
ಮಾಸ್ಟರ್ ಟ್ಯಾಲೆಂಟ್ ಹರೀಶ್ ರಾಜ್ ಹೊಸ ವರ್ಷವನ್ನು ವಿಜೃಭಣೆಯಿಂದ ಆರಂಭಿಸಿದ್ದಾರೆ. ಕುಟುಂಬಕ್ಕೆ ಬರ ಮಾಡಿಕೊಂಡ ಎರಡನೇ ಮಗುವಿನ ಫೋಟೋ ಹಾಗೂ ಹೆಸರು ರಿವೀಲ್ ಮಾಡಿದ್ದಾರೆ. ಮುದ್ದಾದ ಫ್ಯಾಮಿಲಿ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ತಂದೆಯಾದ ಸಂಭ್ರಮದಲ್ಲಿ ಮಜಾಭಾರತ ಹರೀಶ್; ಮನೆಗೆ ಬಂದಿದ್ದಾಳೆ ಪುಟಾಣಿ!
ಹರೀಶ್ ಪೋಸ್ಟ್:
'ಈ ಹೊಸ ವರ್ಷ ನಮಗೆ ತುಂಬಾ ಸ್ಪೆಷಲ್ ಏಕೆಂದರೆ ನಾವು ನಮ್ಮ ಎರಡನೇ ಮಗಳಿಗೆ Dharshika ಎಂದು ಹೆಸರಿಟ್ಟಿದ್ದೇವೆ. ನಾವು ನಾಲ್ವರು ಒಟ್ಟಾಗಿರುವ ಫೋಟೋ. ದೇವರಲ್ಲಿ ಬೇಡುತ್ತೇನೆ. ನಿಮಗೆ ಆರೋಗ್ಯ, ಆಯುಷ್ಯ ನೀಡಲಿ,' ಎಂದು ಹರೀಶ್ ಬರೆದುಕೊಂಡಿದ್ದಾರೆ.
2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರೀಶ್ ರಾಜ್‌ಗೆ ಹಿರಿ ಮಗಳನ್ನು ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಅನೇಕರು ನೋಡಿದ್ದಾರೆ. ಪತ್ನಿ ಶ್ರುತಿ ಎಂಎಸ್‌ಸಿ ಪದವೀಧರೆ. ಮಜಾ ಭಾರತ ನಿರೂಪಣೆ ಮಾಡು ಮಾಡುತ್ತಿರುವಾಗಲೇ, ಹರೀಶ್ ರಾಜ್ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಪೌರಾಣಿಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
'ಯಡಿಯೂರು ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಬಿಗ್ ಬಾಸ್ ಹರೀಶ್ ರಾಜ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.