ಬಿಗ್ ಬಾಸ್ 13, ಮೊದಲ ವಾರದಲ್ಲೇ ಪ್ರಥಮಾ ಪ್ರಸಾದ್ ಔಟ್, ಜರ್ನಿ ಶುರುವಾಗುವ ಮೊದಲೇ ಅಂತ್ಯ

Published : Sep 13, 2026, 10:41 PM IST
Bigg Boss 13 Prathama Prasad Evicted

ಸಾರಾಂಶ

ಬಿಗ್ ಬಾಸ್ 13ರ ಮೊದಲ ಎಲಿಮಿನೇಷನ್ ಮುಗಿದಿದೆ. ಹಲವು ನಿರೀಕ್ಷೆಗಳೊಂದಿಗೆ ಬಿಗ್ ಬಾಸ್ 13ಕ್ಕೆ ತೆರಳಿದ್ದ ಪ್ರಥಮಾ ಪ್ರಸಾದ್ ಪಯಣ ಆರಂಭಿಸುವ ಮೊದಲೇ ಹೊರಬಿದ್ದಿದ್ದಾರೆ. ಮೊದಲ ಎಲಿಮಿನೇಟ್ ಸ್ಪರ್ಧಿಯಾಗಿ ಪ್ರಥಮಾ ಹೊರಬಂದಿದ್ದಾರೆ.

ಬೆಂಗಳೂರು (ಸೆ.13) ಬಿಗ್ ಬಾಸ್ ಕನ್ನಡ ಶೋ ಆರಂಭದಲ್ಲೇ ಹಲವು ಟ್ವಿಸ್ಟ್ ನೀಡುತ್ತಿದೆ. ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮೊದಲೇ ಪಯಣ ಅಂತ್ಯಗೊಳ್ಳುತ್ತಿದೆ. #bbk13 ಆರಂಭಗೊಂಡ ಒಂದೇ ವಾರದಲ್ಲಿ ಪ್ರಥಮಾ ಪ್ರಸಾದ್ ಆಟ ಮುಗಿಸಿ ಹೊರಬಂದಿದ್ದಾರೆ. ಬಿಗ್ ಬಾಸ್‌ಗೆ ತೆರಳುವಾದ ತಮ್ಮ ಬದುಕಿನಲ್ಲಿ ಅನುಭವಿಸಿದ ನೋವಿನ ಬಗ್ಗೆ, ಹತಾಶೆ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದರು. ತಾಯಿ ಸ್ಟಾರ್‌ ನಟಿಯಾಗಿ ಮೆರೆದವರು, ಈಗಲೂ ಲೀಡಿಂಗ್ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಪ್ರಥಮ ಪ್ರಸಾದ್‌ಗೆ ಬಿಗ್ ಬಾಸ್ ವೇದಿಕೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ.

ತನ್ನದೇ ಐಡೆಂಟಿಟಿ ಪಡೆಯಲು ಬಂದು ಔಟ್

ನಾನು ಇಂಥವರ ಮಗಳು, ಇಂಥವರ ಹೆಂಡತಿ, ಈ ಮಕ್ಕಳ ಅಮ್ಮ ಎಂಬುವುದೇ ನನ್ನ ಐಡೆಂಟಿಟಿ ಎಂಬುವುದಾಗಿ ಪ್ರಥಮಾ ಪ್ರಸಾದ್ ಬೇಸರದಲ್ಲಿ ಹೇಳಿಕೊಂಡಿದ್ದರು. ಈ ವೇದಿಕೆಯ ಮೂಲಕ ನಾನು ನನ್ನ ಐಡೆಂಟಿ ಪಡೆದುಕೊಳ್ಳಬೇಕು ಎಂಬ ಬಯಕೆಯಲ್ಲಿದ್ದ ಪ್ರಥಮಾ ಪ್ರಸಾದ್ ಲೆಕ್ಕಾಚಾರ ಉಲ್ಟಾ ಆಗಿದೆ. ಇಲ್ಲಿಯೂ ಪ್ರಥಮಾಗೆ ಲಕ್ ಕೈಕೊಟ್ಟಿದೆ. ಬಿಗ್‌ಬಾಸ್‌ ಮನೆಗೆ ಬಂದು ಒಂದು ವಾರ ಕಳೆದರು. ಆದರೆ ಈ ಹಿಂದಿನ ಸೀಸನ್‌ಗಿಂತ ಈ ಬಾರಿ ಬಿಗ್ ಬಾಸ್ ಸ್ವಲ್ಪ ಭಿನ್ನವಾಗಿದೆ. ಈ ಬಾರಿ ಸ್ಪರ್ಧೆಗಳಿಗೆ ನೇರವಾಗಿ ಬಿಗ್‌ಬಾಸ್ ಮನೆಯೊಳಗೆ ಹೋಗುವ ಅವಕಾಶವಿರಲಿಲ್ಲ. ವಿಮಾನದೊಳಕ್ಕೆ ಹೋಗಿದ್ದರು, ಅವರಲ್ಲಿ ಕೆಲವರಷ್ಟೇ ಬಿಗ್‌ಬಾಸ್ ಮನೆ ನೋಡಿದ್ದಾರೆ, ಪ್ರಥಮರವರು ಎಲಿಮಿನೇಟ್ ಆಗುವ ಮೂಲಕ ಬಿಗ್‌ಬಾಸ್‌ನ ನಿಜವಾದ ಜರ್ನಿ ಶುರುವಾಗುವ ಮೊದಲೇ ಹೊರಬಂದಿದ್ದಾರೆ.

