ಬಿಗ್ ಬಾಸ್ ಯಾರು ಗೆಲ್ತಾರೆ? ಮನೆಯಿಂದ ಹೊರಬಂದು ಅಚ್ಚರಿ ಭವಿಷ್ಯ ನುಡಿದ ಚಂದ್ರಕಲಾ

Published : Mar 28, 2021, 11:11 PM ISTUpdated : Mar 28, 2021, 11:13 PM IST
ಬಿಗ್ ಬಾಸ್ ಯಾರು ಗೆಲ್ತಾರೆ? ಮನೆಯಿಂದ ಹೊರಬಂದು ಅಚ್ಚರಿ ಭವಿಷ್ಯ ನುಡಿದ ಚಂದ್ರಕಲಾ

ಸಾರಾಂಶ

ಬಿಗ್ ಬಾಸ್ ಪ್ರಯಾಣ ಮುಗಿಸಿದ ಚಂದ್ರಕಲಾ/  ಈ ಬಾರಿ ವಿನ್ನರ್ ಯಾರಾಗಬಹುದು ಎಂದು ಹೇಳಿದ ಚಂದ್ರಕಲಾ/  ಹೆಣ್ಣು ಮಕ್ಕಳೆ ಮನೆಯಿಂದ ಹೊರಹೋಗುತ್ತಿದ್ದಾರೆ ಎನ್ನುವುದಕ್ಕೆ ಸರಿ ಮಾಡಿಕೊಳ್ಳುವುದು ನಿಮ್ಮ ಬಳಿಯೇ ಇದೆ ಎಂದ ಸುದೀಪ್

ಬೆಂಗಳೂರು(ಮಾ.  28)   ಬಿಗ್ ಬಾಸ್ ಮನೆಯಿಂದ ಕಿರುತೆರೆ ಕಲಾವಿದೆ ಚಂದ್ರಕಲಾ ಮೋಹನ್ ಹೊರಬಂದಿದ್ದಾರೆ. ಅವರ ಪ್ರಯಾಣ ಕೊನೆಯಾಗಿದ್ದು ನಾಲ್ಕನೇ ವಾರವೂ ಮಹಿಳಾ ಸ್ಪರ್ಧಿಯೇ ಹೊರಬಂದಂತಾಗಿದೆ.

ನಾಮಿನೇಶನ್ ಗೆ ಅವಕಾಶ ಕೊಡದ ಬಿಗ್ ಬಾಸ್ ನಾಯಕ ಅರವಿಂದ್ ಹೊರತುಪಡಿಸಿ ಮನೆಯಲ್ಲಿದ್ದ ಎಲ್ಲರನ್ನು ನಾಮಿನೇಟ್ ಮಾಡಿದ್ದರು. ಅಡುಗೆ ಮನೆ ಜವಾಬ್ದಾರಿಯನ್ನು ಹೆಚ್ಚಾಗಿ ತೆಗೆದುಕೊಂಡಿದ್ದ ಚಂದ್ರಕಲಾ ಹೊರಗೆ ಬಂದಿದ್ದು ಇನ್ನು ಮುಂದೆ ಮನೆಯವರಿಗೆ ಯಾವ ಸಮಸ್ಯೆ ಕಾಡಲಿದೆ ನೋಡಬೇಕಿದೆ.

ವಿಶ್ವ ಬಿಗ್ ಬಾಸ್ ಮನೆ ನಾಯಕನಾಗಿದ್ದು ಹೇಗೆ? 

ನಾನು ಇರುವುದೇ ಹೀಗೆ, ಎಲ್ಲಿಯೂ ಬದಲಾಗಿಲ್ಲ ಎಂದು ಸುದೀಪ್ ಜತೆ ವೇದಿಕೆಯಲ್ಲಿ ಚಂದ್ರಕಲಾ ವಿಚಾರ ಹಂಚಿಕೊಂಡರು. ಇನ್ನು ಜಾಸ್ತಿ ಎನರ್ಜಿ ಇದ್ದು ಮನೆಯಲ್ಲಿ ಹಾಗೆ ಇರುತ್ತೇನೆ ಎಂದರು. ಅರವಿಂದ್ ಈ ಬಾರಿ ಬಿಗ್ ಬಾಸ್ ವಿನ್ ಆಗಬಹುದು ಎಂದು ಹೇಳಿದರು.

ನನಗೆ ಇನ್ನು ಸ್ವಲ್ಪ ಕಾಲಾವಕಾಶ ಇದ್ದರೆ ವಾತಾವರಣ ಬದಲಾಗುತ್ತಿತ್ತು. ಅರವಿಂದ್, ದಿವ್ಯಾ ಯು, ದಿವ್ಯಾ ಸುರೇಶ್ ಟಾಫ್ ಥ್ರಿಯಲ್ಲಿ ಇರ್ತಾರೆ. ಅರವಿಂದ್ ಗೆಲ್ಲುತ್ತಾರೆ. ಮುಂದಿನ ವಾರ ಶಮಂತ್ ಅಥವಾ ಶಂಕರ್ ಅಶ್ವಥ್ ಎಲಿಮನೇಟ್ ಆಗಬಹುದು ಎಂದರು. ನನ್ನ ಪ್ರಕಾರ ನಿಧಿ ಬರಬೇಕು. ಅವರು ನನ್ನ ಮಾತು ನಡೆಯಬೇಕು ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದರು. 

 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್