
ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ಧನುಶ್ರೀ ( Bigg Boss Kannada Dhanushree ) ಹಾಗೂ ಭರತ್ ಎನ್ನುವವರು ಒಟ್ಟಿಗೆ ವಿಡಿಯೋ ಮಾಡುತ್ತಿದ್ದರು. ಧನುಶ್ರೀ ವಿಡಿಯೋದಲ್ಲಿ ಭರತ್ ಇರುತ್ತಿದ್ದರು. ಇವರಿಬ್ಬರು ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಈಗ ಈ ಜೋಡಿ ಬೇರೆ ಬೇರೆ ಆಗಿದೆ. ಈ ಬಗ್ಗೆ ಭರತ್ ಅವರು ವಿಡಿಯೋ ಮೂಲಕ ಮಾಹಿತಿ ಕೊಟ್ಟಿದ್ದಾರೆ.
“ಧನುಶ್ರೀ ಅವರಿಂದ ನನಗೆ ವ್ಯೂಸ್ ಬಂತು, ಜನಪ್ರಿಯತೆ ಬಂತು ಅಂತ ಕೆಲವರು ಕಾಮೆಂಟ್ ಹಾಕುತ್ತಿದ್ದಾರೆ. ಇದನ್ನು ಬಿಟ್ಟು ಏನಾಗಿದೆ ಎನ್ನೋದು ಯಾರಿಗೂ ಗೊತ್ತಿಲ್ಲ. 2025 ಫೆಬ್ರವರಿಯಲ್ಲಿ ಧನುಶ್ರೀ ಅವರ ಯುಟ್ಯೂಬ್ ವ್ಯೂಸ್ ಕೇವಲ 30, 40000 ಬರುತ್ತಿತ್ತು. ಇದಕ್ಕೆ ಸಹಾಯ ಮಾಡೋದಾಗಿ ನಾನು ಅವರಿಗೆ ಮೇಲ್ ಹಾಕಿದ್ದೆ, ಅದಕ್ಕೆ ಅವರು ಓಕೆ ಹೇಳಿದರು. ನಾನು ಕಂಟೆಂಟ್ ಕ್ರಿಯೇಟರ್, ಹೀಗಾಗಿ ನಿಮಗೆ ಹೇಗೆ ಮಾತನಾಡಬೇಕು? ಯಾವ ವಿಷಯ ಹೇಳಬೇಕು? ಕಾನ್ಸೆಪ್ಟ್ ಏನು ಹೀಗೆ ಎಲ್ಲ ವಿಷಯವನ್ನು ನಾನು ಹೇಳಿಕೊಟ್ಟೆ. ಆಮೇಲೆ ಶೂಟ್, ಎಡಿಟ್ ಕೂಡ ನಾನೇ ಮಾಡಿಕೊಡ್ತೀನಿ ಅಂತ ಹೇಳಿದ್ದೆ. ಇದರ ಪ್ರತಿಫಲವಾಗಿ ನಾನು ಯುಟ್ಯೂಬ್ ಚಾನೆಲ್ ಮಾಡಿದಾಗ ನನಗೆ ಪ್ರಮೋಶನ್ ಮಾಡಿಕೊಡಿ ಅಂತ ಕೇಳಿದ್ದೆ. ಅದಕ್ಕೆ ಅವರು ಓಕೆ ಅಂದ್ರು” ಎಂದಿದ್ದಾರೆ ಭರತ್.
“ಆಮೇಲೆ ನಾನು ಅವರ ಪರಿಚಯ ಆದಾಗಿನಿಂದ ಅವರಿಂದ ದೂರ ಆಗೋವರೆಗೆ ಮಾಡಿರುವ ಎಲ್ಲ ವಿಡಿಯೋ ಕಾನ್ಸೆಪ್ಟ್‌ಗಳು ನಂದೇ. ನಾನು ಯುಟ್ಯೂಬ್ ಮಾಡೋದು ಅವರಿಗೆ ಬೇಕಾಗಿರಲಿಲ್ಲ. ನಾನು ಕೆಲಸ ಕಳೆದುಕೊಂಡೆ, ಆಮೇಲೆ ಅವರು ನನಗೆ ಹಣ ಕೊಟ್ಟರು, ಅದನ್ನು ನಾನು ವಾಪಾಸ್ ಕೊಟ್ಟೆ. ಇದಕ್ಕೆ ಕೃತಜ್ಞನಾಗಿದ್ದೇನೆ. ನನಗೆ ಕಾಮೆಂಟ್ ಮಾಡೋದು, ದ್ವೇಷ ಸಾಧಿಸೋದು ಇಷ್ಟವಿಲ್ಲ. ನಮ್ಮಿಬ್ಬರ ಸಂಬಂಧ ಪ್ರೊಫೆಶನಲ್‌ಗಿಂತ ಜಾಸ್ತಿ ಇತ್ತು” ಎಂದಿದ್ದಾರೆ ಭರತ್.
