BBK 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರ ಕಾಮಿಡಿಯನ್ನು ವೀಕ್ಷಕರು ಹೊಗಳಿದರೆ, ಅಲ್ಲಿದ್ದವರು ಮನಸ್ಸಿಗೆ ಬೇಸರ ಆಗುತ್ತದೆ, ಅತಿರೇಕ ಆಯ್ತು ಎಂದು ಆರೋಪ ಮಾಡಿದ್ದರು. ಈಗ ಗಿಲ್ಲಿಗೆ ಕ್ಲಾಸ್ ತಗೊಳ್ತಾರಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಗಿಲ್ಲಿ ನಟ ಅವರ ಕಾಮಿಡಿ ಬಗ್ಗೆ ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ, ಗಿಲ್ಲಿ ನಟನ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಸ್ಪರ್ಧಿಗಳು ಕೂಡ ಗಿಲ್ಲಿ ವಿರುದ್ಧವಾಗಿ ಮಾತನಾಡಿದ್ದಾರೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್ ಮಾಡಿದೆ.
ಸ್ಪರ್ಧಿಗಳು ಏನು ಹೇಳಿದರು?
ನಿಮಗೆ ಯಾವುದಾದರೂ ಹೋಟೆಲ್‌ಗೆ ಹೋದರೆ ವೇಟರ್ ಈ ರೀತಿ ಕೇಳಿದರೆ ಹೇಗೆ ಅನಿಸುವುದು? ಓಕೆನಾ? ಎಂದು ಕಿಚ್ಚ ಸುದೀಪ್ ಅವರು ಗಿಲ್ಲಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಸ್ಪರ್ಧಿಗಳು ತಿರುಗಿ ಮಾತನಾಡಿದ್ದಾರೆ.
ಜಾಹ್ನವಿ ಅವರು “ಕೆಲವು ಮಿಸ್ಟೇಕ್‌ಗಳು ಹೈಲೈಟ್ ಆಗುತ್ತವೆ. ಇಲ್ಲಿ ಒಬ್ಬನ ತಪ್ಪಿನಿಂದ ಎಲ್ಲರ ಪ್ರಯತ್ನ ಹಾಳಾಗಿ ಹೋಯ್ತು” ಎಂದಿದ್ದಾರೆ.
ಕಾವ್ಯ ಶೈವ ಅವರು, “ಆರಂಭದಲ್ಲಿ ಗಿಲ್ಲಿ ನಟ ತಪ್ಪು ಮಾಡಿದ್ದಾನೆ” ಎಂದಿದ್ದಾರೆ.
ರಜತ್ ಅವರು, “ಪುಕ್ಸಟೆ ತಿನ್ನೋಕೆ ಬಂದ್ರಿ ಎಂದರು. ಮಂಜು ಅವರ ಮದುವೆ ಬಗ್ಗೆ ಮಾತಾಡಿದ್ರು. ಸಾರಿ ಹೇಳ್ತಾನೆ, ಐದು ನಿಮಿಷಕ್ಕೆ ಮತ್ತೆ ಅದೇ ತಪ್ಪು ಮಾಡ್ತಾನೆ” ಎಂದಿದ್ದಾರೆ.
ಸ್ಪಂದನಾ ಸೋಮಣ್ಣ ಅವರು, “ಗಿಲ್ಲಿ ಕಾಮಿಡಿಯಿಂದ ಬೇರೆಯವರ ಮನಸ್ಸಿಗೆ ಬೇಸರ ಆಗುತ್ತದೆ ಎಂದರೆ ಅದು ಸರಿ ಅಲ್ಲ” ಎಂದಿದ್ದಾರೆ.
ಈ ಪ್ರೋಮೋಗೆ ವೀಕ್ಷಕರ ಕಾಮೆಂಟ್ ಏನು?
