BBK9 ಐಶ್ವರ್ಯ ಪಿಸ್ಸೆ ದಯವಿಟ್ಟು ನನ್ನ ಪ್ರೀತ್ಸೆ ಎಂದ ಪ್ರಪೋಸ್ ಮಾಡಿದ ನವಾಜ್!

By Vaishnavi Chandrashekar  |  First Published Oct 1, 2022, 1:03 PM IST

ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಪ್ರೇತಿ- ಪ್ರೇಮಾ- ಪುರಾಣ. ನವಾಜ್‌ಗೆ ಲವ್ ಆಗಿರೋದು ಬಾಲಿವುಡ್ ಹುಡುಗಿ ಮೇಲೆ..... 


ಬಿಗ್ ಬಾಸ್ ಸೀಸನ್ 9ರಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ಸೈಕ್ ನವಾಜ್ ಸ್ಪರ್ಧಿಸುತ್ತಿದ್ದಾರೆ. 9 ಪ್ರವೀಣರು 9 ನವೀಣರ ಪಟ್ಟಿ ನೋಡಿದ್ದರೆ ಈ ಸೀಸನ್‌ ಖಂಡಿತಾ ಸೈಕ್ ಆಗಿರಲಿದೆ. ಕಳೆದ ಸೀಸನ್‌ನಲ್ಲಿ ಬೈಕ್ ರೇಸರ್ ಅರವಿಂದ್‌ ಕೆಪಿ ಇದ್ದರು ಈ ವರ್ಷ ಅವರ ಸ್ನೇಹಿತೆ ಐಶ್ವರ್ಯ ಪಿಸ್ಸೆ ಇದ್ದಾರೆ. ಒಂದೇ ವಾರದಲ್ಲಿ ಆದಷ್ಟು ಇನ್ನಿತ್ತರ ಸ್ಪರ್ಧಿಗಳ ಜೊತೆ ಹೊಂದಿಕೊಂಡು ಟಾಸ್ಕ್‌ ಮಾಡುತ್ತಾ ಸಣ್ಣ ಪುಟ್ಟ ಮನೋರಂಜನೆ ನೀಡುತ್ತಿದ್ದಾರೆ. ಈ ಸುಂದರಿ ಮೇಲೆ ಸೈಕ್ ನವಾಜ್‌ಗೆ ಲವ್ ಆಗಿದೆ....

ಹೌದು! ಬಿಗ್ ಬಾಸ್ ಮನೆ ಪ್ರವೇಶಿಸುವ ಮುನ್ನ ಸುದೀಪ್ ಪ್ರತಿಯೊಬ್ಬರಿಗೂ ಒಂದು ಹ್ಯಾಂಡ್‌ಬ್ಯಾಂಡ್‌ ಕೊಟ್ಟಿದ್ದರು. ಅದರಲ್ಲಿ ಸುರಸುಂದರಿ ಎಂದು ಬರೆಯಲಾಗಿತ್ತು. ಒಂದೆರಡು ದಿನಗಳ ನಂತರ ಅದನ್ನು ರೇಸರ್ ಐಶ್ವರ್ಯ ಪಿಸ್ಸೆ ಕೈಗೆ ಕಟ್ಟಿ 'ಬಿಗ್ ಬಾಸ್‌ ಮನೆಯಲ್ಲಿ ಪ್ರತಿಯೊಂದು ಹುಡುಗಿಯನ್ನು ನಾನು ನೋಡಿರುವೆ. ವಿತ್ ಮೇಕಪ್ ವಿತ್‌ಔಟ್ ಮೇಕಪ್ ನೋಡಿರುವೆ. ಇಷ್ಟು ಜನರಲ್ಲಿ ನನಗೆ ನ್ಯಾಚುರಲ್ ಮತ್ತು ಹಾಲಿವುಡ್‌ ಹೀರೋಯಿನ್ ರೀತಿ ಅನಿಸಿದ್ದು ಐಶ್ವರ್ಯ ಪಿಸ್ಸೆ ಹೀಗಾಗಿ ಅವರಿಗೆ ನಾನು ಸುರಸುಂದರಿ ಬ್ಯಾಂಡ್ ಕೊಡುತ್ತಿರುವೆ' ಎಂದು ನವಾಜ್ ಹೇಳಿದ್ದಾರೆ. 

Tap to resize

Latest Videos

ನವಾಜ್ ಹ್ಯಾಂಡ್‌ ಬ್ಯಾಂಡ್‌ ಕಟ್ಟಿದ ಕ್ಷಣದಿಂದ ಐಶ್ವರ್ಯ ಜೊತೆ ರೇಗಿಸಲು ಸ್ಪರ್ಧಿಗಳು ಶುರು ಮಾಡಿದ್ದರು. ಒಂದು ದಿನ ಐಶ್ವರ್ಯಗೆ ಚೆನ್ನಾಗಿ ಮೇಕಪ್ ಮಾಡಿ ನವಾಜ್‌ ಮುಂದೆ ಕರೆದುಕೊಂಡೋಗಿ ನಿಲ್ಲಿಸುತ್ತಾರೆ. 'ನೀನು ನನ್ನ ಮೇಕಪ್ ಇಲ್ಲದೆ ನೋಡಿದ್ಯಾ ಈಗ ಮೇಕಪ್ ಜೊತೆ ಹೆಂಗ್ ಕಾಣಿಸುತ್ತೀನಿ? ಇವತ್ತು ನಾನು ಮೇಕಪ್ ಹಾಕೊಂಡು ಬಂದಿದ್ದೀನಿ ಹೇಗ್ ಕಾಣಿಸುತ್ತಿರುವೆ ಹೇಳಿ' ಎಂದು ಐಶ್ವರ್ಯ ನವಾಜ್‌ಗೆ ಪ್ರಶ್ನೆ ಮಾಡುತ್ತಾರೆ. 