“ಯುಟ್ಯೂಬ್ ಅಲ್ಲಿ ನೀವು ವಿಡಿಯೋ ಮಾಡ್ತೀರಾ ಅಂದ್ರೆ, ನನ್ನ ಜೊತೆ ಮಾಡೋ ಹಾಗಿಲ್ಲ ಅಂತ ಹೇಳಿದ್ರು. ಬ್ರ್ಯಾಂಡ್ ಜೊತೆ ಶೂಟ್ ಮಾಡಿದ್ರೆ 10% ಹಣ ಕೊಡ್ತಿದ್ದರು. ಇಷ್ಟು ನನ್ನ ಜೀವನಕ್ಕೆ ಸಾಕಾಗುತ್ತಿರಲಿಲ್ಲ. ನನ್ನ ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕು, ಮನೆಯವರಿಗೆ ಏನಾದರೂ ಆದರೆ ಅದಕ್ಕೆ ಯಾರು ಹಣ ಕೊಡ್ತಾರೆ? ಧನುಶ್ರೀ ಅವರ ಯುಟ್ಯೂಬ್ ಚಾನೆಲ್ ಬಿದ್ದಾಗ ನಾನು ಹಗಲು-ರಾತ್ರಿ ಎಡಿಟ್ ಮಾಡಿ ಕಷ್ಟಪಟ್ಟಿದ್ದೆ. ನಾನು ಕರಿಯರ್ ನೋಡಿಕೊಳ್ಳಬೇಕಿತ್ತು, ಇಲ್ಲವೇ ಅವರು ಹೇಳಿದಂತೆ ಕೇಳಬೇಕಿತ್ತು. ಏನೇ ಹೇಳಿ, ದುಡ್ಡು ಮುಖ್ಯ. ನನಗೆ ಜೀವನ ಮಾಡಲು ಹಣ ಬೇಕು, ಹಣ ಇಲ್ಲ ಅಂದ್ರೆ ಯಾರ ಬಳಿ ಹೋಗಿ ಕೇಳಲಿ? ನನಗೆ ಸಾಲ ಆಗಿದೆ, ನನ್ನ ಪರಿಸ್ಥಿತಿ ಹೀಗಿದೆ ಅಂತ ಅವರಿಗೆ ಹೇಳಿದ್ರೂ ಕೂಡ ಬೆಂಬಲ ಕೊಡಲಿಲ್ಲ” ಎಂದಿದ್ದಾರೆ ಭರತ್.
“ಮಿಸ್ಟರ್ ಜೆಂಟಲ್‌ಮ್ಯಾನ್ ಅಲ್ಲ, ಮಿಸ್ಟರ್ ಡುಪ್ಲಿಕೇಟ್ ಅಂತ ಕಾಮೆಂಟ್ ಹಾಕ್ತೀರಾ. ಒಂದು ಸೈಡ್ ಸ್ಟೋರಿ ಕೇಳಿಕೊಂಡು ಸುಮ್ಮನೆ ಇರಬೇಕು. ಪರೋಕ್ಷವಾಗಿ ನನ್ನ ಬಗ್ಗೆ ವಿಡಿಯೋ ಮಾಡಿ ಹಾಕ್ತಾರೆ. ಅದನ್ನು ಪ್ರಶ್ನೆ ಮಾಡಿದಾಗ ಅವರು, “ನಿಮ್ಮ ಬಗ್ಗೆ ಹೇಳಿದ್ದಲ್ಲ, ಮನಸ್ಸಿಗೆ ಅನಿಸಿದ್ದನ್ನು ಹಾಕಿದೆ ಅಷ್ಟೇ” ಎಂದಿದ್ದಾರೆ.
“ನಾನು ಹೇಳುತ್ತ ಹೋದರೆ ಇಡೀ ದಿನ ಮಾತನಾಡಬಹುದು. ಎಲ್ಲವನ್ನು ಆನ್‌ಲೈನ್‌ನಲ್ಲಿ ಹೇಳೋಕೆ ಇಷ್ಟ ಇಲ್ಲ. ನನ್ನ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಕಾಮೆಂಟ್ ಮಾಡಿ, ಸಬ್‌ಸ್ಕ್ರೈಬ್ ಆಗಿ. ಹೀಗೆ ಮುಂದುವರೆದರೆ ನಾನು ಸಾಕ್ಷಿ ಸಮೇತ ಎಲ್ಲವನ್ನು ಬಿಚ್ಚಿಡೋಕೆ ರೆಡಿ ಇದ್ದೀನಿ” ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.