ಹೊರಗಡೆ ವಿವಾದದಲ್ಲಿರುವ ಬಿಗ್‌ಬಾಸ್ ಜಾಹ್ನವಿ ಒಳಗಡೆ ಸಿಕ್ಕಾಪಟ್ಟೆ ಗ್ಲಾಮರ್, ವಯಸ್ಸಿನ ಬಗ್ಗೆ ನೆಟ್ಟಿಗರ ಹುಡುಕಾಟ

Published : Oct 06, 2025, 06:09 PM IST
BBK Jahnavi

ಸಾರಾಂಶ

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಸ್ಪರ್ಧಿ, ನಿರೂಪಕಿ ಜಾಹ್ನವಿ ತಮ್ಮ ವಿಚ್ಛೇದನದ ಬಗ್ಗೆ ಮನೆಯಲ್ಲಿ ಮಾತನಾಡಿದ್ದಾರೆ. ತನ್ನ ಪತಿ ಜೀವಂತವಾಗಿರುವಾಗಲೇ ಬೇರೆ ಮದುವೆಯಾಗಿದ್ದೇ ಡಿವೋರ್ಸ್‌ಗೆ ಕಾರಣ ಎಂದಿದ್ದರು. ಆದರೆ, ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಸ್ಪರ್ಧಿಯಾಗಿರುವ ನಿರೂಪಕಿ ಜಾಹ್ನವಿ ಸ್ಟೈಲೀಶ್ ಆಗಿ ಐದನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಮನೆಗೆ ಅವರು ಎಂಟ್ರಿ ಕೊಟ್ಟಾಗಿನಿಂದ ಜಾಹ್ನವಿ ಹೊರ ಪ್ರಪಂಚದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಅವರು ಡಿವೋರ್ಸ್‌ ಪಡೆದಿರುವುದು ಗೊತ್ತೇ ಇದೆ. ಬಿಗ್‌ಬಾಸ್‌ ಮನೆಯಲ್ಲೂ ಇದರ ಬಗ್ಗೆ ಜಾಹ್ನವಿ ಮಾತನಾಡಿದ್ದು, ಮೊದಲ ಗಂಡ ಇದಕ್ಕೆ ಉತ್ತರವನ್ನೂ ನೀಡಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದೀಗ ಜಾಹ್ನವಿ ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಸುದ್ದಿ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ ಜಾಹ್ನವಿ, `ಗಿಚ್ಚಿ ಗಿಲಿಗಿಲಿ' ಮತ್ತು ನನ್ನಮ್ಮ ಸೂಪರ್ ಸ್ಟಾರ್' ನಂತಹ ಜನಪ್ರಿಯ ರಿಯಾಲಿಟಿ ಶೋ ನಂತರ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ಜಾಹ್ನವಿ ವಯಸ್ಸೆಷ್ಟು?

ಇದೀಗ ಅವರ ವಯಸ್ಸಿನ ಬಗ್ಗೆ ಕೂಡ ಹುಡುಕಾಟ ಆರಂಭವಾಗಿದೆ. ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿರುವ ಜಾಹ್ನವಿಗೆ ಓರ್ವ ಮಗನಿದ್ದಾನೆ. ಬಿಗ್‌ ಬಾಸ್ ಮನೆಯೊಳಗೆ ತನ್ನ ಸೌಂದರ್ಯ ಮತ್ತು ಗ್ಲಾಮರ್‌ ನಿಂದ ಗಮನ ಸೆಳೆದಿದ್ದಾರೆ. ಹೀಗಾಗಿ ಜಾಹ್ನವಿಗೆ ವಯಸ್ಸಿನ ಬಗ್ಗೆ ಬಿಗ್‌ಬಾಸ್‌ ಆಸಕ್ತರು ಹುಡುಕಾಟ ನಡೆಸಿದ್ದಾರೆ. ಅತೀ ಸಣ್ಣ ವಯಸ್ಸಿನಲ್ಲಿ ಮದುವೆಯಾದ ಜಾಹ್ನವಿ ಅವರ ವಯಸ್ಸಿನ ನಿರ್ದಿಷ್ಟ ಮಾಹಿತಿ ಸಿಗುತ್ತಿಲ್ಲ. ಈಗ 35 ವರ್ಷ ಎಂದು ಹೇಳಲಾಗಿದೆ. ಇನ್ನು ಕೆಲವು ಕಡೆ 28 ವರ್ಷ ವಯಸ್ಸು ಎನ್ನಲಾಗಿದ್ದು, ಇವರು ಬಿಎಸ್‌ಸಿ ಜರ್ನಲಿಸಮ್ ವಿದ್ಯಾಭ್ಯಾಸ ಮಾಡಿದ್ದಾರೆ. ಮೂಲತ ಹಾಸನದವರಾದ ಇವರು ಕರ್ನಾಟಕ ಮೆಚ್ಚಿದ ನಿರೂಪಕರಲ್ಲಿ ಒಬ್ಬರು.

