
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಏನೇ ಸಂದೇಶ ರವಾನೆ ಮಾಡಬೇಕೆಂದರೂ ಅದು ಕೇವಲ ಧ್ವನಿ ಮೂಲಕ ಮಾತ್ರ ಸಾಧ್ಯ. ಸ್ವತಃ ಬಿಗ್ ಬಾಸ್ ಯಾರು ಎಂಬುದಾಗಿ ಯಾರಿಗೂ ಗೊತ್ತಿಲ್ಲ. ಮನೆ ಏನೇ ಸಾಮಾಗ್ರಿ ಕಳಹಿಸಬೇಕೆಂದರೂ ಸ್ಟೋರ್ ರೂಮ್ ಮೂಲಕ ಕಳುಹಿಸಲಾಗುತ್ತದೆ. ಬಿಗಿ ಭದ್ರತೆ ಇರುವ ಮನೆಗೆ ಯಾರು ಬರಲು ಸಾಧ್ಯ? ಹೊರಗಿನವರು ಬಂದಿಲ್ಲ ಅಂದ್ರೆ ಇಲ್ಲಿ ಅಗೋಚರ ಶಕ್ತಿ ಇರುವುದು ನಿಜವೇ?
ಬಿಗ್‌ಬಾಸ್ ಮನೆ ಕ್ಯಾಪ್ಟನ್ ಆದ ಅತೀ ಕಿರಿಯ ಸದಸ್ಯ ವಿಶ್ವ; ಕುದುರೆ ಅಂದ್ರೆ ಅಶ್ವ!
ರಾಜೀವ್, ದಿವ್ಯಾ ಸುರೇಶ್ ಹಾಗೂ ವಿಶ್ವನಾಥ್ ಅಡುಗೆ ಮನೆ ಕಡೆಗೆ ಮುಖ ಮಾಡಿ ಮಾತನಾಡುತ್ತಿದ್ದರು, ರಾತ್ರಿ ಆಗುತ್ತಿದ್ದಂತೆ, ಬಿಗ್ ಬಾಸ್ ಲೈಟ್ ಆಫ್ ಮಾಡುತ್ತಾರೆ. ಲೈಟ್ ಆಫ್ ಆದ ತಕ್ಷಣವೇ ಅಡುಗೆ ಮನೆಯಲ್ಲಿದ್ದ ಕುಕ್ಕರ್ ವಿಸಿಲ್ ಬೀಳುತ್ತದೆ. ಶಬ್ಧ ಎಲ್ಲಿಂದ ಬಂದಿದ್ದು ಎಂದು ತಿಳಿದುಕೊಂಡ ರಾಜೀವ್ ಮತ್ತೆ ಅಡುಗೆ ಮನೆ ಕಡೆ ಮುಖ ಮಾಡಿ ನೀರವಾಗಿ ನೋಡುತ್ತಾರೆ. ಅಷ್ಟರಲ್ಲಿ ಕುಕ್ಕರ್ ಮುಚ್ಚುಳ ಬೀಳುತ್ತದೆ.
ಈ ಘಟನೆ ಬಗ್ಗೆ ರಾಜೀವ್ ಮನೆ ಮಂದಿಗೆ ವಿವರಿಸುತ್ತಾರೆ. 'ನೀರಿನಿಂದ ಪಾತ್ರೆ ಹಾಗೂ ವಿಸಲ್ ಜಾರಿರಬೇಕು,' ಎಂಬುದಾಗಿ ದಿವ್ಯಾ ಹಾಗೂ ವಿಶ್ವನಾಥ್ ಹೇಳುತ್ತಾರೆ. ಗಾಬರಿಗೊಂದ ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ ಏನಿರ ಬಹುದು ಎಂದು ವಾದ ಮಾಡಲು ಶುರು ಮಾಡುತ್ತಾರೆ. ಅವರ ಭಯ ನೋಡಲಾಗದ ರಾಜೀವ್ ಸತ್ಯ ಹೇಳುತ್ತಾರೆ.
ಬೆದರು ಬೊಂಬೆ ದಿವ್ಯಾ ಸುರೇಶ್; ಲ್ಯಾಗ್ ಮಂಜು ಕಾಮಿಡಿ ಅತಿಯಾಗಿ ಕಣ್ಣೀರಿಟ್ಟ ಸ್ನೇಹಿತೆ!
'ಮನೆಯಲ್ಲಿ ಯಾವ ಶಕ್ತಿಯೂ ಇಲ್ಲ, ಯಾವ ದೆವ್ವನೂ ಇಲ್ಲ. ಅಲ್ಲಿ ನೀರಿದ್ದ ಕಾರಣ ನಿಂತಿದ್ದ ಪಾತ್ರೆ ಜಾರಿ ಬಿದ್ದಿತ್ತು ಅಷ್ಟೆ' ಎಂದು. ತಕ್ಷಣವೇ ಮನೆಯ ಸದಸ್ಯರು ನಿಟ್ಟುಸಿರು ಬಿಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.