
ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ, ಯುಟ್ಯೂಬರ್ ಧನುಶ್ರೀ ( Bigg Boss Dhanushree And Bharath ) ಅವರು ಭರತ್ ಎನ್ನುವವರ ಜೊತೆ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಶೇರ್ ಮಾಡಿಕೊಳ್ತಿದ್ದರು. ಇವರಿಬ್ಬರ ಮಧ್ಯೆ ಮನಸ್ತಾಪ ಬಂದು ದೂರ ಆಗಿದ್ದಾರೆ. ಎಂಟು ದಿನಗಳ ಹಿಂದೆ ಭರತ್ ಅವರು ವಿಡಿಯೋ ಮಾಡಿ, “ನಾನು ಯುಟ್ಯೂಬ್ ಚಾನೆಲ್ ಮಾಡೋದು ಧನುಶ್ರೀಗೆ ಇಷ್ಟ ಇರಲಿಲ್ಲ, ನಮ್ಮ ಸಂಬಂಧ ಪ್ರೊಫೆಶನಲ್ ಲೈಫ್ ಮೀರಿತು. ನನಗೆ ಅವರು ಆರ್ಥಿಕ ಸಹಾಯ ಮಾಡಿದ್ದಾರೆ, ಆದರೆ ಅವರು ಕೊಡೋ ಹಣ ನನಗೆ ಸಾಕಾಗುತ್ತಿರಲಿಲ್ಲ, ನಾನು ನನ್ನ ಜೀವನಕ್ಕೆ ಏನು ಮಾಡಬೇಕು?” ಅಂತೆಲ್ಲ ಆರೋಪ ಮಾಡಿದ್ದರು. ಇದಕ್ಕೆ ಧನುಶ್ರೀ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನನಗೆ ಮೋಸ ಆಗಿರೋ ಥರ ಫೀಲ್ ಆಗಿದೆ. ಒಂದಿಷ್ಟು ಟೈಮ್ ತಗೊಂಡು ಮಾತಾಡಬೇಕು ಅಂತ ಇಷ್ಟುದಿನ ಸುಮ್ಮನಿದ್ದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಓರ್ವ ವ್ಯಕ್ತಿ ಬಗ್ಗೆ ಮಾತಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ನಮ್ಮನ್ನು ಉಳಿಸಿಕೊಳ್ಳಬೇಕು ಅಂತ ಬೇರೆಯವರನ್ನು ತುಳಿಯೋದು ಒಳ್ಳೆಯದಲ್ಲ. 2025 ಜನವರಿಯಲ್ಲಿ ಭರತ್ ನನಗೆ ಕೆಲಸದ ವಿಚಾರವಾಗಿ ಮೇಲ್ ಮಾಡ್ತಾರೆ, ನಾನು ಫೆಬ್ರವರಿಯಲ್ಲಿ ಆ ಮೇಲ್‌ಗೆ ರಿಪ್ಲೈ ಮಾಡಿದೆ. ಇದು ಮಾತ್ರ ಪ್ರೊಫೆಶನಲ್ ಆಗಿತ್ತು. ನನ್ನ ವಿಡಿಯೋಗಳನ್ನು ಪೋಸ್ಟ್ ಮಾಡೋಕೆ, ಥಂಬ್ ಮಾಡೋಕೆ ಜನರಿದ್ದಾರೆ, ಅವರಿಗೆ ನಾನು ಹಣ ಕೊಡ್ತಿದ್ದೀನಿ.
ಕಳೆದ ಮೂರು ವರ್ಷಗಳಿಂದ ನಾನು ಯುಟ್ಯೂಬ್ ವ್ಲಾಗ್ ಮಾಡ್ತಿದ್ದೀನಿ, ಹೀಗಾಗಿ ನನಗೆ ಎಡಿಟ್‌ನಿಂದ ಎಲ್ಲವೂ ಗೊತ್ತಿದೆ. ನಾನು ಯುಟ್ಯೂಬ್‌ಗೆ ಹೊಸಬಳಲ್ಲ. ಭರತ್‌ಗೆ ಕೆಲಸ ಇರಲಿಲ್ಲ, ನಮ್ಮದೊಂದು ಯುಟ್ಯೂಬ್ ಟೀಮ್ ಇದೆ, ಅದರ ಜೊತೆ ನಿಮ್ಮ ವಿಡಿಯೋ ಕೊಲಬರೇಟ್ ಮಾಡ್ತೀವಿ ಅಂತೆಲ್ಲ ಕಥೆ ಹೇಳಿದರು. ಆಗಲೇ ಅವರಿಗೆ ಕೆಲಸ ಇರಲಿಲ್ಲ, ಮನೆ ನೋಡಿಕೊಳ್ಳಬೇಕಿತ್ತು, ಯುಟ್ಯೂಬ್ ಮಾಡ್ತೀನಿ ಅಂತ ಹೇಳಿದ್ದರು. ಆಗ ನಾನು ಕಮಿಟ್‌ಮೆಂಟ್ ಇದೆ ಅಂತ ಅಂದಾಗ ನೀವು ಯುಟ್ಯೂಬ್ ಜೊತೆಗೆ ಬೇರೆ ಕೆಲಸ ಹುಡುಕಿಕೊಳ್ಳಿ ಅಂತ ಕೂಡ ಹೇಳಿದ್ದೆ. ನನ್ನ ಕಂಟೆಂಟ್‌ಗೆ ಅವರು ಒಂದಿಷ್ಟು ವ್ಯಾಲ್ಯು ಮಾಡಿದರು.