ಡಿವೋರ್ಸ್ ವಿಷಯ ಮಾತನಾಡಿದ್ದ ಜಾಹ್ನವಿ

ಬಿಗ್‌ಬಾಸ್‌ ಕನ್ನಡ ಸೀಸನ್‌–12ರಲ್ಲಿ ಸ್ಪರ್ಧಿಯಾಗಿರುವ ಜಾಹ್ನವಿ, ಮನೆಯಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡಿದ ಸಂದರ್ಭ ಡಿವೋರ್ಸ್ ವಿಷಯವನ್ನು ಬಹಿರಂಗಪಡಿಸಿದ್ದರು. ಈ ಕುರಿತು ಅವರು, “ನನ್ನ ಮಾಜಿ ಪತಿಗೆ ನಾನು ಸುಮ್ಮನೆ ವಿಚ್ಛೇದನ ಕೊಟ್ಟದ್ದೇನಲ್ಲ. ನಾನು ಜೀವಂತವಾಗಿರುವಾಗಲೇ ಅವರು ಬೇರೊಬ್ಬರನ್ನು ಮದುವೆಯಾಗಿದ್ದರು. ಮಗುವೂ ಆಗಿತ್ತು. ನನ್ನ ಗಂಡನ ಸ್ಥಾನ ಬೇರೊಬ್ಬರಿಗೆ ಹೋದಾಗ ಅದರ ಅರ್ಥವೇ ಇರಲಿಲ್ಲ. ಅದಕ್ಕಾಗಿಯೇ ಡಿವೋರ್ಸ್ ಕೊಡಬೇಕಾಯಿತು ಎಂದಿದ್ದರು.

ಮಾಜಿ ಪತಿ ಆರೋಪ

ಆದರೆ ಈ ಹೇಳಿಕೆಯ ನಂತರ, ಜಾಹ್ನವಿ ಮಾಜಿ ಪತಿ ಕಾರ್ತಿಕ್ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ. ಜಾಹ್ನವಿ ನೀಡಿದ ಹೇಳಿಕೆಗಳಿಗೆ ವಿರುದ್ಧವಾಗಿ, ಕಾರ್ತಿಕ್ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾವು ಮದುವೆಯಾದ ಮೊದಲ ಎರಡು ವರ್ಷಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಜೀವನ ಸುಗಮವಾಗಿತ್ತು. ಆದರೆ ನಂತರ ಜಾಹ್ನವಿ ಬದಲಾದರು. ಆಕೆ ಬೇರೆ ವ್ಯಕ್ತಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಒಬ್ಬ ಗಂಡನಾಗಿ ಅದನ್ನು ಯಾರೂ ಸಹಿಸಿಕೊಳ್ಳಲಾರರು. ಜಾಹ್ನವಿ ನೀಡುತ್ತಿರುವ ಹೇಳಿಕೆಗಳಲ್ಲಿ ಬಹುತೇಕ ನಿಜವಲ್ಲ. ನಾನು ಆಕೆಯ ವರ್ತನೆಯನ್ನು ಕಣ್ಣಾರೆ ಕಂಡಿದ್ದೇನೆ. ಆಕೆ ನಿರಂತರವಾಗಿ ಬೇರೆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು. ಒಂದು ಹಂತದಲ್ಲಿ ಕುಡಿದ ಸ್ಥಿತಿಯಲ್ಲಿ ನನ್ನಿಂದ ತಪ್ಪು ನಡೆದಿದೆ, ಆದರೆ ಅದಕ್ಕೆ ಕಾರಣ ಆಕೆಯ ವರ್ತನೆಯೇ ಎಂದು ಆರೋಪಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!