BBK9 ಕನ್ನಡ ವಿಷಯ ಬಂದ್ರೆ ಪ್ರಶಾಂತ್‌ ಸಂಬರಗಿಗೆ ** ಉರಿ; ಬಣ್ಣ ಬಯಲು ಮಾಡಿದ ರೂಪೇಶ್ ರಾಜಣ್ಣ

By Vaishnavi ChandrashekarFirst Published Sep 27, 2022, 3:27 PM IST
Highlights

ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಕನ್ನಡ ಭಾಷೆಗೆ ಜಗಳ. ಪ್ರಶಾಂತ್ - ರೂಪೇಶ್ ರಾಜಣ್ಣ ಚರ್ಚೆ ಮಾಡ್ಬಾರ್ದಾ?

ಬಿಗ್ ಬಾಸ್‌ ಸೀಸನ್ 9ರಲ್ಲಿ ಕನ್ನಡ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಕನ್ನಡ ಹಾಡುಗಳು ಹಾಡಬೇಕು ಕನ್ನಡ ಭಾಷೆಯಲ್ಲಿ ಚರ್ಚೆ ಮಾಡಬೇಕು ಅನ್ನೋದು ಈ ಸೀಸನ್‌ನ ರೂಲ್ಸ್‌. ಅಪ್ಪಟ್ಟ ಕನ್ನಡ ಅಭಿಮಾನಿ ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ಚರ್ಚೆ, ರೂಪೇಶ್ ಮತ್ತು ಪ್ರಶಾಂತ್ ನಡುವೆ ಚರ್ಚೆ ಬಗ್ಗೆ ಹೀಗಿತ್ತು....

ರೂಪೇಶ್ ರಾಜಣ್ಣ: 'ಪ್ರಶಾಂತ್‌ ಒಂದು ವಿಚಾರ ಹೇಳುವೆ ಸೊಸೈಟಿಗೆ ಡಿಸ್ಟರ್ಬ್‌ ಮಾಡ್ತಿದ್ದೀನಿ ಅನಿಸುತ್ತಿಲ್ವಾ ನಿಮಗೆ?
ಗೊಬ್ರಾ: ಸೊಸೈಟಿನೇ ಇವರಿಂದ ಡಿಸ್ಟರ್ಬ್ ಆಗಿದೆ.
ಪ್ರಶಾಂತ್: ಸೊಸೈಟಿನ ನಾನು ಡಿಸ್ಟರ್ಬ್‌ ಮಾಡಿದ್ದರೆ ಸರಿ ಮಾಡುವುದಕ್ಕೆ ಪೊಲೀಸರಿದ್ದಾರೆ
ರೂಪೇಶ್: ಡಿಸ್ಟರ್ಬ್‌ನಲ್ಲಿ ಎರಡು ರೀತಿ ಇದೆ. ಕಾನೂನಾತ್ಮಕವಾಗಿ ಮತ್ತು ಭಾವನಾತ್ಮಕವಾಗಿದೆ. ನೀವು ಕಾನೂನಾತ್ಮಕವಾಗಿ ಏನೂ ಮಾಡುತ್ತಿಲ್ಲ ಭಾವನಾತ್ಮಕವಾಗಿ ಮಾಡುತ್ತಿದ್ದೀರಿ. 
ಪ್ರಶಾಂತ್: ಜನರು ನಮಗಿಂತ ಬುದ್ಧಿವಂತರಿದ್ದಾರೆ. ನನಗಿಂತ ಜನರಿಗೆ ಹೆಚ್ಚಿಗೆ ತಲೆಯಲ್ಲಿ ಬಿಳಿ ಕೂದಲು ಇದೆ.
ರೂಪೇಶ್: ನಿಮ್ಮ ಮನೋಭಾವ ಹೊಂದಿರುವವರು ಮಾತ್ರ ನಿಮ್ಮನ್ನು ಒಪ್ಪಿಕೊಳ್ಳುತ್ತಿರುವುದು ಸೊಸೈಟಿ ಒಪ್ಪಿಕೊಳ್ಳುತ್ತಿಲ್ಲ
ಪ್ರಶಾಂತ್: ನನ್ನನ್ನು ಒಪ್ಪಿಕೊಂಡಿರುವ ಜನ ಸೊಸೈಟಿಯಿಂದ ಹೊರ ಇದ್ದಾರಾ?
ರೂಪೇಶ್: ಸೊಸೈಟಿಯಲ್ಲಿ ಇದ್ದಾರೆ ಆದರೆ ಒಂದು ಗುಂಪು ಅಷ್ಟೆ.ನಾವಿಬ್ಬರೂ ಒಂಡು ಕಡೆ ಮಾತುಕತೆ ಮಾಡೋಣ ನೂರಾರು ಜನರನ್ನು ಕರೆಸೋಣ ಅವರಿಗೆ ಬಿಡೋಣ