ಸಾಕಷ್ಟು ಬಾರಿ ನಮ್ಮ ಸಂಬಂಧವನ್ನು ಪ್ರೊಫೆಶನಲ್ ಆಗಿ ಇಡೋಣ ಅಂತ ಹೇಳಿದ್ದೆ. ಆದರೆ ಭರತ್ ಆ ರೀತಿ ಇರಲಿಲ್ಲ. ಇದರ ಜೊತೆಗೆ ವಿಡಿಯೋ ಎಡಿಟ್ ಮಾಡ್ತೀನಿ, ಆ ಕೆಲಸ ಮಾಡ್ತೀನಿ, ಈ ಕೆಲಸ ಮಾಡ್ತೀನಿ ಅಂತಲೂ ಕೂಡ ಭರತ್ ಮುಂದೆ ಬಂದಿದ್ದರು. ಅಷ್ಟೇ ಅಲ್ಲದೆ ಒಂದು ತಿಂಗಳಿನಲ್ಲಿ ನಿಮ್ಮ ಮೇಲೆ ಲವ್ ಆಗಿದೆ ಅಂತಲೂ ಹೇಳಿದ್ದರು. ಇದು ನನಗೆ ಅಚ್ಚರಿ ತಂದಿತ್ತು. ಏನೋ ಮಿಸ್ ಹೊಡೆಯುತ್ತಿದೆ, ಯಾಕೆ ಈ ವ್ಯಕ್ತಿ ಇಷ್ಟೆಲ್ಲ ಸಹಾಯ ಮಾಡೋಕೆ ಬಂದಿದ್ರು ಅಂತ ಅಚ್ಚರಿ ಆಗಿತ್ತು. ಯುಟ್ಯೂಬ್ ಟೀಂನಿಂದ ನಿಮ್ಮನ್ನು ಬಚಾವ್ ಮಾಡಬೇಕು ಅಂತ ನಾನು ನಿಮಗೆ ಅಗ್ರಿಮೆಂಟ್ ಕಳಿಸಲಿಲ್ಲ ಅಂತ ಭರತ್ ಹೇಳಿದ್ದರು. ಏಳು ವರ್ಷಗಳಿಂದ ನಾನು ಈ ರಂಗದಲ್ಲಿರೋದಿಕ್ಕೆ, ಯಾವ ಕೆಲಸ, ಹೇಗೆ ಆಗುತ್ತದೆ ಎನ್ನೋದು ಗೊತ್ತಿದೆ.
ನನಗೆ ಮೂರು-ನಾಲ್ಕು ಮೂಲಗಳಿಂದ ಆದಾಯ ಬರುತ್ತಿದೆ. ಅವುಗಳಲ್ಲಿ ಯುಟ್ಯೂಬ್ ಕೂಡ ಒಂದು. ಭರತ್‌ಗೆ ಆರ್ಥಿಕ ಸಮಸ್ಯೆ ಇದ್ದಾಗ ಒಂದಿಷ್ಟು ಹಣವನ್ನು ಕೊಟ್ಟಿದ್ದೇನೆ. ಅಷ್ಟೇ ಅಲ್ಲದೆ ಅವರ ಮನೆಗೆ ಹೋಗದೆ ನಮ್ಮ ಮನೆಯಲ್ಲಿ ಇದ್ದರು, ನಮ್ಮ ಮನೆಯಲ್ಲಿ ಊಟ ತಿಂಡಿ ಮಾಡುತ್ತಿದ್ದರು. ನಿಮ್ಮ ಮನೆಗೆ ಹೋಗಿ ಅಂತ ಹೇಳಿದಾಗಲೂ ಕೂಡ ಅವರು ಕೇಳಲಿಲ್ಲ. ಐದು ತಿಂಗಳು ನಾನು, ನಮ್ಮ ಮನೆಯವರು ಅವರನ್ನು ನೋಡಿಕೊಂಡಿದ್ದೇವೆ. ನಾನು ಈ ಬಾರಿ ಮೋಸ ಹೋಗಿದ್ದೇನೆ.
