Amruthadhaare Serial: ಯುದ್ಧ ಕಹಳೆ ಊದಿದ ಭೂಮಿಕಾ! ಶಕುಂತಲಾ, ಜಯದೇವ್‌ ಕಥೆ ಗೋವಿಂದ..ಗೋವಿಂದ...!

Published : Aug 14, 2025, 01:10 PM IST
amruthadhaare kannada serial written update

ಸಾರಾಂಶ

Amruthadhaare Serial Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಎದುರು ಜಯದೇವ್‌ ಕುತಂತ್ರವನ್ನು ಭೂಮಿ ಬಯಲು ಮಾಡಿದ್ದಾಳೆ, ಹಾಗಾದರೆ ಮುಂದೆ ಏನಾಗುವುದು? 

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial Episode ) ತನ್ನನ್ನು ಹಾಗೂ ತನ್ನ ಮಗುವನ್ನು ಮುಗಿಸಲು ಶಾಕುಂತಲಾ, ಜಯದೇವ್ ಪ್ಲ್ಯಾನ್‌ ಮಾಡಿದ್ದು‌ ಭೂಮಿಗೆ ಗೊತ್ತಾಗಿದೆ, ಸೃಜನ್‌ ಸಹಾಯದಿಂದ ಫೋನ್‌ ಟ್ರ್ಯಾಪ್‌ ಮಾಡಿರೋ ಅವಳಿಗೆ ಜಯದೇವ್‌ ಪ್ಲ್ಯಾನ್‌ ಮಾಡುವಾಗ ಶಕುಂತಲಾ ಬಳಿ ಆಡಿದ್ದ ಆಡಿಯೋ ಸಿಕ್ಕಿದೆ. ಯಾರು ಏನೇ ಹೇಳಿದರೂ ಗೌತಮ್‌ ಮಾತ್ರ ನನ್ನ ವಿರುದ್ಧ ನಿಲ್ಲಲ್ಲ ಅಂತ ಅವಳು ಭೂಮಿಗೆ ಸವಾಲು ಹಾಕಿದ್ದಾಳೆ. ಅತ್ತ ಭೂಮಿ ಗೌತಮ್‌ಗೆ ಎಲ್ಲ ಸತ್ಯ ಹೇಳೋಕೆ ರೆಡಿ ಆಗಿದ್ದಾಳೆ.

ನನ್ನ ಹಾಗೂ ನನ್ನ ಮಗುವನ್ನು ಕೊಲ್ಲೋಕೆ ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ, ಬೆಳಗ್ಗೆ ನಾನು ಪಾರ್ಥನ ಜೊತೆ ಕಾರ್‌ನಲ್ಲಿ ಹೋಗುವಾಗ ಲಾರಿಯವನು ಬಂದು ನಮ್ಮ ಮೇಲೆ ಗುದ್ದೋಕೆ ಪ್ಲ್ಯಾನ್‌ ಮಾಡಿದ. ಆದರೆ ನಾವು ಬಚಾವ್‌ ಆದೆವು ಅಂತ ಅವಳು ಗೌತಮ್‌ಗೆ ಹೇಳಿದ್ದಾಳೆ. ಆದರೆ ಭೂಮಿ ಮಾತನ್ನು ಗೌತಮ್‌ ನಂಬಲಿಲ್ಲ. ಆಗ ಅವಳು ಆಡಿಯೋವನ್ನು ಗೌತಮ್‌ಗೆ ಕೇಳಿಸಿದ್ದಾಳೆ. ಈಗ ಈ ವಿಚಾರವನ್ನು ಅವನು ಮಲತಾಯಿ ಶಕುಂತಲಾ ಬಳಿ ಕೇಳಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?

ಈ ಎಪಿಸೋಡ್‌ ಏನಾಗುವುದು ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

  • ಇನ್ ಮುಂದೆ ಯುದ್ಧ ನೋಡೋಕ್ಕೆ ಯಾರ್ ಎಲ್ಲಾ ಕಾಯ್ತಾ ಇದ್ದೀರಾ?
  • ಬೋದು ಕಷ್ಟ ಶಕ್ಕು ಪ್ಲೇಟ್ ಚೆಂಜ್ ಮಾಡಿಬಿಟ್ರೆ? ಜೈ ಇದಕ್ಕೆಲ್ಲ ಕಾರಣ ಅಂತ ಅಣ್ಣನ ಜೋತೆ ಮಗನ ಕಳಸ್ತಾಳೆ
  • ಏನೂ ಇನ್ನೂ ಡೌಟ್ ಇದೇನಪ್ಪಾ, ಕನಸು ಇರಬಹುದೇನೂ
  • ಈ ವಾರದ ಕಿಚ್ಚನ ಚಪ್ಪಾಳೆ ನಮ್ ಭೂಮಿ ಅವ್ರಿಗೆ
  • ಈ ಶಕುಂತಲಾ ಆಟ ಇನ್ ಮುಂದೆ ನಡೆಯುದಿಲ್ಲಾ
  • ಇದರಲ್ಲೂ ಏನಾದ್ರೂ ಟ್ವಿಸ್ಟ್ ಇದ್ಯ
  • ನಮ್ಮ ಗುಂಡು ಜೊತೆ ಭೂಮಿ ರಾಕ್ಸ್, ಶಕ್ಕೂ Moyee moyee