ಈ ಬಾರಿ ಬಿಗ್‌ಬಾಸ್‌ ಮನೆ ವಿನ್ಯಾಸದಿಂದಲೂ ಗಮನ ಸೆಳೆದಿದೆ. ಪ್ರಪಂಚದ ಹಲವು ವಿಸ್ಮಯಗಳು, ಕಲಾಕೃತಿಗಳನ್ನು ಆ ಮನೆಯೊಳಗೆ ನೋಡಬಹುದು. ಮೊದಲ ವಾರದಲ್ಲಿ ಎಲಿಮೇಟ್ ಆದ ಪ್ರಥಮರವರು ಬಿಗ್‌ಬಾಸ್‌ ಮನೆಯ ಜರ್ನಿ ಶುರು ಮಾಡುವ ಮುನ್ನವೇ ಹೊರ ಬರುವಂತಾಗಿದೆ.

ಮೊದಲ ದಿನವೇ ಕೃಷ್ಣ ಶಾಸ್ತ್ರಿರವರ ಜೊತೆಗೆ ಕಿರಿಕ್‌

ಸ್ಪರ್ಧಿ ಕೃಷ್ಣ ಶಾಸ್ತ್ರಿ ಹಾಗೂ ಪ್ರಥಮಾ ಪ್ರಸಾದ್ ಜೊತೆ ಆರಂಭದಲ್ಲೇ ಕಿರಿಕ್ ನಡೆದಿತ್ತು. ಬಿಗ್ ಬಾಸ್ ಆರಂಭಗೊಂಡ ದಿನವೇ ಪ್ರಥಮಾ ಪ್ರಸಾದ್‌ಗೆ ಆಂಟಿ ಎಂದು ಕರೆದಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು. ತನ್ನನ್ನು ಆಂಟಿ ಎಂದು ಕರೆದ ಕೃಷ್ಣ ಶಾಸ್ತ್ರಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ಕೃಷ್ಣ ಶಾಸ್ತ್ರಿ ಜೊತೆ ಮುನಿಸು ಹಾಗೇ ಮುಂದುವರಿದಿತ್ತು. ಕೃಷ್ಣ ಶಾಸ್ತ್ರಿಗೆ ಹಿರಿಯ ನಟ ಸ್ಪರ್ಧಿ ಓಂ ಪ್ರಕಾಶ್‌ ರಾವ್ ಬುದ್ದಿ ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸ್ಪರ್ಧಿಗಳು ತಮ್ಮ ಸ್ಥಾನ ಭದ್ರಪಡಿಸಲು ಕಸರತ್ತು ಆರಂಭಿಸಿದ್ದರೆ, ಪ್ರಥಮಾ ಪ್ರಸಾದ್ ಕಿರಿಕ್‌ಗಳಿಂದ ಮಾತ್ರ ಸುದ್ದಿಯಲ್ಲಿದ್ದರು. ಹೀಗಾಗಿ ಇತರ ಸ್ಪರ್ಧಿಗಳ ಜೊತೆಗಿನ ಪೈಪೋಟಿಯಲ್ಲಿ ಮರೆಯಾದರು. ಇದು ಪ್ರಥಮಾ ಪ್ರಸಾದ್‌ಗೆ ಮುಳುವಾಯಿತು ಎಂದು ಬಿಗ್ ಬಾಸ್ ವೀಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಬಂದ ಚೈತ್ರಾ ರೈ 5 ದಿನಕ್ಕೇ ಎಲಿಮಿನೇಷನ್: ಸಿಗುವ ಹಣವೆಷ್ಟು?
‘ಆಸೆ’ ಧಾರಾವಾಹಿಯಲ್ಲಿ ನಟಿ ಚೈತನ್ಯಾಗೆ ಹೊಸ ಶೇಡ್: ‘ತಾರಾ’ ಪಾತ್ರಕ್ಕೆ ಸಿಕ್ತು ಹೊಸ ತಿರುವು