Bigg Boss 13 ಅಗ್ನಿಪರೀಕ್ಷೆ: ಕೇವಲ 3 ತಿಂಗಳ ಸ್ಪರ್ಧೆಗೆ, 30 ವರ್ಷದ ಕೆಲಸಕ್ಕೆ ಗುಡ್‌ಬೈ ಹೇಳಿದ ಹುಡುಗಿ!

Published : Aug 15, 2026, 05:14 PM IST
Bigg Boss Agni Pareekshe

ಸಾರಾಂಶ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ 'ಅಗ್ನಿ ಪರೀಕ್ಷೆ' ಪ್ರೋಮೊದಲ್ಲಿ, ಸ್ಪರ್ಧಿಯೊಬ್ಬರು ವೇದಿಕೆಯಲ್ಲೇ ತಮ್ಮ ಬಾಸ್‌ಗೆ ಕರೆ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಶೋಗೆ ಪ್ರವೇಶಿಸುವ ಸಲುವಾಗಿ ನೀಡಿದ ಈ ಸವಾಲನ್ನು ಸ್ವೀಕರಿಸಿ, ಲೈವ್‌ನಲ್ಲೇ ತಮ್ಮ ಉದ್ಯೋಗವನ್ನು ತ್ಯಾಗ ಮಾಡಿದ ಈ ಘಟನೆ ನೆಟ್ಟಿಗರು ಮತ್ತು ವೀಕ್ಷಕರಲ್ಲಿ ತೀವ್ರ ಚರ್ಚೆ ಹಾಗೂ ಅಚ್ಚರಿ ಮೂಡಿಸಿದೆ.

ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್' (Bigg Boss Kannada) ಅಂಗಳದಲ್ಲಿ ದಿನಕ್ಕೊಂದು ಹೈವೋಲ್ಟೇಜ್ ಡ್ರಾಮಾಗಳು ನಡೆಯುತ್ತಿರುತ್ತವೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಸ್ಪರ್ಧಿಗಳಿಗೆ ನೀಡುವ ‘ಅಗ್ನಿ ಪರೀಕ್ಷೆ’ಯ ಪ್ರೋಮೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

ಬಿಗ್ ಬಾಸ್ ಮನೆಗೆ ಹೋಗುವ ಕ್ರೇಜ್‌ನಲ್ಲಿ ಸ್ಪರ್ಧಿಯೊಬ್ಬರು ವೇದಿಕೆಯಲ್ಲೇ ನಿಂತು ತನ್ನ ಕಂಪನಿಯ ಬಾಸ್‌ಗೆ ಕಾಲ್ ಮಾಡಿ, ಲೈವ್‌ನಲ್ಲೇ ಕೆಲಸಕ್ಕೆ ರಾಜೀನಾಮೆ (Resignation) ನೀಡಿರುವ ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದೆ!

ವೇದಿಕೆಯಲ್ಲಿ ನಡೆದಿದ್ದೇನು? ‘ಡೇರ್’ ಅಕ್ಸೆಪ್ಟ್ ಮಾಡಿದ ಸ್ಪರ್ಧಿ!

ಪ್ರೋಮೊದಲ್ಲಿ ಆರಂಭವಾಗುವುದೇ ಒಂದು ರೋಚಕ ಪ್ರಶ್ನೆಯೊಂದಿಗೆ:

ಪ್ರಶ್ನೆ: "ನೀವು ಏನು ಬೇಕಾದರೂ ಮಾಡ್ತೀರಾ? ಯಾವುದೇ ಡೇರ್ (Dare) ಅಥವಾ ಚಾಲೆಂಜ್ ತಗೋಳೋಕೆ ರೆಡಿ ಇದ್ದೀರಾ?"

ಸ್ಪರ್ಧಿ: "ಎಸ್, ನಾನು ರೆಡಿ!"

