಳಿದ್ರೆ ಹೌಹಾರೋದು ಪಕ್ಕಾ!

Published : Aug 26, 2025, 06:21 PM IST
sonu gowda

ಸಾರಾಂಶ

Sonu Gowda Income: ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ ಸೋನು ಗೌಡ ದುಡ್ಡಿಗೋಸ್ಕರವೇ ನಾನು ಇದನ್ನೆಲ್ಲ ಮಾಡೋದು, ನನ್ನ ತಿಂಗಳ ಆದಾಯ ಇಷ್ಟಿದೆ ಎಂದು ಹೇಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ, ಟ್ರೋಲ್‌ ಆಗುವ, ಜನರಿಂದ ನೆಗೆಟಿವ್‌ ಕಾಮೆಂಟ್ಸ್‌ಗಳ ಸುರಿಮಳೆಯನ್ನು ತಗೊಳ್ಳುವ ಸೋನು ಗೌಡ ಈಗ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಭರ್ಜರಿ ಬಟ್ಟೆ ಪ್ಯಾಕ್‌ ಮಾಡಿಕೊಂಡು ಶ್ರೀಲಂಕಾ ಬೀಚ್‌ನಲ್ಲಿ ಬಿ*ಕಿನಿ ಹಾಕಿಕೊಂಡು ತಿರುಗಾಡಿರೋ ಅವರೀಗ ಹೋಟೆಲ್‌ವೊಂದರಲ್ಲಿ ಭರ್ಜರಿ ಭೋಜನ ಸವಿದಿದ್ದಾರೆ.

ಕ್ಯಾಶ್‌ ಇಲ್ಲದೆ ಪರದಾಟ!

ಆಟೋ ರಿಕ್ಷಾ ಮಾಲೀಕನಿಗೆ ಹಣ ಕೊಡಲು ಕ್ಯಾಶ್‌ ಇಲ್ಲದೆ ಸೋನು ಶ್ರೀನಿವಾಸ್‌ ಗೌಡ ಪರದಾಡಿದ್ದರು. ಅಷ್ಟೇ ಅಲ್ಲದೆ ವ್ಯಾಯಾಮ ಮಾಡಿ ಫಿಟ್‌ ಆಗಿರೋ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದರು.

ನಟನೆ ಬಿಟ್ರಾ?

“ಸೋನು ಶ್ರೀನಿವಾಸ್‌ ಗೌಡ ಅವರು ಹೋಟೆಲ್‌ನಲ್ಲಿ ಊಟ ಮಾಡುವಾಗ, ಓರ್ವ ವ್ಯಕ್ತಿ ಅವರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. “ಅಲ್ಲಿನ ಜನರನ್ನು ನೋಡಿ ಸಾಕಾಗಿ ಫೀಲ್ಡ್‌ ಬಿಟ್ಟೆ” ಎಂದು ಸೋನು ಶ್ರೀನಿವಾಸ್‌ ಗೌಡ ಹೇಳಿದ್ದಾರೆ. ನಟನೆ ಬಗ್ಗೆ ಸೋನು ಈ ಮಾತು ಹೇಳಿದ್ರಾ? ಇಲ್ಲವಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ” ಎಂದು ಸೋನು ಗೌಡ ಹೇಳಿದ್ದಾರೆ.

ಯುಟ್ಯೂಬ್‌ನಿಂದಲೇ ಹಣ

ಇನ್ನು ಸೋನು ಶ್ರೀನಿವಾಸ್‌ ಗೌಡ ಅವರು ಯುಟ್ಯೂಬ್‌ ಆದಾಯದ ಬಗ್ಗೆ ಮಾತನಾಡಿದ್ದಾರೆ. ಸರಿಯಾಗಿ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿದ್ರೆ ತಿಂಗಳಿಗೆ ಕೇವಲ ಯುಟ್ಯೂಬ್‌ನಿಂದಲೇ ಒಂದು ಲಕ್ಷ ರೂಪಾಯಿ ಹಣ ಬರುವುದು ಎಂದು ಅವರು ಹೇಳಿದ್ದಾರೆ.

ಒಂದು ಶಾರ್ಟ್ಸ್‌ಗೆ ಎಷ್ಟು ಹಣ ಆಗುವುದು?

