BBK9: ಕಿಚ್ಚನ ಮೊದಲನೇ ಪಂಚಾಯಿತಿಯಲ್ಲಿ ಅರುಣ್ ಸಾಗರ್ ಗೆ ಕ್ಲಾಸ್!

By Gowthami K  |  First Published Oct 2, 2022, 12:05 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರ ಮೊದಲನೇ ವಾರದ ಪಂಚಾಯಿತಿಯನ್ನು ನಟ ಸುದೀಪ್ ನಡೆಸಿಕೊಟ್ಟಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದವರಲ್ಲಿ ಮೂರು ಮಂದಿ ಸೇಫ್ ಆಗಿದ್ದಾರೆ.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರ ಮೊದಲನೇ ವಾರದ ಪಂಚಾಯಿತಿಯನ್ನು ನಟ ಸುದೀಪ್ ನಡೆಸಿಕೊಟ್ಟಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದವರಲ್ಲಿ ಮೂರು ಮಂದಿ ಸೇಫ್ ಆಗಿದ್ದಾರೆ. ಮನೆಯವರ ಎಲ್ಲರ ಅಭಿಪ್ರಾಯದಂತೆ ಮೊದಲು ಸೇಫ್ ಆದ ಸ್ಫರ್ಧಿ ಅರುಣ್ ಸಾಗರ್, ಎರಡನೇ ಸೇಫ್ ಆದ ಸ್ಫರ್ಧಿ ಮನೆಯ ನಾಯಕನಾಗಿರುವ ವಿನೋದ್ ಗೊಬ್ರಗಾಲ. ಮೂರನೇ ಸೇಫ್ ಆದ ಸ್ಪರ್ಧಿ ದಿವ್ಯಾ ಉರುಡುಗ ಆಗಿದ್ದಾರೆ. ನಾಳಿನ ಕಿಚ್ಚನ ಪಂಚಾಯಿತಿಯಲ್ಲಿ ಮನೆಯಿಂದ ಯಾರು ಹೊರಹೋಗುತ್ತಾರೆ ಎಂಬುದು ತಿಳಿಯಲಿದೆ.

ಅರುಣ್ ಸಾಗರ್‌ ಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ:  ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಹಲವು ಸ್ಪರ್ಧಿಗಳ ತಪ್ಪುಗಳನ್ನು ಸುದೀಪ್ ತಿದ್ದಿದರು. ಈ ವೇಳೆ ಸ್ನೇಹಿತ ಅರುಣ್ ಸಾಗರ್ ಅವರಿಗೆ ಸ್ಪಲ್ಪ ಕ್ಲಾಸ್ ತೆಗೆದುಕೊಂಡರು. ಪಿರಮಿಡ್ ಗೇಮ್ ನಲ್ಲಿ ಅರುಣ್ - ನವಾಜ್ ಜೋಡಿ ಆಟ ಆಡಲಾಗದೆ ಆಟದಿಂದ ಕ್ವಿಟ್ ಮಾಡುವ ಬಗ್ಗೆ ನಿರ್ಧರಿಸಿದ್ದರು. ಜೊತೆಗೆ ಅರುಣ್ ಸಾಗರ್ ಅವರು ಕಾಮಿಡಿ ಮಾಡಿದ್ದು ಅತಿರೇಕಕ್ಕೆ ಹೋಗಿತ್ತು. ಇದರಿಂದ ಅರುಣ್, ನವಾಜ್ ಅವರು ಗೆಲ್ಲುತ್ತಾರೆ ಅಂತ ಬಾಜಿ ಕಟ್ಟಿದ್ದ ಮಯೂರಿ, ಸಾನ್ಯಾ ಅಯ್ಯರ್ ಜೋಡಿಗೂ ಬೇಸರ ತರಿಸಿತ್ತು. ಇದು ಸಾಮಾಜಿಕ ಜಾಲತಾಣದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಮಾತನಾಡಿದ ಸುದೀಪ್ ವಿದೂಷಕನಾಗುವಲ್ಲಿ ನಾಯಕನಾಗಬೇಡಿ. ನಾಯಕನಾಗುವಲ್ಲಿ ವಿದೂಷಕನಾಗಬೇಡಿ ಎಂದು ಕಿವಿ ಮಾತು ಹೇಳಿದರು.

Tap to resize

Latest Videos

ಅರುಣ್ ಸಾಗರ್ ಅವರು ಅದ್ಭುತವಾದ ಎಂಟರ್‌ಟೇನರ್ ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನು ಈಸಿಯಾಗಿ ತೆಗೆದುಕೊಳ್ಬೇಡಿ. ಎಲ್ಲಿ ಟಾಸ್ಕ್‌ನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೋ ಅಲ್ಲಿ ನೀವು ಕಪಿಚೇಷ್ಟೆ ಮಾಡಿದ್ರಿ ಎಂದು ಸುದೀಪ್ ಹೇಳಿದ್ದಕ್ಕೆ , ಆರ್ಯವರ್ಧನ್ ಗುರೂಜಿ ಮಾತಿನಿಂದ ನವಾಜ್‌ಗೆ ಕೋಪ ಬರುತ್ತಿತ್ತು. ಅದನ್ನು ತಡೆಯಲು ನಾನು ಕಪಿಚೇಷ್ಠೆ ಮಾಡಿದ್ದು ನಿಜ ಎಂದು ಅರುಣ್ ಸಾಗರ್ ಒಪ್ಪಿಕೊಂಡರು. 

BBK9: ಮನೆಯ ಮೊದಲ ಕ್ಯಾಪ್ಟನ್ ಆದ ವಿನೋದ್ ಗೊಬ್ರಗಾಲ, ಅತ್ಯುತ್ತಮ ಅರುಣ್

ಬಿಗ್‌ಬಾಸ್9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಗಿಚ್ಚಿಗಿಲಿಗಿಲಿ), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, . ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಪಾಲ್ಗೊಂಡಿದ್ದಾರೆ. ಮೊದಲ ವಾರದ ಎಲಿಮನೇಟಿಗೆ ನಾಮನಿರ್ದೇಶನವಾಗಿದ್ದು, ಯಾರು ಎಲಿಮನೇಟ್ ಆಗುತ್ತಾರೆ ಮೊದಲ ವಾರದಲ್ಲಿ ಎಂಬುದನ್ನು ಕಾದು ನೋಡಬೇಕು.

BBK9 ಐಶ್ವರ್ಯ ಪಿಸ್ಸೆ ದಯವಿಟ್ಟು ನನ್ನ ಪ್ರೀತ್ಸೆ ಎಂದ ಪ್ರಪೋಸ್ ಮಾಡಿದ ನವಾಜ್!

ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಅದಕ್ಕೆ ಈ ಸಾರಿ ಗೆಲ್ಲೋದು ಅವರೇ ಎಂದು ಊಹಿಸುತ್ತಿದ್ದಾರೆ.

 

click me!