ಬಿಗ್ ಬಾಸ್‌ನಲ್ಲಿ ಮ್ಯಾಜಿಕ್ ಮಾಡಿ ವಿನ್ನರ್ ಆಗಿ 50 ಲಕ್ಷ ಹಣವನ್ನು ಪಡೆದಿರುವ ನಟ ಪ್ರಥಮ್, ನಟ ಸುದೀಪ್ ಬಿಗ್ ಬಾಸ್‌ನಿಂದ ಹೊರಬರೋ ಬಗ್ಗೆ ಹೇಳಿದ್ದೇನು, ನೋಡಿ.. 'ಸುದೀಪ್ ಸರ್ ಗುರುವಾರ ನೈಟ್ ಅಥವಾ ಶುಕ್ರವಾರ ಬೆಳಿಗ್ಗೆ ಬಿಗ್ ಬಾಸ್ ಮನೆಗೆ ಬಂದ್ಬಿಡ್ತಾರೆ. ಒಂದ್ ಡೇ ಕ್ರಿಕೆಟ್ ಆಡ್ತಾರೆ..
2016-17ರಲ್ಲಿ ಬಿಗ್ ಬಾಸ್ ಟ್ರೋಫಿ ಗೆದ್ದಿರುವ ನಟ, ಒಳ್ಳೇ ಹುಡುಗ ಖ್ಯಾತಿಯ ಪ್ರಥಮ್ (Pratham), ನಟ ಸುದೀಪ್ ಬಗ್ಗೆ ಮಾತನಾಡಿದ್ದಾರೆ. ಅಂದರೆ, ಬಿಗ್ ಬಾಸ್ ಶೋವನ್ನು ಮುಂದೆ ಸುದೀಪ್ (Kichcha Sudeep) ಬಿಡಲಿರುವ ಬಗ್ಗೆ ಮಾತನಾಡಿ, ಆ ಬಗ್ಗೆ ಅವರದೇ ಆದ ಲಾಜಿಕ್ಕು ಹಾಗೂ ಅನಿಸಕೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್‌ನಲ್ಲಿ ಮ್ಯಾಜಿಕ್ ಮಾಡಿ ವಿನ್ನರ್ ಆಗಿ 50 ಲಕ್ಷ ಹಣವನ್ನು ಪಡೆದಿರುವ ನಟ ಪ್ರಥಮ್, ಬಳಿಕ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಹಾಗಿದ್ರೆ, ಅವರು ನಟ ಸುದೀಪ್ ಬಿಗ್ ಬಾಸ್‌ನಿಂದ ಹೊರಬರೋ ಬಗ್ಗೆ ಹೇಳಿದ್ದೇನು, ನೋಡಿ..
ಸುದೀಪ್ ಸರ್ ಗುರುವಾರ ನೈಟ್ ಅಥವಾ ಶುಕ್ರವಾರ ಬೆಳಿಗ್ಗೆ ಬಿಗ್ ಬಾಸ್ ಮನೆಗೆ ಬಂದ್ಬಿಡ್ತಾರೆ. ಒಂದ್ ಡೇ ಕ್ರಿಕೆಟ್ ಆಡ್ತಾರೆ ಅವ್ರ ಜೊತೆನಲ್ಲೆಲ್ಲಾ, ಅಂದ್ರೆ ಅಲ್ಲಿರೋ ಟೆಕ್ನಿಶಿಯನ್ಸ್ ಜೊತೆನಲ್ಲಿ. ಅದ್ಯಾಕೆ ಹೊರಗಡೆ ಬರಲ್ಲ ಅಂದ್ರೆ, ಅದು ಪ್ರಚಾರಕ್ಕೆ ಆಡೋ ಕ್ರಿಕೆಟ್ ಅಲ್ಲ, ತಂತ್ರಜ್ಞರ ಜೊತೆ ನಾನೂ ಇರ್ತಿನಿ ಅಂತ ಹೇಳೋಕೆ ಆಡೋ ಕ್ರಿಕೆಟ್ ಅದು. ಅದಾದ್ಮೇಲೆ ಒಂದು ಮೂರು ತಾಸು ರೆಸ್ಟ್ ಮಾಡ್ತಾರೆ. ಸಂಜೆ ಬ್ರೀಫಿಂಗ್ ತಗೋತಾರೆ ಆರು ತಾಸು, ಬಿಗ್ ಬಾಸ್ ಮನೆಲ್ಲಿ ಒಂದು ವಾರ ಏನೇನಾಯ್ತು ಅಂತ!
ಜಯಲಲಿತಾ ಬಳಿಕ 'ವಿಜಯ' ಪರ್ವ'ನಾ; ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ನಡುಕ..!
