ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ ನಟಿ ಅನುಷಾ ರೈ ಐದನೇ ಸ್ಪರ್ಧಿಯಾಗಿ ಪ್ರವೇಶ ಪಡೆದರು. ವೇದಿಕೆ ಮೇಲೆ ಧರ್ಮ ಕೀರ್ತಿರಾಜ್ ಅವರನ್ನು ಗುರುತಿಸಲು ವಿಫಲರಾದ ಅನುಷಾ, 'ಗಂಡೋ ಹೆಣ್ಣೋ' ಎಂದು ಕೇಳಿ ನಗೆಗೀಡಾದರು.
ಬೆಂಗಳೂರು (ಸೆ.29): ಬಿಗ್ ಬಾಸ್ ಕನ್ನಡ ಸೀಸನ್ 11 ಭಾನುವಾರದಂದು (ಸೆಪ್ಟೆಂಬರ್ 29) ಬ್ಲಾಕ್ಬಸ್ಟರ್ ಸಂಚಿಕೆಯೊಂದಿಗೆ ಪ್ರಾರಂಭವಾಗಿದೆ. BBK 11 ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ ಸ್ಟಾರ್‌ಗಳ ಮೇಳ ನಡೆದಿತ್ತು. ಈಗಾಗಲೇ ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್ ಮನೆಗೆ ಎಂಟ್ರಿಯಾಗಿದ್ದು ಐದನೇ ಸ್ಪರ್ಧಿಯಾಗಿ 26 ವರ್ಷದ ಯುವ ನಟಿ ಅನುಷಾ ರೈ ವೇದಿಕೆಗೆ ಆಗಮಿಸಿದ್ದರು. ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಏಕಕಾಲದಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದರು. ತುಮಕೂರಿನವರಾದ ಅನುಷಾ ರೈ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅನುಷಾ ಅವರು ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಆಚಾರ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅವರು ಪದವಿ ಪಡೆದುಕೊಂಡಿದ್ದಾರೆ. ಅವರು ಮಹಾನುಭಾವರು, ಕರ್ಷಣಂ ಮತ್ತು ಗೂಸಿ ಗ್ಯಾಂಗ್, ಪೆಂಟಗನ್ ಮತ್ತು ಧೈರ್ಯಂ ಸರ್ವತ್ರ ಸಾಧನಂ ಮುಂತಾದ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ನಟಿ ಇತ್ತೀಚೆಗೆ ದುಬೈನಲ್ಲಿ ನಡೆದ SIIMA ಅವಾರ್ಡ್ಸ್ 2024 ರಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ಬಿಗ್ ಬಾಸ್ ಕನ್ನಡ 11 ರ ನಿರೂಪಕ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 11 ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಗಂಡಿನ ಸ್ಪರ್ಶವನ್ನೂ ಅರಿಯದ ಅನುಷಾ ರೈ: ಅನುಷಾ ರೈ ವೇದಿಕೆಗೆ ಬಂದ ಬಳಿಕ ನಿರೂಪಕ ಕಿಚ್ಚ ಸುದೀಪ್ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ ಮುಂದೆ ಬರುವ ಸ್ಪರ್ಧಿ ಯಾರೆಂದು ಅಂದಾಜು ಮಾಡುವಂತೆ ಹೇಳಿದ್ದರು. ಈ ವೇಳೆ ವೇದಿಕೆಗೆ 6ನೇ ಸ್ಪರ್ಧಿ ಧರ್ಮ ಕೀರ್ತಿರಾಜ್ ಆಗಮಿಸಿದ್ದರು. ಧರ್ಮ ಕೀರ್ತಿರಾಜ್ ಅವರ ಕೈಯನ್ನು ಅನುಶಾ ರೈ ಅವರಿಗೆ ನೀಡಿ ಮುಂದಿನ ಸ್ಪರ್ಧಿ ಯಾರಿರಬಹುದು ಎಂದು ಅಂದಾಜು ಮಾಡುವಂತೆ ಹೇಳಿದರು. ಈ ಹಂತದಲ್ಲಿ ಧರ್ಮ ಕೀರ್ತಿರಾಜ್ ಅವರ ಸಿನಿಮಾದ ಟ್ಯೂನ್ ಕೂಡ ಬರುತ್ತಿತ್ತು. ಆದರೆ, ಅನುಷಾ ರೈ, ಧರ್ಮ ಕೀರ್ತಿರಾಜ್ ಅವರ ಕೈಯನ್ನೂ ಹಿಡಿದುಕೊಂಡಿದ್ದರೂ, ಇದು ಗಂಡೋ? ಹೆಣ್ಣೋ? ಎಂದು ಪ್ರಶ್ನೆ ಮಾಡಿದರು. ಇದನ್ನು ಕೇಳಿದ ಬಳಿಕ ಇಡೀ ವೇದಿಕೆಯಲ್ಲಿ ನಗು ಉಕ್ಕಿ ಹರಿಯಿತು.
