
ಬಿಗ್ ಬಾಸ್ ಮನೆಯಲ್ಲಿ ಶಾಲಾ ಟಸ್ಕ್ ಆರಂಭವಾಗಿದೆ. ಆದರೆ ಬುಧವಾರ ಭಾವನಾತ್ಮಕ ಎಪಿಸೋಡ್. ಶೈನ್ ಶೆಟ್ಟಿ ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದರು.
ಮಗನಿಗಾಗಿ ಮೀನು ಖಾದ್ಯ ತಂದಿದ್ದರು. ಮನೆಯವರ ಜತೆ ಮಾತನಾಡಿ ಮಗನಿಗೆ ಎಚ್ಚರಿಕೆಯ ಒಂದು ಮಾತು ಹೇಳಿದರು. ನಿನಗೆ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ ಎಂದರು.
ಸುಂದರಿ ಚಂದನಾ ಹೊರಗೆ ಬರಲು ಅಸಲಿ ಕಾರಣ ಹೇಳಿದ ಸುದೀಪ್
ಮನೆಯವರೆಲ್ಲ ಶೈನ್ ಶೆಟ್ಟಿ ಅವರ ಅಮ್ಮನ ಆಶೀರ್ವಾದ ಪಡೆದುಕೊಂಡರು. ಮೊದ ಮೊದಲು ಹಿಂದೆ ನಿಂತಿದ್ದ ದೀಪಿಕಾ ಸಹ ಕೊನೆಯದಾಗಿ ಆಶೀರ್ವಾದ ಪಡೆದುಕೊಂಡರು.
ಮನೆಗೆ ಪ್ರವೇಶ ಮಾಡುವಾಗಕಲೇ ಶೈನ್ ಶೈನ್ ಎಂದು ಕೂಗಿಕೊಂಡು ಬಂದರು. ಹೋಟೆಲ್ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಲು ಮರೆಯಲಿಲ್ಲ. ಎಲ್ಲರೂ ಚೆನ್ನಾಗಿ ಆಡುತ್ತಿದ್ದೀರಾ. ನಾನ್ ವೆಜ್ ತಿನ್ನುವವರು ಎಲ್ಲರೂ ತಿನ್ನಬಹುದು. ಸಸ್ಯಹಾರಿಗಳಿಗೆ ಏನು ತರು ಸಾಧ್ಯವಾಗಿಲ್ಲ ಸಾರಿ ಎಂದು ಹೇಳಿದರು.
ಒಳ್ಳೆ ರೀತಿಯಿಂದ ಆಟ ಆಡುತ್ತಿದ್ದೀಯಾ, ಇನ್ನು ಮುಂದೆ ಮತ್ತಷ್ಟು ಜಾಗೃತೆಯಿಂದ ಆಡು ಎಂದು ಸಲಹೆ ನೀಡಲು ಮರೆಯಲಿಲ್ಲ. ಮಂಗಳವಾರದ ಎಪಿಸೋಡ್ ನಲ್ಲಿ ಹರೀಶ್ ರಾಜ್ ಅವರ ಪತ್ನಿ ಮತ್ತು ಮಗು ಮನೆಗೆ ಬಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.