ಭರತ್ ಅವರ ಯುಟ್ಯೂಬ್ ಚಾನೆಲ್‌ಗೆ ನಮ್ಮ ಮನೆಯಲ್ಲಿ ಶೂಟ್ ಆಗಿದೆ. ಅವರ ವ್ಲಾಗ್‌ನ್ನು ನಾನು ಎಡಿಟ್ ಮಾಡಿಕೊಟ್ಟಿದ್ದೆ. ನಾನು ಕೊಡ್ತಿರೋ ಹಣ ಸಾಕಾಗ್ತಿಲ್ಲ ಅಂತ ಭರತ್ ಹೇಳಿದ್ದರು. ಹಾಗಿದ್ದರೆ ನಮ್ಮ ಮನೆಯಿಂದ ಹೊರಗಡೆ ಹೋಗದೆ, ಯಾಕೆ ಉಳಿದುಕೊಂಡರು? ಭರತ್, ನನ್ನ ಪಾಪುಲಾರಿಟಿಯನ್ನು ಬಳಸಿಕೊಳ್ತಿದ್ದಾರೆ ಅಂತ ನಮ್ಮ ಮನೆಯವರು ಕೂಡ ಹೇಳಿದ್ದರು, ನಾನು ಆಗ ಅವರ ಮಾತು ಕೇಳಲಿಲ್ಲ.
ನನ್ನ ಜೀವನದಲ್ಲಿ ಈಗಾಗಲೇ ಒಂದು ಘಟನೆ ನಡೆದಿದೆ. ಈಗ ಮತ್ತೆ ಅದೇ ಥರ ಆದಾಗ ಬೇಜಾರು ಆಗುವುದು. ನನ್ನ ಭಾವನೆಗಳು, ನನ್ನ ಮನೆಯವರ ಜೊತೆ ಆಟ ಆಡಬೇಡಿ ಅಂತ ಕೂಡ ಹೇಳಿದ್ದೆ. ನನ್ನ ಹೆಸರನ್ನು ಬಳಸಿಕೊಂಡು ಭರತ್ ಅವರು ಹಣದ ವಿಚಾರದಲ್ಲಿ ಹೊರಗಡೆ ಇರೋ ಏಜೆನ್ಸಿಗಳ ಜೊತೆ ಮಾತನಾಡಿದ್ದಾರೆ. ಕೋಪ ಬರುತ್ತಿದೆ, ಹತಾಶೆ, ಮೋಸ ಆಗಿರೋ ಭಾವನೆ ಕಾಡ್ತಿದೆ. ನಿಮ್ಮನ್ನು ಕಂಡರೆ ನನಗೆ ಇಷ್ಟ ಅಂತ ಹೇಳಿ, ಹುಡುಗಿ ಬಗ್ಗೆ ಈ ಥರ ಮಾಡ್ತೀಯಲ್ಲವಾ? ಎಂಥ ಗಂಡಸು ನೀನು? ಯುಟ್ಯೂಬ್ ಚಾನೆಲ್ ಒಪನ್ ಮಾಡೋ ಆಸೆ ಇದ್ದಿದ್ರೆ ನನ್ನ ಹತ್ತಿರ ಯಾಕೆ ಬಂದ್ರಿ? ಅವರಿಗೆ ಫೋನ್ ಅಲ್ಲಿ ಎಡಿಟಿಂಗ್ ಮಾಡೋಕೆ ನಾನು ಹೇಳಿಕೊಟ್ಟಿದ್ದೆ.
ಲವ್ ಅಂತ ನನ್ನ ಜೊತೆ ನಾಟಕ ಮಾಡಿದರು. ಮ್ಯಾರೇಜ್ ಫ್ರಾಂಕ್ ಅಂತ ವಿಡಿಯೋ ಮಾಡೋಣ ಅಂತ ಭರತ್ ಹೇಳಿದರು. ಜನರಿಗೆ ನಂಬಿಕೆ ಬರೋಕೆ ನಾವು ಒಂದಿಷ್ಟು ವಿಡಿಯೋ ಮಾಡಿ ನಂಬಿಸಬೇಕು ಅಂತ ಹೇಳಿದರು. ಅಲ್ಲೂ ಕೂಡ ನಾನು ಮೋಸ ಹೋದೆ. ಭರತ್ ಇಲ್ಲದೆ ನನಗೆ ಯುಟ್ಯೂಬ್ ನಡೆಸೋಕೆ ಬರುತ್ತಿರಲಿಲ್ಲವಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.