ಎಂದು ಮೂರನೇ ದಿನಕ್ಕೆ ಪ್ರಶಾಂತ್ ಮತ್ತು ರೂಪೇಶ್ ರಾಜಣ್ಣ ನಡುವೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಟಾಸ್ಕ್‌ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅರುಣ್ ಸಾಗರ್ ಕನ್ನಡ ಸಂಘಗಳು ಮಾಡುವ ಹೋರಾಟದ ಬಗ್ಗೆ ಮಾತು ಶುರು ಮಾಡಿದ್ದಾರೆ. 

ಅರುಣ್ ಸಾಗರ್: 'ಹೇಳಿ ಸಮಾಜಕ್ಕೆ ಕನ್ನಡ ಭಾಷೆ ಬಗ್ಗೆ ಸಂದೇಶ ಕೊಡಬೇಡಿ ಬದುಕಿ ಸಂದೇಶ ಕೊಡಿ. ನೀವು ನನಗೆ ಕನ್ನಡ ಹೇಳಿಕೊಡಿ ಒಂದು ಪ್ರಥಮವಿಭಕ್ತಿ ಮತ್ತೊಬ್ಬರಿಗೆ ಹೊಸ ವಿಚಾರ ಹೇಳಿಕೊಡಿ. ನನ್ನ ನೋಡಿ ನಾಲ್ಕು ಜನ ಕಲಿಯುತ್ತಾರೆ. ಜೈ ಹೋ ಅಂದ್ರೆ ಹೋರಾಟ ಅಲ್ಲ ನಿಮ್ಮ ಜೊತೆ ನಾನು ಬದುಕುತ್ತೀನಾ ನೀವು ನನಗೆ ಕಲಿಸುತ್ತೀರಾ. ಕನ್ನಡ ಕಲಿತರೆ ಮಾತ್ರ ಕನ್ನಡ ಉಳಿಯುವುದು. ನಾವು ಕನ್ನಡ ಕಲಿಯುವುದಕ್ಕೆ ಶುರು ಮಾಡೋಣ ಆಗ ಮಾತ್ರ ಕನ್ನಡಕ್ಕೆ ಬೆಲೆ ಬರುತ್ತೆ. ನನ್ನ ಪ್ರಕಾರ ಕನ್ನಡ ಅಂದ್ರೆ ಏನು ಗೊತ್ತಾ ಕನ್ನಡ ಮರೆತಿರುವ ಜನರಿದ್ದಾರೆ ಅವರಿಗೆ ಕನ್ನಡ ಕಲಿತಿಸಿದ್ದರೆ ಕನ್ನಡ ಹೋರಾಟ ಅದಾಗದೆ ಶುರುವಾಗುತ್ತದೆ. ಹೊರಗಡೆಯಿಂದ ಜನರು ಬರುತ್ತಿದ್ದಾರೆ ಅವರಿಗೆ ಕನ್ನಡ ಕಲಿರಿ ಕಲಿರಿ ಅಂತ ಹೇಳಬಾರದು..ಕಲಿಸಬೇಕು.

BBK9 ಎರಡೇ ದಿನಕ್ಕೆ 12 ಮಂದಿ ನಾಮಿನೇಟ್; ಕಾರಣ ಕೇಳಿ ಹಾಸ್ಯ ಮಾಡಿದ ನೆಟ್ಟಿಗರು!

ರೂಪೇಶ್: ಎಲ್ಲರೂ ಸೇರಿದರೆ ಮಾತ್ರ ಹೋರಾಟ. ಯಾವುದೇ ಹೊರಾಟ ಆಗಲಿ ಕೇವಲ ಕಲಿಸುವುದರಲ್ಲಿ ಕನ್ನಡ ಉಳಿಯುವುದಿಲ್ಲ ಹೋರಾಟಗಳು ಬೇಕಿರುತ್ತದೆ. ಸರ್ಕಾರವೂ ಕಾನೂನು ಪ್ರಕಾರ ಕೆಲವೊಂದು ಹೊಸ ನಿಮಯಗಳು ಇರಬೇಕಿರುತ್ತದೆ. ಅಂದ್ರೆ ಎಲ್ಲವೂ ಸೇರಿ ಹೊರಾಟ ಅಲ್ಲ. ಒಂದು ಸತ್ಯ ತಿಳಿದುಕೊಳ್ಳಿ ಜೀವನವೇ ಹೋರಾಟ. ಇವತ್ತಿನ ವ್ಯವಸ್ತೆ ನೋಡಿದ್ದರೆ ಏನೇ ಬೇಕಿದ್ದರೂ ಪ್ರತಿಭಟನೆ ಮಾಡಬೇಕು. ಏರಿಯಾಗೆ ನೀರು ಬೇಕು ರಸ್ತೆ ಬೇಕು ಹೀಗೆ ಏನೇ ಬೇಕಿದ್ದರೂ ಹೋರಾಟ ಮಾಡಬೇಕು. ಅದೆಲ್ಲ ಬಿಡಿ ಕನ್ನಡವನ್ನು ಶಾಲೆಗಳಲ್ಲಿ ಕಡ್ಡಾಯ ಮಾಡಬೇಕು ಎಂದು ಹೋರಾಟ ಮಾಡಬೇಕು 

ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ಚರ್ಚೆ ಮಾಡುವಾಗ ಪ್ರಶಾಂತ್ ಮತ್ತೆ ಎಂಟರ್ ಆಗುತ್ತಾರೆ. 'ಚರ್ಚೆ ಮಾಡಬಾರದು ಎಂದು ಮಾತು ತೆಗೆದುಕೊಂಡು ಅರುಣ್ ಸಾಗರ್ ಮಾತನಾಡುತ್ತಿರುವುದು ಸರಿ ಅಲ್ಲ' ಎಂದು ಪ್ರಶಾಂತ್ ಹೇಳುತ್ತಾರೆ. 'ರೂಪೇಶ್ ಮತ್ತು ನಾನು ಜಗಳ ಆಡುತ್ತಿಲ್ಲ' ಎಂದು ಅರುಣ್ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ಸುಮ್ಮನಿರದ ರೂಪೇಶ್ 'ನನಗೆ ಒಂದು ವಿಚಾರ ಅರ್ಥ ಆಗುತ್ತಿಲ್ಲ ಕನ್ನಡ ವಿಚಾರ ಬಂದಾಗ ಪ್ರಶಾಂತ್ ಸಂಬರಗಿ ಅವರಿಗೆ ಯಾಕೆ ಶುರುವಾಗುತ್ತೆ ಉರಿ? ಕನ್ನಡ ನಿಮಗೂ ಬೇಕು ನನಗೂ ಬೇಕು. ಇದೊಂದು ಚರ್ಚೆ ಇದರಿಂದ ನಾನು ಹೊಸ ವಿಚಾರ ಕಲಿಯಬಹುದು ಇಲ್ಲ ಬೇರೆಯವರು ಕಲಿಯಬಹುದು' ಎನ್ನುತ್ತಾರೆ ರೂಪೇಶ್.

ಪ್ರಶಾಂತ್: ರೂಪೇಶ್ ರಾಜಣ್ಣ ಅವರೇ ನಿಮ್ಮ ಕನ್ನಡ ಪ್ರೀತಿ ಹೆಚ್ಚಿಗೆ ಇದೆ ಎಂದು ಹೇಳಬೇಡಿ ನಮಗೂ ಕನ್ನಡ ಪ್ರೀತಿ ಹೆಚ್ಚಿದೆ..
ರೂಪೇಶ್: ನಿಮ್ಮ ಕನ್ನಡ ಪ್ರೀತಿ ಎಷ್ಟಿದೆ ಎಂದು ನಮಗೆ ಗೊತ್ತಿದೆ.
ಪ್ರಶಾಂತ್: ಯಾವ ಪ್ರೀತಿ ನೋಡಿದ್ದೀರಿ? ನಾನು ಪ್ರೀತಿ ನೋಡಿದ್ದೀನಿ...ನಿಮ್ಮ ಪ್ರೀತಿ ಜಾಸ್ತಿ ನಮ್ಮ ಪ್ರೀತಿ ಕಡಿಮ ಅಲ್ಲ 
ರೂಪೇಶ್: ಸುಮ್ಮನೆ ಇರಿ ಪ್ರಶಾಂತ್ ಕನ್ನಡ ಬಗ್ಗೆ ಮಾತನಾಡಿರೆ ನಿಮಗೆ ಯಾಕೆ ** ಉರಿಯಾಗುತ್ತಿದೆ. ನೀವು ಕನ್ನಡ ವಿಚಾರ ಮಾತನಾಡಿ ನಾನು ಖುಷಿ ಪಡುತ್ತೀನಿ..

ಹೀಗೆ ಸಣ್ಣ ಪಯಟ್ಟ ವಿಚಾರಕ್ಕೂ ಪ್ರಶಾಂತ್ ಮತ್ತು ರೂಪೇಶ್ ರಾಜಣ್ಣ ನಡುವೆ ಕನ್ನಡ ಭಾಷೆ ವಿವಾರಕ್ಕೆ ಜಗಳ ಶುರುವಾಗುತ್ತಿದೆ.

click me!