ಖ್ಯಾತ ನಟಿ ಮಾರಿಮುತ್ತು ಮೊಮ್ಮಗಳು ತನ್ನ ಹಳೆಯ ಕಥೆ ಬಹಿರಂಗ ಪಡಿಸಿದರು. ರಾಕೇಶ್, ಅರ್ಜುನ್, ಸ್ಫೂರ್ತಿ ಗೌಡ, ಸೋಮಣ್ಣ ಮಾಜಿಮಾಡ ಎಲ್ಲರೂ ಕುಳಿತ್ತಿದ್ದರು. ಆ ವೇಳೆ ಜಯಶ್ರೀ ಅರ್ಜುನ್ ಬಳಿ ಮಾತನಾಡುತ್ತಾ 'ನಿನ್ನ ಕಷ್ಟ ನನಗೂ ಅರ್ಥವಾಗುತ್ತದೆ. ಯಾಕೆಂದರೆ ನಾನು ಕೂಡ ಮದುವೆಯಾದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದೆ' ಎಂದು ಹೇಳಿದರು. 'ಮದುವೆಯಾಗಿ ಆತನಿಗೆ ಮಗು ಕೂಡ ಇತ್ತು ಆದರೂ ಅವರ ಜೊತೆ ಸಂಬಂಧದಲ್ಲಿ ಇದ್ದೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಕನ್ನಡ ಅದ್ದೂರಿಯಾಗಿ ಆರಂಭವಾಗಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್ ಓಪನಿಂಗ್ ಮಾಡಲಾಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಒಟಿಟಿಗೆ 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ನಿನ್ನೆಯ ಎಪಿಸೋಡ್ ನಲ್ಲಿ ಸ್ಪರ್ಧಿಗಳು ತಮ್ಮ ಕಷ್ಟದ ದಿನಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪರ್ಧಿಗಳ ಎಮೋಷನಲ್ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ನಾನು ಯಾರು ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ನೋವಿನ ಕಥೆಯನ್ನು ಬಿಚ್ಚಿಟ್ಟರು. ಬಳಿಕ ಲಿವಿಂಗ್ ಏರಿಯಾ ಸೇರಿದ ಸ್ಪರ್ಧಿಗಳು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಖ್ಯಾತ ನಟಿ ಮಾರಿಮುತ್ತು ಮೊಮ್ಮಗಳು ತನ್ನ ಹಳೆಯ ಕಥೆ ಬಹಿರಂಗ ಪಡಿಸಿದರು. ರಾಕೇಶ್, ಅರ್ಜುನ್, ಸ್ಫೂರ್ತಿ ಗೌಡ, ಸೋಮಣ್ಣ ಮಾಜಿಮಾಡ ಎಲ್ಲರೂ ಕುಳಿತ್ತಿದ್ದರು. ಆ ವೇಳೆ ಜಯಶ್ರೀ ಅರ್ಜುನ್ ಬಳಿ ಮಾತನಾಡುತ್ತಾ 'ನಿನ್ನ ಕಷ್ಟ ನನಗೂ ಅರ್ಥವಾಗುತ್ತದೆ. ಯಾಕೆಂದರೆ ನಾನು ಕೂಡ ಮದುವೆಯಾದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದೆ' ಎಂದು ಹೇಳಿದರು. 'ಮದುವೆಯಾಗಿ ಆತನಿಗೆ ಮಗು ಕೂಡ ಇತ್ತು ಆದರೂ ಅವರ ಜೊತೆ ಸಂಬಂಧದಲ್ಲಿ ಇದ್ದೆ. ಬಳಿಕ ಮನೆಯವರಿಗೆಲ್ಲ ಗೊತ್ತಾಯಿತು ದೊಡ್ಡ ಜಗಳವೆ ಆಯಿತು' ಎಂದು ಜಯಶ್ರೀ ತನ್ನ ಹಳೆಯ ಕಥೆ ವಿವರಿಸಿದರು. ತನ್ನ ಮತ್ತು ಸಂಬಂಧ ಹೊಂದಿದ ವ್ಯಕ್ತಿಯ ಮನೆಯವರಿಗೆ ವಿಷಯ ಗೊತ್ತಾದ ಬಳಿಕ ತುಂಬಾ ದೊಡ್ಡ ಸಮಸ್ಯೆ ಆಯಿತು. ಬಳಿಕ ನಾನು ಮನೆಬಿಟ್ಟು ಹೊರಬರಬೇಕಾಯಿತು ಎಂದು ಜಯಶ್ರೀ ಹೇಳಿದರು.
Bigg Boss OTT; ಮೊದಲ ದಿನವೇ ಕಣ್ಣೀರಧಾರೆ, ಕಷ್ಟದ ದಿನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು
ಮನೆಬಿಟ್ಟು ಬಂದ ನಂತರವೂ ಆತನ ಜೊತೆ ಇದ್ದೆ ಎಂದು ಜಯಶ್ರೀ ಹೇಳಿದರು. ಬಳಿಕ ಬ್ಯುಸಿನೆಸ್ ಮಾಡಲು ಪ್ರಾರಂಭಿಸಿದೆ ಎಂದರು. ಅಂದಹಾಗೆ ಜಯಶ್ರೀ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಸಿನಿಮಾ ಅವರ ಕೈ ಹಿಡಿಲಿಲ್ಲ. ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಜಯಶ್ರಿಗೆ ಯಶಸ್ಸು ಸಿಕ್ಕಿದ್ದು ಬ್ಯುಸಿನೆಸ್‌ನಲ್ಲಿ. ಸಿನಿಮಾ ತನ್ನ ಕೈ ಹಿಡಿಲಿಲ್ಲ ಎಂದು ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ ಒಪ್ಪಿಕೊಂಡಿದ್ದಾರೆ.ಹಾಗಾಗಿ ಬ್ಯುಸಿನೆಸ್ ಆರಂಭಿಸಿದ ನಟಿ 50 ಲಕ್ಷ ಸಾಲ ಕೂಡ ಮಾಡಿದ್ದರು. ಸಾಲ ತೀರಿಸಲು ಪ್ರಾರಂಭದಲ್ಲಿ ತುಂಬಾ ಕಷ್ಟ ಪಟ್ಟಿದ್ದ ಜಯಶ್ರೀ ಬಳಿಕ ಯಶಸ್ಸು ಕಂಡರು. ಸಾಲ ಕೊಟ್ಟವರು ಬಂದು ಅನೇಕ ಬಾರಿ ಗಲಾಟೆ ಮಾಡುತ್ತಿದ್ದರು ಎಂದು ಜಯಶ್ರೀ ಹೇಳಿದ್ದಾರೆ.
Bigg Boss OTT ಸೋಷಿಯಲ್ ಮೀಡಿಯಾ ಬೆಡಗಿ ಸೋನು ಶ್ರೀನಿವಾಸ್‌ಗೌಡ ಒರಿಜಿನಲ್ ಹೆಸ್ರು ಬಹಿರಂಗ
ಸದ್ಯ ಬ್ಯುಸಿನೆಸ್ ನಲ್ಲಿ ಯಶಸ್ಸು ಕಂಡಿರುವ ಜಯಶ್ರೀ ಬಿಗ್ ಬಾಸ್ ಮನೆ ಸೇರಿದ್ದಾರೆ. ಬಿಗ್ ಬಾಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿ ಇಲ್ಲಿಯೂ ಯಶಸ್ಸು ಕಾಣುತ್ತಾರಾ ಎಂದು ಕಾದು ನೋಡಬೇಕಿದೆ.