
ಬೆಂಗಳೂರು(ಜು. 04) ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬೀಪ್ ಸೌಂಡ್ ಕೇಳಿದೆ. ಪ್ರಿಯಾಂಕಾ ತಿಮ್ಮೇಶ್ ಮತ್ತು ಚಕ್ರವರ್ತಿ ನಡುವಿನ ವಾಗ್ವಾದಕ್ಕೆ ಇಡೀ ಮನೆಯೇ ಬೆಚ್ಚಿ ಬಿದ್ದಿದೆ.
ನೇರವಾಗಿಲ್ಲ. ನಾಟಕೀಯ, ಸ್ಕೋಪ್ ತಗೆದುಕೂಳ್ಳುತ್ತಿದ್ದೀಯಾ? ಎಂದು ಚಕ್ರವರ್ತಿ ನನ್ನ ಮೇಲೆ ಆರೋಪ ಮಾಡುತ್ತಾರೆ. ನನಗೆ ಸಿಕ್ಕಾಪಟ್ಟೆ ನೋವಾಗಿದೆ. ನಾನು ಯಾರ ಜೊತೆ ಬೇಕಾದರೂ ಊಟ ಮಾಡುತ್ತೀನಿ.. ಶಮಂತ್ ಜತೆ ಕುಳಿತುಕೊಳ್ಳುತ್ತೀನಿ.. ಶಮಂತ್ ಡ್ಯಾಶ್ ತೊಳೆಯುತ್ತೇನೆ ಅದನ್ನು ಕೇಳೋಕೆ ಇವರು ಯಾರು? ಹೀಗೆ ಪ್ರಿಯಾಂಕಾ ರೌದ್ರಾವತಾರ ತೋರಿಸಿದರು.
ಇದನ್ನು ಕೇಳುತ್ತಿದ್ದ ಚಕ್ರವರ್ತಿ ಏನೇ ಇದ್ದರೂ ನನ್ನ ಜತೆ ನೇರವಾಗಿ ಮಾತನಾಡಿ ಎಂದರು. ಈ ವೇಳೆ ಕೆಂಡಾಮಂಡಲವಾದ ಪ್ರಿಯಾಂಕಾ ನೀವೇನು ನನ್ನನ್ನು ಲೀಸ್ ಗೆ ತೆಗೆದುಕೊಂಡಿದ್ದೀರಾ? ಎಂದು ಎಗರಿಬಿದ್ದರು.
ಬಿಗ್ ಬಾಸ್ ಮನೆಯಲ್ಲಿ ಹೊರಗಿನ ಸಂದರ್ಶನಗಳದ್ದೇ ಸದ್ದು
ಬಾಯಿ ಮುಚ್ಚಿದರೆ ಸರಿ ಇಲ್ಲವಾದರೆ ಎಂದು ಪ್ರಿಯಾಂಕಾ ಕೂಗಾಡಿದರು. ಒಂದು ಕಡೆ ಶಮಂತ್ ಮತ್ತು ಸಂಬರಗಿ ಪ್ರಿಯಾಂಕಾ ಅವರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದರು.
ನಂತರ ಸೂಪರ್ ಸಂಡೇ ಆರಂಭಿಸಿದ ಕಿಚ್ಚ ಸುದೀಪ್ ಮನೆಮಂದಿಯನ್ನು ಒಂದು ತಿಂಡಿಗೆ ಅಥವಾ ಅಡುಗೆಗೆ ಹೋಲಿಸಿ ಎಂದಾಗ ಮಂಜು ನೀಡಿದ ಉದಾಹರಣೆಗಳು ನಕ್ಕು ನಗಿಸಿದವು . ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ದಿವ್ಯಾ ಸುರೇಶ್ ಅವರಿಗೆ ಸಿಕ್ಕಿತು .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.