ನರಕಕ್ಕೆ ಮೊದಲ ಎಂಟ್ರಿ: ಬಿಗ್ ಬಾಸ್ ಮನೆಯಲ್ಲಿ ಇವರು ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಹೋಗಬೇಕೋ? ಎನ್ನುವದರ ಬಗ್ಗೆ ಪ್ರಶ್ನೆ ಎದುರಾಯಿತು. ಈ ವೇಳೆ ಬಿಗ್ ಮನೆಯ ಮೊದಲ ಸ್ಪರ್ಧಿಯಾಗಿದ್ದ ಭವ್ಯಾ ಗೌಡ, ಅನುಷಾ ರೈರನ್ನು ನರಕಕ್ಕೆ ಕಳಿಸುವ ತೀರ್ಮಾನ ಮಾಡಿದರೆ, ಧರ್ಮ ಕೀರ್ತಿರಾಜ್‌ಗೆ ಸ್ವರ್ಗಕ್ಕೆ ಎಂಟ್ರಿ ನೀಡಿದರು.
undefined
BBK11: ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗೀತಾ ನಟಿ ಭವ್ಯಾ ಗೌಡ; ಮೊದಲು ಕಾಲಿಟ್ಟಿದ್ದೇ ನರಕಕ್ಕೆ!
ಇತ್ತೀಚೆಗೆ ದರ್ಶನ್ ಪ್ರಕರಣದ ಬಗ್ಗೆಯೂ ಮಾತನಾಡಿದ್ದ ಅನುಷಾ ರೈ, ಅವರು ಆರೋಪಿ ಮಾತ್ರ, ಅವರೇ ತಪ್ಪಿತಸ್ಥರು ಎಂದು ಕೋರ್ಟ್ ಹೇಳಿಲ್ಲ ಎಂದಿದ್ದರು. 'ನಾನು ಬಾಲ್ಯದಿಂದಲೂ ದರ್ಶನ್ ಅವರ ಅಭಿಮಾನಿ. ಸಾಕಷ್ಟು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಅವರದ್ದು ತುಂಬಾ ಸಿಹಿಯಾದ ವ್ಯಕ್ತಿತ್ವ ಹಾಗೂ ಕರುಣಾಮಯಿ. ನಾನು ನನ್ನ ಜನ್ಮದಿನದಂದು ಮಾತ್ರವೇ ಅಭಿಮಾನಿಗಳಿಗೆ ಊಟ ಹಾಕುತ್ತೇನೆ. ಆದರೆ, ನನ್ನ ಅಭಿಮಾನಿಗಳು ನನಗೆ ವರ್ಷದ 365 ದಿನವೇ ಊಟ ಹಾಕುತ್ತಾರೆ ಎನ್ನುತ್ತಿದ್ದರು. ಅಭಿಮಾನಿಗಳಿಂದಲೇ ನಾನು ಇಂದು ಉತ್ತಮ ಜೀವನ ನಡೆಸುತ್ತಿದ್ದೇನೆ ಎಂದಿದ್ದರು. ಪ್ರತಿ ಬಾರಿ ಅವರ ಹಚ್ಚೆ ಹಾಕಿಕೊಂಡು ಬರುವ ಅಭಿಮಾನಿಗೆ, ತಮ್ಮ ಹಚ್ಚೆಯನ್ನು ಹಾಕಬೇಡಿ ಎನ್ನುತ್ತಿದ್ದರು. ತಂದೆ-ತಾಯಿಗಳ ಟ್ಯಾಟು ಹಾಕಿಸಿಕೊಳ್ಳಿ ಎನ್ನುತ್ತಿದ್ದರು. ದರ್ಶನ್ ಅವರು ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟೀಸ್ ಎನ್ನುವ ಟ್ಯಾಟು ಹಾಕಿಸಿಕೊಂಡಿದ್ದಾರೆ. ಅದಲ್ಲದೆ, ರಸ್ತೆಯಲ್ಲಿ ಕಾರು ಹೋಗುವಾಗ ಯಾರೂ ಕೂಡ ಫಾಲೋ ಮಾಡಬೇಡಿ ಎನ್ನುತ್ತಾರೆ. ವೇಗವಾಗಿ ಹೋಗುವ ನನ್ನ ಕಾರ್‌ಅನ್ನು ಫಾಲೋ ಮಾಡುವ ಭರದಲ್ಲಿ ಆಕ್ಸಿಡೆಂಟ್ ಆಗಬಹುದು ಎನ್ನುವ ಎಚ್ಚರಿಕೆಯನ್ನೂ ನೀಡುತ್ತಾರೆ. ಇಷ್ಟು ಕೇರಿಂಗ್ ಆಗಿರುವ ವ್ಯಕ್ತಿಯೊಬ್ಬರು ಕೊಲೆ ಮಾಡಿದ್ದಾರೆ ಎಂದರೆ ನಂಬಲೂ ಆಗುತ್ತಿಲ್ಲ. ಈಗಲೂ ಅವರನ್ನು ಕ್ರಿಮಿನಲ್ ಎಂದು ಹೇಳಿಲ್ಲ. ಕಾನೂನು ಏನು ಹೇಳುತ್ತೋ ಅಲ್ಲಿಯವರೆಗೂ ಕಾಯೋಣ ಎಂದಿದ್ದರು.
BBK 11: ಮಗುವಿನಿಂದ ಬಂದ ಅದೃಷ್ಟ: ಬಿಗ್ ಬಾಸ್ ಮನೆಗೆ ಟಿಕ್‌ಟಾಕ್ ಸ್ಟಾರ್ ಧನರಾಜ್ ಆಚಾರ್ಯ ಎಂಟ್ರಿ..!