'ಖಂಡಿತ, ಇನ್ಮೇಲೆ ಬಿಗ್ ಬಾಸ್ ನೋಡಲ್ಲ' ಮನೆಯಿಂದ ಹೊರ ಬರ್ತಿದ್ದಂತೆ ಅವಿನಾಶ್ ಅಚ್ಚರಿಯ ಹೇಳಿಕೆ

Published : Sep 28, 2026, 05:34 PM IST
kiccha sudeep

ಸಾರಾಂಶ

ಬಿಗ್‌ ಬಾಸ್ ಜರ್ನಿ ಮುಗಿಸಿ ಆಚೆ ಬಂದಿರುವ ರಂಗಭೂಮಿ ಕಲಾವಿದ ಅವಿನಾಶ್ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ತಾವು ಇನ್ಮುಂದೆ ಬಿಗ್ ಬಾಸ್ ಶೋ ನೋಡೋದೇ ಇಲ್ಲ ಎಂದಿದ್ದಾರೆ. ಯಾಕೆ ಅನ್ನೋದಕ್ಕೆ ಕಾರಣವನ್ನೂ ನೀಡಿದ್ದಾರೆ.

ಬಿಗ್‌ ಬಾಸ್ ಮನೆಯಿಂದ ಆಚೆ ಬಂದಿರುವ ರಂಗಭೂಮಿ ಕಲಾವಿದ ಅವಿನಾಶ್ ಶಟಮರ್ಷಣ ಭಾರೀ ಸುದ್ದಿಯಲ್ಲಿದ್ದಾರೆ.

ತಮ್ಮ ನೇರ-ನಿಷ್ಠುರ ಮಾತುಗಳು ಸೇರಿದಂತೆ ತಮ್ಮದೇ ಆದ ಸೈದ್ಧಾಂತಿಕ ನಿಲುವುಗಳಿಂದ ಪ್ರೇಕ್ಷಕರ ಗಮನ ಸೆಳೆದವರು. ಇದೀಗ ಬಿಗ್‌ ಬಾಸ್‌ನಿಂದ ಹೊರ ಬೀಳ್ತಿದ್ದಂತೆಯೇ ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದಾರೆ. ಬಿಗ್‌ ಬಾಸ್ ವೀಕ್ಷಕರ ಕಣ್ಣು ಕೆಂಪಾಗುವಂತಹ ಹೇಳಿಕೆ ನೀಡಿದ್ದಾರೆ.

ಏನಂದ್ರು ಅವಿನಾಶ್?

ಸಂದರ್ಶನ ಒಂದರಲ್ಲಿ ಮಾತನ್ನಾಡಿರುವ ಅವಿನಾಶ್.. ನಾನು ಇನ್ಮೇಲೆ ಖಂಡಿತ ಬಿಗ್‌ ಬಾಸ್ ಶೋ ನೋಡಲ್ಲ ಎಂದು ಎಲ್ಲರ ಹುಬ್ಬೇರಿಸಿದ್ದಾರೆ. ನಾನು ಆಡಿಯನ್ಸ್ ಆಗಿ ಇವತ್ತಿನ ತನಕ ಟಿವಿ ಆನ್ ಮಾಡಿಲ್ಲ. ನನಗೆ ಟಿವಿ ನೋಡುವ ಅಭ್ಯಾಸವೇ ಇಲ್ಲ. ಈ ಶೋ ಅಂತ ಮಾತ್ರವಲ್ಲ, ನಾನು ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸುವಾಗಲೂ ಸೀರಿಯಲ್ ನೋಡುತ್ತಿರಲಿಲ್ಲ. ನಾನೇ ನಟಿಸಿರುವ ಸಿನಿಮಾಗಳನ್ನು ಒಂದೆರಡು ಸಲ ನೋಡಿದರೆ ಹೆಚ್ಚು ಎಂದರು.

ಹಾಗಂತ ಒಳ್ಳೆಯ ಕೆಲಸಗಳನ್ನು ನಾನು ಖಂಡಿತ ಪ್ರಶಂಸಿಸುತ್ತೇನೆ ಮತ್ತು ಗೌರವಿಸುತ್ತೇನೆ. ಆದರೆ ಅಲ್ಲಿರುವ ವ್ಯಕ್ತಿತ್ವಗಳ ಜೊತೆ ನನಗೆ ಕ್ಯಾರಿ ಮಾಡಲು ಸಾಧ್ಯವಿಲ್ಲ. ನಮಗೆ ಇಷ್ಟವಾಗುವಂತಹ.. ಕನೆಕ್ಟ್ ಆಗುವಂತಹ ಯಾವುದಾದರೂ ಅದ್ಭುತ ವ್ಯಕ್ತಿತ್ವವಿದ್ದರೆ ಮಾತ್ರ ನೋಡುತ್ತೇನೆ. ಇಲ್ಲದಿದ್ದರೆ ಖಂಡಿತ ನೋಡಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಸುದೀಪ್ ಏನು ಹೇಳಿದ್ದರು?