ಒಬ್ಬ ಅತಿಥಿ ಇವರ ರೀತಿ ದಬ್ಬಾಳಿಕೆ ಮಾಡಿದರೆ ಹೋಟೆಲ್ ಮ್ಯಾನೇಜ್‌ಮೆಂಟ್‌ನವರು ಏನು ಮಾಡಬೇಕು? ಸಪ್ಲಾಯರ್ಸ್ ಸ್ಟಾಪ್‌ನವರು ಏನು ಮಾಡಬೇಕು? ಒಬ್ಬ ಅತಿಥಿ ಪ್ರೀತಿಯಿಂದ ಹೋಟೆಲ್‌ಗೆ ಬಂದರೆ ಅದು ಸರಿ. ಇದಕ್ಕೆ ಉದಾಹರಣೆ ಮೋಕ್ಷಿತಾ. ಅದೇ ರಜತ್, ತ್ರಿವಿಕ್ರಮ್, ಮಂಜು, ಸ್ವಲ್ಪಮಟ್ಟಿಗೆ ಚೈತ್ರಾ ಕುಂದಾಪುರ ಇಂತವರು ಬಂದರೆ ನಾವು ಗುಲಾಮರಾಗಬೇಕಾ? ನಮ್ಮ ವ್ಯಕ್ತಿತ್ವವನ್ನು ಕೀಳು ಮಟ್ಟಕ್ಕೆ ತಗೊಂಡು ಹೋದಾಗ, ಇಂತಹ ಕ್ರಿಯೆ ಬಂದರೆ ಮರುದಿನ ನಾವು ಕೆಲಸ ಬಿಡುತ್ತೇವೆ.
ಎಲ್ಲಿಯಾದರೂ ಹೋಟೆಲ್ ಹೋದ್ರೆ ಗೆಸ್ಟ್ ಆಗಿ ಬಂದೋರು ಸಪ್ಲೈಯರ್ ಗಡ್ಡ ಶೇವ್ ಮಾಡ್ತಾರಾ?
ರೆಸಾರ್ಟ್‌ಗೆ ಹೋದಾಗ ಅತಿಥಿಗಳು ವೇಟರ್ ಮೇಲೆ ಇತರ ದೌರ್ಜನ ಮಾಡಿದರೆ ಸುಮ್ಮನೆ ಇರುತ್ತಾರೆ
ಅತಿಥಿಗಳು ಅತಿಥಿ ಆಗಿ ಇರಲಿಲ್ಲ, ಅವರ ಅಹಂಕಾರಕ್ಕೆ ತಿಥಿ ಮಾಡಿದ್ದು ಮಾತ್ರ ಗಿಲ್ಲಿ.
ಗಿಲ್ಲಿ ಒಬ್ಬನದ್ದೇ ತಪ್ಪಿಲ್ಲ, ಅತಿಥಿಗಳದ್ದು ಅತಿರೇಕವಾದ ವರ್ತನೆ ಇತ್ತು. ಇವರನ್ನು ಕರೆಸಿ ಇಡೀ ವಾರವನ್ನೇ ಹಾಳು ಮಾಡಿದ್ರಿ. ಅತಿಥಿಗಳು ಕೂಡ ಬಂದು, ಇದ್ದ ಮರ್ಯಾದಿ ಕೂಡ ಕಳ್ಕೊಂಡ್ರು ಅಷ್ಟೇ
ಗಿಲ್ಲಿ ಹೇಳಿದ್ದು ಪಕ್ಕಾ ನಿಜ ಆಗೋಯ್ತು, ಆ yellow ರೂಮ್‌ನಲ್ಲಿ ನೆಗೆಟಿವ್ ಎನರ್ಜಿ ಇದೆ ಅಂತ , ಅದಿಕ್ಕೆ ಅತಿಥಿಗಳು ಹಾಗೆ ಆಡೋದು
ಕಳೆದ ಸೀಸನ್ ಸ್ಪರ್ಧಿಗಳನ್ನು ಕರೆಸೋ ಬದಲು ನಾಲ್ಕೈದು ಗೇಮ್ ಆಡಿಸಿದ್ದರೆ ಅವರ ಸಾಮರ್ಥ್ಯ ಗೊತ್ತಾಗುತ್ತಿತ್ತು. ಕಳೆದ ಸೀಸನ್ ಅಲ್ಲಿ ದರ್ಪ ತೋರಿಸಿದವರನ್ನು ಕರೆಸಿ ಈಗಿನ ಸ್ಪರ್ಧಿಗಳ ಮನೋಸ್ಥೈರ್ಯ ಕುಂದಿಸುವುದು ಎಷ್ಟರ ಮಟ್ಟಿಗೆ ಸರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.