
ರಿಯಾಲಿಟಿ ಶೋ ಬಿಗ್ ಬಾಸ್ ಅನೇಕ ಕಲಾವಿದರನ್ನು ಬೆಳಕಿಗೆ ತಂದಿದೆ. ಇವರಲ್ಲಿ ನಟಿ ರೂಪಾಲಿ ಭೋಂಸ್ಲೆಯೂ ಒಬ್ಬರು. ಅನೇಕ ಹಿಂದಿ ಮತ್ತು ಮರಾಠಿ ಧಾರಾವಾಹಿಗಳಲ್ಲಿ ನಟಿಸಿರುವ ರೂಪಾಲಿ ಹೊಸ ಕಾರು ಖರೀದಿಸಿದ್ದಾರೆ.
ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಈ ಸಿಹಿ ಸುದ್ದಿ ಫ್ಯಾನ್ಸ್ ಜೊತೆ ಶೇರ್ ಮಾಡ್ಕೊಂಡಿದ್ದಾರೆ. ರೂಪಾಲಿ ಕೆಲವು ದಿನಗಳ ಹಿಂದೆ ಬರ್ತ್‌ಡೇ ಆಚರಿಸಿದ್ದಾರೆ. ಈ ಸಲದ ವಿಶೇಷತೆ ಏನೆಂದರೆ, ರೂಪಾಲಿ ತಮಗೆ ತಾವು ಸುಂದರವಾದ ಉಡುಗೊರೆಯನ್ನು ನೀಡಿದ್ದಾರೆ.
ಲಾಕ್‌ಡೌನ್ ಟೈಮ್‌ನಲ್ಲಿ ಲಕ್ಷುರಿ ಕಾರ್ ತಗೊಂಡ ಸೆಲೆಬ್ರಿಗಳಿವರು..!
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರೂಪಾಲಿ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಕ್ಯೂಟ್ ಅಗಿ ಕಾಣಿಸೋ ನಟಿ ಅದ್ದೂರಿ ಕಾರಿನ ಸಮೀಪ ನಿಂತು ಪೋಸ್ ಕೊಟ್ಟಿದ್ದಾರೆ.
ಇದು ಕೇವಲ ನಾಲ್ಕು ಚಕ್ರಗಳು ಅಥವಾ ಎಂಜಿನ್ ಅಲ್ಲ, ಇದು ನನಗೆ ಒಂದು ಮನೆ. ನಾನು ಇದನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದೇನೆ. ಸ್ವಾಗತ. ನನ್ನ ಕಾರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಈ ಪೋಸ್ಟ್‌ಗೆ ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.