 

  • ಶಕುಂತಲಾ ಮುಖವಾಡ ಕಳಚಿ ಬಿಡ್ತು
  • ಜೈಲೂಟ ಪಕ್ಕಾ ನಾ? ಇಲ್ಲ ಮತ್ತೆ ಬೇರೆ ಏನಾದ್ರು ಅಡಚಣೆ ಉಂಟಾ ಎಂತ ಸಾವು ಮರ್ರೆ…
  • ಶಾಕುಂತಲ ಏನೋ ಮ್ಯಾನೇಜ್ ಮಾಡಿ ಗೌತಮ್‌ನ ನಂಬಿಸ್ತಾಳೆ ಅಷ್ಟೆ,ಬೇರೆನೂ ಆಗಲ್ಲ... ಶಾಕುಂತಲ ಸಿಕ್ಕಾಕೊಂಡ್ರೆ ಸೀರಿಯಲ್ ಕಥೆ ಗೋವಿಂದ.
  • ಶಕ್ಕು ಏನಾದ್ರು ಹೊಸ ಪ್ಲ್ಯಾನ್‌ ರೆಡಿ ಮಾಡಿರ್ತಾಳೆ, ಆದರೆ ಅವಳು ಮಾತ್ರ ಸಿಕ್ಕಾಕೋಳಲ್ಲ,, ಇನ್ನ ಈಗ ಆಟ ಶುರು ಆಗಿರೋದು ಅಷ್ಟು ಬೇಗ ಅಂತ್ಯ ಮಾಡಲ್ಲ. ಆದರೆ ಗೌತಮ್‌ಗೆ ಸ್ವಲ್ಪನಾದ್ರೂ ಸಂದೇಹ ಬರೋ ಥರ ಆಗುವುದು.

 

  • ಗೌತಮ್‌ಗೆ ಒಂದ್ ಪಕ್ಷ ಸತ್ಯ ಗೊತ್ತಾಗಿದ್ರು ಕೂಡ, ಶಾಕುಂತಲ ಅದನ್ನ ಜಯದೇವ್ ಮಾಡಿದ್ದು ಅಂತ ಹೇಳುತ್ತಾಳೆ.
  • ಗೌತಮ್‌ಗೆ ಅನುಮಾನ ಬಂದು ಸೀಕ್ರೆಟ್ ಆಗಿ ಸಾಕ್ಷಿ ಕಲೆಕ್ಟ್ ಮಾಡ್ಬೇಕು, ಆಗಲೇ ಶಾಕುಂತಲಾ ಎಮೋಷನಲ್ ಆಟಕ್ಕೆ ಒಂದ್ ಫುಲ್ ಸ್ಟಾಪ್ ಸಿಗೋದು. ಏನಾದ್ರೂ ಒಂದು ಹೇಳಿ ಪಾರಾಗ್ತಾಳೆ ಅಷ್ಟೆ
  • ಅಯ್ಯೋ.. ಇದು ಬೇರೊಂದು ಟ್ವಿಸ್ಟ್ ಆಗಿ ಭೂಮಿಕಾ ಮೇಲೆ ತಿರುಗಿ ಬೀಳುತ್ತೆ...
  • ಜಯದೇವ್‌ನನ್ನು ಸಿಕ್ಕಿ ಹಾಕಿಸಿ ಇವಳು ಬಚಾವ್ ಆಗ್ತಾಳೆ ಅಷ್ಟೇ ಸ್ಟೋರಿ
  • ಶಕ್ಕು ಆಟ ಅಂತ್ಯ ಆಗೋ ಸಮಯ ಹತ್ರ ಬಂತು
  • ಎಐ ಬಳಕೆ ಮಾಡಿದ್ದಾರೆ ಅಂತ ಶಕುಂತಲಾ ಡ್ರಾಮ ಮಾಡಬಹುದು
  • ಇನ್ನು ಇದರಲ್ಲಿ ಟ್ವಿಸ್ಟ್ ಇಟ್ಟಿದ್ದಾರೆ ಡೈರೆಕ್ಟರ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