ಯಾಕೋ ನೀ ಮಾಡಿದ್ದು ಸರಿಯಿಲ್ಲ ಕಣಮ್ಮಿ.... ಒಳ್ಳೇ ಹುಡುಗನಿಗೆ ಕೈಕೊಟ್ಟೆ ಅಂತಿದ್ದಾರೆ ನೆಟ್ಟಿಗರು

By Suchethana D  |  First Published Jun 23, 2024, 5:18 PM IST

ಚಂದನ್‌ ಶೆಟ್ಟಿ ಜೊತೆ ಡಿವೋರ್ಸ್‌ ಆದ ಬಳಿಕ ಸೈಲೆಂಟ್‌ ಆಗಿದ್ದ ನಿವೇದಿತಾ ಗೌಡ ಮತ್ತೆ ರೀಲ್ಸ್‌ನಲ್ಲಿ ಮುಳುಗಿದ್ದಾರೆ. ನೆಟ್ಟಿಗರು ಕೋಪದಿಂದ ಏನೆಲ್ಲಾ ಹೇಳ್ತಿದ್ದಾರೆ ನೋಡಿ...  
 


ನಟಿ, ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರ ಮೇಲೆ ಇದೀಗ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಡಿವೋರ್ಸ್ ಆದ ಮೇಲೆ ಮತ್ತೆ ರೀಲ್ಸ್​ ಕಡೆ ಮುಖ ಮಾಡಿರೋ ನಟಿ, ಇಂದು ಮತ್ತೊಂದು ರೀಲ್ಸ್​ ಹಾಕಿದ್ದಾರೆ.

ಅಷ್ಟಕ್ಕೂ ಮೊದಲಿನಿಂದಲೂ  ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಗ್‌ಬಾ‌ಸ್‌ ಬೆಡಗಿ, ಗೊಂಬೆ ಎಂದೇ ಕರೆಸಿಕೊಳ್ತಿರೋ ನಿವೇದಿತಾ ಗೌಡ, ಡಿವೋರ್ಸ್‌ ಕೇಸ್‌ ಬಳಿಕ ಕೆಲ ದಿನ ಸೈಲೆಂಟ್‌ ಆಗಿದ್ರು. ಈಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್​ ಆಗುವ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ ಮೇಲೆ ಕೆಲ ತಿಂಗಳುಗಳಿಂದ ಇನ್ನಷ್ಟು ಹಾಟ್​ ಆಗಿಯೇ ನಟಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇವರಿಬ್ಬರ  ಡಿವೋರ್ಸ್ ಪ್ರಕರಣ  ಅಭಿಮಾನಿಗಳಿಗೆ  ಶಾಕ್‌ ಕೊಟ್ಟಿತ್ತು. ಸ್ವಲ್ಪ ದಿನ ಸುಮ್ಮನೆ ಇದ್ದ ನಟಿ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು ರೀಲ್ಸ್‌ ಮಾಡಿದ್ದಾರೆ. ಡಿವೋರ್ಸ್​ ಬಳಿಕ  ಸಿಂಪಲ್‌ ಡ್ರೆಸ್‌ನಲ್ಲಿ ಮಿಂಚಿದ್ದ ನಿವೇದಿತಾ, ಈಗ ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ಚಂದನ್​ ಶೆಟ್ಟಿ ಮತ್ತೊಂದು ಮದ್ವೆಯಾಗ್ತಿದ್ದಾರಾ? ಕಾರಿನ ವಿಷಯ ಹೇಳುತ್ತಲೇ ಮನದಾಳದ ಮಾತು ಬಿಚ್ಚಿಟ್ಟ ಗಾಯಕ

ಇದನ್ನು ನೋಡಿ ನೆಟ್ಟಿಗರು ಕಿಡಿಕಿಡಿಯಾಗಿದ್ದಾರೆ. ಕೆಲವರು ಚಂದನ್​ ಶೆಟ್ಟಿ ಲೈಫ್​ನ ಹಾಳುಮಾಡಿಬಿಟ್ಟೆ ಎಂದು ಬೈಯುತ್ತಿದ್ದರೆ, ಮತ್ತೆ ಕೆಲವರು ನಿನ್ನ ಈ ಹಾಟ್​ ಅವತಾರ ಯೌವನ ಇರುವವರೆಗೆ ಮಾತ್ರ. ಆ ಬಳಿಕ ಇದೆ ನಿನಗೆ ಮಾರಿ ಹಬ್ಬ ಎಂದೆಲ್ಲಾ ಏಕವಚನದಲ್ಲಿಯೇ ಬೈಯುತ್ತಿದ್ದಾರೆ. ರೀಲ್ಸ್​ ಹುಚ್ಚಿಗೆ ಮದುವೆ ಎನ್ನುವ ಪವಿತ್ರ ಬಂಧವನ್ನೇ ಹಾಳು ಮಾಡಿರುವವಳು ನೀನು ಎಂದೆಲ್ಲಾ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರೀಲ್ಸ್​  ಮಾಡಿದ್ದಾಗ, ಕೆಲವರು ನಿನ್ನನ್ನು ನೋಡಿ ಏನೋ ಹೇಳಬೇಕು ಅಂದುಕೊಂಡೆ, ಆದ್ರೆ ಶೆಡ್‌ ನೆನಪಾಗಿ ಅದ್ರ ಸಹವಾಸ ಬೇಡ ಅಂತ ಸುಮ್ಮನೇ ಬಿಟ್ಟಿದ್ದೇನೆ ಎಂದಿದ್ದರು.  

ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ರೀಲ್ಸ್​ ಮಾಡುವುದು ಕೆಲವು ತಿಂಗಳುಗಳಿಂದ ಹೆಚ್ಚುತ್ತಲೇ ಇತ್ತು. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಿದ್ದರು. . ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಆಗ ಪತಿಯಾಗಿದ್ದ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿದ್ದರು. ಸಾಮಾನ್ಯವಾಗಿ ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿತ್ತು. ಆದರೆ ಇದೀಗ ಡಿವೋರ್ಸ್​ ವಿಷಯವನ್ನೇ ಕೆದಕಿ ಕಮೆಂಟ್​ ಹಾಕಲಾಗುತ್ತಿದೆ. 

ಯಾರಿಗೂ ತಿಳಿಯದಂತೆ ಸೈಲೆಂಟಾಗಿ ಡಿವೋರ್ಸ್​ ಆಗೋಣ ಅಂದ್ಕೊಂಡಿದ್ವಿ... ಆದ್ರೆ ಆ ದಿನ...
 

click me!