
ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ( Bigg Boss Kannada Season 12 ) ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ಸೂರಜ್, ತಾವು ಕ್ಯಾಪ್ಟನ್ಸಿ ಆಟ ಆಡುವ ಅವಕಾಶ ಸಿಕ್ಕಿದ್ರೂ ಕೂಡ, ಟೀಂಗೋಸ್ಕರ ಅದನ್ನು ಬಿಟ್ಟು ಕೊಟ್ಟು ಎಲ್ಲರ ಮನಸ್ಸು ಕದ್ದಿದ್ದರು. ಆದರೆ ಈಗ ರಾಶಿಕಾ ಶೆಟ್ಟಿ ಜೊತೆಗೆ ಸಮಯ ಕಳೆಯುತ್ತ, ವೀಕ್ಷಕರಿಗೆ ಬೇಸರ ಮೂಡಿಸುತ್ತಿದ್ದಾರೆ. ಇನ್ನೊಂದು ವಿಚಾರದಲ್ಲಿ ಸೂರಜ್ ವೀಕ್ಷಕರ ಆಸೆಗೆ ತಣ್ಣೀರು ಹಾಕಿದ್ದಾರೆ.
ರಾಶಿಕಾ ಶೆಟ್ಟಿ ಹಾಗೂ ಸೂರಜ್ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಇದು ವೀಕ್ಷಕರಿಗೆ ಬೇಸರ ತಂದಿದೆ. ಮಗ ಟ್ರೋಫಿ ಗೆಲ್ಲುತ್ತಾನೆ ಎಂದು ಸೂರಜ್ ತಾಯಿ ಕನಸು ಕಟ್ಟಿಕೊಂಡಿದ್ದಾರೆ, ರಾಶಿಕಾ ಜೊತೆಗೆ ಇದ್ದರೆ ಆದಷ್ಟು ಬೇಗ ಹೊರಗಡೆ ಬರುತ್ತಾರೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ. ರಾಶಿಕಾ ಕೂಡ ಸೂರಜ್ ಅವರನ್ನು ಬಿಡುವಂತೆ ಕಾಣ್ತಿಲ್ಲ.
ಟಾಸ್ಕ್ ಆಡುವ, ಅಡುಗೆ ಮಾಡುವ, ಸ್ಟ್ಯಾಂಡ್ ತಗೊಳ್ಳುವಾಗ ಸ್ಟ್ಯಾಂಡ್ ತಗೊಳ್ಳುವ ಸೂರಜ್ ಅನೇಕರಿಗೆ ಇಷ್ಟ ಆಗಿದ್ದರು. ಇವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಕೂಡ ಜಾಸ್ತಿ ಆಗಿತ್ತು. ಒಂದೇ ದಿನದಲ್ಲಿ 60kಗಿಂತ ಜಾಸ್ತಿ ಫಾಲೋವರ್ಸ್ ಬಂದಿದ್ದರು. ಆದರೆ ಈಗ ಇವರ ನಡೆ ವೀಕ್ಷಕರಿಗೆ ಬೇಸರ ತಂದಿದೆ.
ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ಜಾಹ್ನವಿ ಅವರದ್ದೇ ಒಂದು ಗುಂಪು ಎನ್ನುವಂತಾಗಿದೆ. ಈಗ ಈ ಗುಂಪಿಗೆ ಸೂರಜ್ ಎಂಟ್ರಿಯಾಗಿದೆ ಎಂಬ ಮಾತು ಶುರುವಾಗಿದೆ. ಜಾಹ್ನವಿ ಇರುವ ಗುಂಪಿಗೆ ರಾಶಿಕಾ ಹಾಕಿ, ಬಾತ್‌ರೂಮ್ ಏರಿಯಾಗೆ ಸೂರಜ್ ಹೋದರೆ ಅಲ್ಲಿ ಅವರನ್ನು ಮ್ಯಾನಿಪ್ಯುಲೇಟ್ ಮಾಡಲಾಗುತ್ತದೆ ಎಂದು ರಕ್ಷಿತಾ ಶೆಟ್ಟಿ ಗಮನಿಸಿ, ಅದನ್ನು ಮ್ಯೂಟೆಂಟ್ ರಘುಗೆ ಹೇಳಿದ್ದಾರೆ. ರಕ್ಷಿತಾ ಮಾತು ಕೇಳಿ ರಘು ಕೂಡ ಆಶ್ಚರ್ಯಪಟ್ಟಿದ್ದಾರೆ. ಸೂರಜ್ ಹಾಗೂ ರಾಶಿಕಾ ಬೇರೆ ಬೇರೆ ಚಟುವಟಿಕೆಯಲ್ಲಿ ಭಾಗಿ ಆಗಬೇಕು ಎಂದು ರಕ್ಷಿತಾ ಪಾಠ ಮಾಡಿದ್ದಾರೆ.
ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದರು. ಈಗ ರಕ್ಷಿತಾ ಕೂಡ ಸೂರಜ್ ವಿಚಾರದಲ್ಲಿ ಹೀಗೆ ಮಾಡಿ ಎಂದು ಪ್ಲ್ಯಾನ್ ಹಾಕಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸೂರಜ್ ಯಾರ ಪರ ಇರಲಿದ್ದಾರೆ? ರಾಶಿಕಾ ಬಿಟ್ಟು ಬೇರೆಯವರ ಬಳಿ ಅವರು ಮಾತಾಡ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
“ಸ್ವಲ್ಪ ಜನರು ನಿಮ್ಮ ಟೀಂನಲ್ಲಿದ್ದಾರೆ, ನಿಮ್ಮ ವಿರುದ್ಧವೂ ಇದ್ದಾರೆ. ನಿಮ್ಮ ವಿರುದ್ಧ ಇರುವವರಿಂದ ನಿಮಗೆ, ಉಳಿದವರಿಗೆ ಸಮಸ್ಯೆ ಆಗುತ್ತದೆ. ಸೂರಜ್ ಅವರು ಅಶ್ವಿನಿ, ಜಾಹ್ನವಿ ಅವರಿಂದ ಮ್ಯಾನಿಪ್ಯುಲೇಟ್ ಆಗಬಹುದು. ಸೂರಜ್ ಅವರಿಗೆ ಕಿಚನ್ ಕೆಲಸ ಗೊತ್ತಿದೆ, ಅಲ್ಲಿ ಅವರನ್ನು ಹಾಕಿ. ಸೂರಜ್ ನಮ್ಮ ಕಣ್ಣು ಮುಂದೆ ಇರೋದು ಒಳ್ಳೆಯದು ಎಂದು ರಕ್ಷಿತಾ ಶೆಟ್ಟಿ ಪಾಠ ಮಾಡಿದ್ದಾರೆ.
ಅಭಿಷೇಕ್ ಶ್ರೀಕಾಂತ್, ರಾಶಿಕಾ ಶೆಟ್ಟಿ, ಕಾಕ್ರೋಚ್ ಸುಧಿ, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ಸೂರಜ್, ಕಾವ್ಯ ಶೈವ, ಅಶ್ವಿನಿ ಗೌಡ, ಧ್ರುವಂತ್, ಗಿಲ್ಲಿ ನಟ, ಮಲ್ಲಮ್ಮ, ಚಂದ್ರಪ್ರಭಾ, ಸ್ಪಂದನಾ ಸೋಮಣ್ಣ, ಧನುಷ್ ಗೌಡ, ಮಾಳು ನಿಪನಾಳ ಅವರು ಸದ್ಯ ಮನೆಯಲ್ಲಿದ್ದಾರೆ. ಆರ್‌ಜೆ ಅಮಿತ್, ಕರಿಬಸಪ್ಪ, ಸತೀಶ್ ಕ್ಯಾಡಬಮ್ಸ್,ಅಶ್ವಿನಿ ಎಸ್ ಎನ್, ಮಂಜುಭಾಷಿಣಿ ಅವರು ಮನೆಯಿಂದ ಔಟ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.