ಆವತ್ತು ಸಾಯಂಕಾಲ ಫುಲ್ ಬ್ರೀಫಿಂಗ್ ತಗೊಂಡು ಆವತ್ತಿನ ಕೆಲಸ ಮುಗಿಸ್ತಾರೆ. ಶನಿವಾರ ಶೂಟಿಂಗ್ ಆಗುತ್ತೆ, ಸಂಡೆ ಅವ್ರಿದ್ದು ನಡೆಸಿಕೊಡ್ತಾರೆ. ಹೀಗೆ ವಾರದಲ್ಲಿ ಮೂರುವರೆ ದಿನ ಇದಕ್ಕೇ ಹೊರಟುಹೋದ್ರೆ, ಅವ್ರು ಫಾರಿನ್‌ನಲ್ಲಿ ಒಂದ್ ಸಾಂಗ್ ಸಹ ಶೂಟಿಂಗ್ ಮಾಡೋಕೆ ಆಗಲ್ಲ. ಯಾಕೆ ಅಂದ್ರೆ, ಇಲ್ಲಿಂದ ಹೋಗೋಕೆ ಅಲ್ಲಿಂದ ಬರೋಕೆ ಎರಡು ದಿನ ಹೋಯ್ತು, ಅಲ್ಲಿ ಐದು ದಿನ ಶೂಟಿಂಗ್ ಇರುತ್ತೆ..! ಹೀಗಾಗಿ ಅವ್ರು ಬಿಗ್ ಬಾಸ್ ನಡೆಸ್ತಾ ಇದ್ರೆ ಸಿನಿಮಾ ಶೂಟ್‌ಗೆ ತೊಂದ್ರೆ ಆಗುತ್ತೆ. ಇದು ವಿಷ್ಯ.
ಆದ್ರೆ, ಸುದೀಪ್ ಸರ್ ಬಿಗ್ ಬಾಸ್‌ನಿಂದ ಹೊರಗೆ ಬರ್ತಾ ಇರೋದು, ಒಂದ್ ಬ್ರೇಕ್ ತಗೊಳ್ಳೋಣ ಅಂತ್ಲೋ, ಅಥವಾ ಹೊಸಬರಿಗೆ ಒಂದ್ ಅವಕಾಶ ಕೊಡೋಣ ಅಂತಾನೋ ಇರಬಹುದು. ಆದ್ರೆ, ಸುದೀಪ್ ಸರ್ ಮುಂದುವರಿಲಿ ಅಂತ ನಾನೂ ಕೇಳ್ಕೊತೀನಿ.. ನಮ್ಮೆಲ್ಲರಿಗೂ ಲೈಫ್ ಕೊಟ್ಟಿದೀರಿ, ನಾವು ನಿಮ್ಮನ್ನ ನೆನಪಿಸಿಕೊಳ್ತೀವಿ ಸರ್. ಆದ್ರೆ, ಇನ್ಯಾವುದೋ ಕಾರಣಕ್ಕೆ ಅವ್ರು ಬಿಗ್ ಬಾಸ್ ಬಿಡ್ತಾರೆ ಅಂದ್ರೆ ನಂಗೆ ನೋವಾಗುತ್ತೆ.. ಸುಳ್ಳು ಆರೋಪಗಳನ್ನು ಮಾಡಬಾರ್ದು, ಯಾಕಂದ್ರೆ ಸುದೀಪ್ ಸರ್ ಅದ್ಭುತ ವ್ಯಕ್ತಿ.
ಕನ್ನಡತಿ 'ಬಘೀರ' ಬ್ಯೂಟಿ ರುಕ್ಮಿಣಿ ವಸಂತ್ಗೆ ಜಾಕ್ಪಾಟ್: ಟಾಲಿವುಡ್ ಸ್ಟಾರ್‌ಗೆ ನಾಯಕಿ?
'ಕಲರ್ಸ್ ಕನ್ನಡ , ಬಿಗ್ ಬಾಸ್ ಶೋ ನಂಗೆ ಲೈಫ್ ಕೊಟ್ಟಿರೋದು. ಹನ್ನೊಂದು ಸೀಸನ್‌ಗಳು ಸುದೀಪ್ ಸರ್ ಇರ್ತಾ ಇದ್ರಾ?' ಎಂದಿದ್ದಾರೆ ಬಿಗ್ ಬಾಸ್ ವಿಜೇತ ನಟ ಪ್ರಥಮ್. 'ಅಲ್ಲಿ ಏನಾದ್ರೂ ಬೇರೆ ರೀತಿ ಸಮಸ್ಯೆ ಇದ್ರೆ ಖಂಡಿತ ಸುದೀಪ್ ಇಷ್ಟು ದಿನ ಇರ್ತಾ ಇರ್ಲಿಲ್ಲ. ಸುದೀಪ್ ಅವರು ಸಿನಿಮಾಗೋಸ್ಕರ ಬಿಗ್ ಬಾಸ್ ಸೀಸನ್ 11ರ ಬಳಿಕ ಹೊರಗಡೆ ಬರಲಿದ್ದಾರೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ನಟ ಪ್ರಥಮ್.