ಚಾಲೆಂಜ್: "ಈಗ ನೀವು ಕೆಲಸ ಮಾಡ್ತಾ ಇರೋ ಜಾಗದಲ್ಲಿ ಅಷ್ಟಾಗಿ ಇಂಟರೆಸ್ಟ್ ಇಲ್ಲ ಅಲ್ವಾ? ಹಾಗಾದ್ರೆ ಈಗಲೇ ಇಮ್ಮಿಡಿಯೇಟ್ ಆಗಿ ನಿಮ್ಮ ಬಾಸ್‌ಗೆ ಫೋನ್ ಮಾಡಿ, 'ನಾಳೆಯಿಂದ ಕೆಲಸಕ್ಕೆ ಬರಲ್ಲ, ರಿಸೈನ್ ಮಾಡ್ತೀನಿ' ಅಂತ ಹೇಳೋ ಧೈರ್ಯ ಇದೆಯಾ?"

ಇದಕ್ಕೆ ಯಾವುದೇ ಹಿಂಜರಿಕೆಯಿಲ್ಲದೆ ಮುನ್ನುಗ್ಗಿದ ಸ್ಪರ್ಧಿ, "ಫೋನ್ ಕೊಡಿ, ನಾನು ಜೋಕ್ ಮಾಡ್ತಾ ಇಲ್ಲ... ಡೆಫಿನೇಟ್ ಆಗಿ ಮಾಡ್ತೀನಿ" ಎಂದು ಧೈರ್ಯವಾಗಿ ಫೋನ್ ಕೈಗೆತ್ತಿಕೊಂಡಿದ್ದಾರೆ.

ಲೌಡ್‌ಸ್ಪೀಕರ್‌ನಲ್ಲಿ ಬಾಸ್‌ಗೆ ಕಾಲ್: "ಸರ್ ನಾಳೆಯಿಂದ ಆಫೀಸ್‌ಗೆ ಬರಲ್ಲ!"

ಎಲ್ಲರ ಸಮ್ಮುಖದಲ್ಲಿ ಫೋನ್ ಅನ್ನು ಲೌಡ್‌ಸ್ಪೀಕರ್‌ನಲ್ಲಿ ಹಾಕಿದ ಸ್ಪರ್ಧಿ, ತನ್ನ ಬಾಸ್‌ಗೆ ಕರೆ ಮಾಡಿ:

"ಹಲೋ ಸರ್, ಬ್ಯುಸಿ ಇದ್ರಾ? ನಾನು ನಾಳೆಯಿಂದ ಆಫೀಸ್‌ಗೆ ಬರ್ತಾ ಇಲ್ಲ ಸರ್... ನಾನು ಕೆಲಸಕ್ಕೆ ರಿಸೈನ್ ಮಾಡ್ಬೇಕು ಅಂತಿದ್ದೀನಿ!" ಎಂದು ಬಾಂಬ್ ಸಿಡಿಸಿದ್ದಾರೆ!

ಈ ಮಾತನ್ನು ಕೇಳಿ ಅತ್ತ ಕಡೆಯಿಂದ ಬಾಸ್ ಶಾಕ್ ಆಗಿದ್ದರೆ, ಇತ್ತ ವೇದಿಕೆಯಲ್ಲಿದ್ದವರು ಹಾಗೂ ವೀಕ್ಷಕರು ದಂಗಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ಇಷ್ಟೊಂದು ರಿಸ್ಕ್ ತೆಗೆದುಕೊಂಡು ತನ್ನ ಕೆಲಸವನ್ನೇ ತ್ಯಾಗ ಮಾಡಿದ ಸ್ಪರ್ಧಿಯ ಹುಚ್ಚಾಟ ಮತ್ತು ಧೈರ್ಯಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡ ಕಿರುತೆರೆಯಲ್ಲಿ ಮನೆ ಮಂದಿ ಎಲ್ಲಾ ನೋಡಬಹುದಾದ ಬೆಸ್ಟ್ ಧಾರಾವಾಹಿ ಇದೊಂದೇ ಅಂತೆ?
Yash: ಆಪ್‌ ಕೀ ಅದಾಲತ್‌ನಲ್ಲಿ ಟಾಕ್ಸಿಕ್‌ ಕುರಿತು ಬಿಗ್‌ ಹಿಂಟ್ ಕೊಟ್ಟ ಯಶ್‌; ಜೆನ್‌-ಜಿ ಪ್ರಶ್ನೆಗೆ ಕ್ಲಾರಿಟಿ ಕೊಟ್ಟ ರಾಕಿಂಗ್‌ ಸ್ಟಾರ್!