“ಇದರ ಜೊತೆಗೆ ಬ್ರ್ಯಾಂಡ್‌ಗಳ ಜೊತೆಗೆ ಕೊಲೇಬರೇಶನ್‌ ಮಾಡಿಕೊಳ್ತೀನಿ, ಒಂದು ಯುಟ್ಯೂಬ್‌ ಶಾರ್ಟ್ಸ್‌ಗೆ ನಾನು 2.5 ಲಕ್ಷ ರೂಪಾಯಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಯುಟ್ಯೂಬ್‌ ಪ್ರಮೋಶನ್‌ ಎಂದು ತಿಂಗಳಿಗೆ 3-4 ಬ್ರ್ಯಾಂಡ್‌ ಆದರೂ ಬರುವುದು” ಎಂದು ಅವರು ಹೇಳಿದ್ದಾರೆ.

ಯುಟ್ಯೂಬ್‌ ವ್ಲಾಗ್‌ ಮಾಡೋದು ಯಾಕೆ?

“ನಾನು ಸಖತ್‌ ಆಗಿ ಬದುಕ್ತಿದ್ದೀನಿ, ಆರಾಮಾಗಿದ್ದೀನಿ, ನನಗೆ ಯಾವುದೇ ಹಣದ ಸಮಸ್ಯೆ ಇಲ್ಲ. ನನ್ನ ಲೈಫ್‌ಸ್ಟೈಲ್‌ಗೆ ಸಿಕ್ಕಾಪಟ್ಟೆ ಹಣ ಖರ್ಚಾದರೂ ಕೂಡ ಏನೂ ಸಮಸ್ಯೆ ಇಲ್ಲ. ಫ್ಯಾಷನ್‌ಗೋಸ್ಕರ ನಾನು ಯುಟ್ಯೂಬ್‌ ವ್ಲಾಗ್‌ ಮಾಡೋದಿಲ್ಲ, ಹಣ ದುಡಿಯಬೇಕು ಎಂದು ಮಾಡ್ತೀನಿ, ಇದನ್ನು ನಾನು ಪ್ರಾಮಾಣಿಕವಾಗಿ ಹೇಳ್ತೀನಿ” ಎಂದು ಸೋನು ಗೌಡ ಹೇಳಿದ್ದಾರೆ.

ಕುಷ್ಠರೋಗ ಬರಲಿ

“ನನ್ನನ್ನು ನೋಡಿ ಕೆಲವರು ಹೊಟ್ಟೆ ಉರಿದುಕೊಳ್ತಾರೆ, ಹೀಗಾಗಿ ನೆಗೆಟಿವ್‌ ಆಗಿ ಮಾತಾಡ್ತಾರೆ. ನನಗೆ ಕೆಲವರು ಕೆಟ್ಟದಾಗಿ ಕಾಮೆಂಟ್‌ ಮಾಡ್ತಾರೆ. ಅವರೆಲ್ಲರೂ ಹಾಳಾಗಿ ಹೋಗಲಿ, ಕುಷ್ಟರೋಗ ಬರಲಿ” ಎಂದು ಕೂಡ ಸೋನು ಹೇಳಿದ್ದಾರೆ.

ಟಿಕ್‌ ಟಾಕ್‌ ಮಾಡುತ್ತಿದ್ದ ಸೋನು ಶ್ರೀನಿವಾಸ್‌ ಗೌಡ ಅವರ ಖಾಸಗಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದನ್ನು ಆರಂಭದಲ್ಲಿ ತಳ್ಳಿಹಾಕಿದ್ದ ಸೋನು ಗೌಡ, ಆ ಬಳಿಕ ಬಿಗ್‌ ಬಾಸ್‌ ಕನ್ನಡ ಒಟಿಟಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು, “ಯಾರೂ ತಪ್ಪೇ ಮಾಡಿಲ್ವಾ?ನನ್ನಿಂದ ತಪ್ಪಾಗಿದೆ, ಅದನ್ನು ಕ್ಷಮಿಸಿ. ” ಎಂದು ಹೇಳಿದ್ದರು. ಅಂದಹಾಗೆ ಬಾಯ್‌ಫ್ರೆಂಡ್‌ನಿಂದಲೇ ವಿಡಿಯೋ ಲೀಕ್‌ ಆಯ್ತು ಎಂದು ಹೇಳಿದ್ದರು. ಓರ್ವ ಹುಡುಗಿಯನ್ನು ದತ್ತು ತೆಗೆದುಕೊಳ್ತೀನಿ ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಆ ಹುಡುಗಿಯ ವಿಡಿಯೋ ಸಹಿತ ಶೇರ್‌ ಮಾಡಿದ್ದರು. ಇದರಿಂದ ದೂರು ದಾಖಲಾಗಿ ಒಂದಿಷ್ಟು ದಿನಗಳ ಕಾಲ ಅವರು ಜೈಲಿನಲ್ಲಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