BBK9: ಮನೆಯ ಮೊದಲ ಕ್ಯಾಪ್ಟನ್ ಆದ ವಿನೋದ್ ಗೊಬ್ರಗಾಲ, ಅತ್ಯುತ್ತಮ ಅರುಣ್-ಕಳಪೆ ರೂಪೇಶ್!

ನವಾಜ್ ಪ್ರಪೋಸಲ್:

'ನೋಡಿ ಐಶ್ವರ್ಯ ಪಿಸ್ಸೆ ಅವರೇ ನಿಮ್ಮನ್ನು ನೋಡಿದಾಗಿನಿಂದ ಫಿದಾ ಆಗಿದ್ದೀನಿ ನಿಮ್ಮ ತರ ಇಂಗ್ಲಿಷ್‌ ಸ್ಟೈಲ್‌ನಲ್ಲಿ ಐ ಲವ್ ಯು ಹೇಳುವುದಕ್ಕೆ ಬರೊಲ್ಲ...ನಮ್ಮ ಮನೆ ತುಂಬಾ ಚಿಕ್ಕದ್ದು ಆದರೆ ನನ್ನ ಮನಸ್ಸು ತುಂಬಾ ದೊಡ್ಡದ್ದು ಆ ನಿಮ್ಮ ದೊಡ್ಡ ಮನಸ್ಸು ನಂದು ನಿಮ್ದು ಮನಸ್ಸು ದೊಡ್ಡು ಮನಸ್ಸಾಗಿ ಚಿಕ್ಕ ಚಿಕ್ಕದಾಗಿ ಪ್ರೀತಿ ಮಾಡ್ಕೊಂಡು ....ಚಿಕ್ಕ ಚಿಕ್ಕದಾಗಿ ಸೇರಿಕೊಂಡು ದೊಡ್ಡ ದೊಡ್ಡದಾಗಿ ಪ್ರೀತಿ ಮಾಡೋಣ..ಆ ದೊಡ್ಡ ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಚಿಕ್ಕದಾಗಿ ಖುಷಿ ಪಡೋಣ.. ಆ ಚಿಕ್ಕ ಚಿಕ್ಕ ಖುಷಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ.. ಆ ಚಿಕ್ಕ ಚಿಕ್ಕ ಮಕ್ಕಳು ದೊಡ್ಡವಾರುವವರೆಗೂ ದೊಡ್ಡ ದೊಡ್ಡದಾಗಿ ಸಾಕೋಣ...ದೊಡ್ಡ ದೊಡ್ಡದಾಗಿ ಸಾಯಬೇಕಿದ್ರೆ ಚಿಕ್ಕ ಚಿಕ್ಕದಾಗಿ ನಕ್ಕೊಂದು ಸಾಯೋಣ.. ನಮ್ಮ ಮಕ್ಕಳು ದೊಡ್ಡದೊಡ್ಡದಾಗಿ ಸಮಾಧಿ ಕಟ್ಟಿಸುತ್ತಾರೆ...ಚಿಕ್ಕ ಚಿಕ್ಕದಾಗಿ ಅವರ ಮನಸ್ಸಿನಲ್ಲಿ ನಮ್ಮನ್ನು ಇಟ್ಕೊಂಡಿರುತ್ತಾರೆ' ಎಂದು ನವಾಜ್ ಪ್ರಪೋಸ್ ಮಾಡುತ್ತಾರೆ. 

BBK9 100 ಚಡ್ಡಿ ಕೊಡ್ಸು ಅಂದ್ರೆ ಬರೀ 6 ಚಡ್ಡಿ ಕೊಡ್ಸಿದ್ದಾರೆ ನಮ್ಮಪ್ಪ: ಸೈಕ್ ನವಾಜ್

ನವಾಜ್‌ ಪ್ರಪೋಸಲ್‌ಗೆ ಐಶ್ವರ್ಯ ಫಿದಾ ಆಗಿದ್ದಾರೆ 'ನಿನಗೆ ಖಂಡಿತಾ ಒಳ್ಳೆ ಹುಡುಗಿ ಸಿಗುತ್ತಾಳೆ. ಈ ರೀತಿ ಡೈಲಾಗ್ ಹೇಳಿದ್ದರೆ ಖಂಡಿತಾ ಒಳ್ಳೆ ಹುಡುಗಿ ಸಿಗುತ್ತಾಳೆ' ಎಂದು ಹೇಳುತ್ತಾರೆ. ಆಗ ನವಾಜ್ 'ಯಾಕೆ ನೀವು ಸಿಗಲ್ವಾ?' ಎಂದು ಮರು ಪ್ರಶ್ನೆ ಮಾಡುತ್ತಾರೆ.

ಸ್ವಲ್ಪ ಸಮಯದ ನಂತರ ನವಾಜ್ ಮತ್ತೆ ಐಶ್ವರ್ಯ ಬಳಿ ಹೋಗಿ 'ಚಿಕ್ಕವನ್ನು ಅಂತ ಯೋಚನೆ ಮಾಡಬೇಡಿ. ಪ್ರೀತಿಗೆ ಕಣ್ಣಿಲ್ಲ. ಐಶ್ವರ್ಯ ಪಿಸ್ಸೆ ಪ್ಲೀಸ್‌ ನನ್ನ ಪ್ರೀತ್ಸೆ' ಎಂದು ಡೈಲಾಗ್ ಹೊಡೆದು ಮತ್ತೊಂದು ಹಗ್ ಪಡೆದುಕೊಳ್ಳುತ್ತಾರೆ.

click me!