ಅವಿನಾಶ್ ದಿವಂಗತ ನಿರ್ದೇಶಕ ಗುರುಪ್ರಸಾದ್ ಅವರ ಶಿಷ್ಯರಲ್ಲಿ ಒಬ್ಬರು. ಮೊದಲಿನಿಂದಲೂ ಮುಕ್ತ ವಿಚಾರವಾದಿ. ಬಿಗ್‌ ಬಾಸ್ ಮನೆಯಲ್ಲಿ ಅವರಿಗೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರ ಬಿಗ್ ಬಾಸ್ ಮನೆಯ ಜರ್ನಿ ವಿಡಿಯೋ ನೋಡಿದ ಬಳಿಕ ಕಿಚ್ಚ ಸುದೀಪ್ ಅವರೇ ಅವಿನಾಶ್ ಬಗ್ಗೆ ಮಾತನಾಡಿದರು.. ರೀ ಅವಿನಾಶ್, ನೀವು ಬಿಗ್‌ ಬಾಸ್‌ ಶೋಗೆ ಅಲ್ಲಾರ್ರೀ. ನಿಮ್ಮ ವ್ಯಕ್ತಿತ್ವ ಈ ಶೋಗೆ ಫಿಟ್‌ ಆಗಲ್ಲ ಎಂದಿದರು. ಅದಕ್ಕೆ ಅವಿನಾಶ್, ನನಗೆ ನಿಜಕ್ಕೂ ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ, ಒಮ್ಮೆ ಮನೆಯಿಂದ ಹೋಗಿ ಬಿಡೋಣ ಎನಿಸಿತ್ತು. ಬಿಗ್ ಬಾಸ್ ಯಾವ ಫಾರ್ಮೆಟ್‌ ಎಂದು ತಿಳಿಯದೇ ಬಂದೆ. ಜನ ಹೇಳುವಂತೆ ಇದು ಸ್ಕ್ರಿಪ್ಟೆಡ್ ಶೋ ಅಲ್ಲವೇ ಅಲ್ಲ ಎಂದು ಅದೇ ವೇದಿಕೆಯಲ್ಲಿ ಸ್ಪಷ್ಟಪಡಿಸಿದರು.

ಇನ್ನು, ಬಿಗ್ ಬಾಸ್ ಮನೆಯೊಳಗಿನ ವಾತಾವರಣ ಮತ್ತು ಸ್ಪರ್ಧಿಗಳ ಆಯ್ಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಬ್ಬರಿಗೂ ತಮ್ಮದೇ ಆದ ಎಥಿಕ್ಸ್ ಇರುತ್ತದೆ. ಯಾರನ್ನು ಆಯ್ಕೆ ಮಾಡಬೇಕು, ಯಾರನ್ನು ಆಯ್ಕೆ ಮಾಡಬಾರದು ಎನ್ನುವುದು ಆಯೋಜಕರ ಹೊಣೆ ಹಾಗೂ ಜವಾಬ್ದಾರಿ ಆಗಿರುತ್ತದೆ. ಆ ಜವಾಬ್ದಾರಿ ತಪ್ಪಿದರೆ ಅದನ್ನು ಅವರೇ ಅನುಭವಿಸಬೇಕಾಗುತ್ತದೆ. ನಾವೇನೋ ಕಲಾವಿದರು, ದಿನಕ್ಕೊಂದು ವೇಷ ಹಾಕುತ್ತೇವೆ. ನಮಗೆ ನಮ್ಮನ್ನು ಉಳಿಸಿಕೊಳ್ಳುವುದು ಹೇಗೆಂದು ಗೊತ್ತು ಎಂದರು. ಸದ್ಯ ಅವಿನಾಶ್ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

1.6 ಮಿಲಿಯನ್ ಫಾಲೋವರ್ಸ್, Miss Pretty India ಕಿರೀಟ… 30ನೇ ವಯಸ್ಸಲ್ಲಿ ಬದುಕಿಗೆ ಅಂತ್ಯ ಹೇಳಿದ ಜನಪ್ರಿಯ ಇನ್‌ಫ್ಲುಯೆನ್ಸರ್
'ಅವರೊಂದಿಗೆ ಹೋಲಿಸಿದರೆ ನನ್ನ ನಟನೆ ಏನೂ ಅಲ್ಲ': ತಂದೆಯ ಬಗ್ಗೆ ಕಿಚ್ಚನ ಮನದಾಳದ ಮಾತು