
ಬಿಗ್ ಬಾಸ್ ಮನೆಯಲ್ಲಿ ಸೋಮವಾರ ದೀಪಾವಳಿ ಹಬ್ಬದ ಊಟ.. ಇನ್ನೊಂದು ಕಡೆ ನಾಮಿನೇಶನ್ ಪ್ರಕ್ರಿಯೆ ಆತಂಕ. ಅಂತಿಮವಾಗಿ ಮೂರನೇ ವಾರಕ್ಕೆ ಕಿರಿಕ್ ಪಾರ್ಟಿ ಚಂದನ್ ಆಚಾರ್, ಕ್ಯಾಪ್ಟನ್ ಆಗಿದ್ದ ದುನಿಯಾ ರಶ್ಮಿ, ರಾಜು ತಾಳಿಕೋಟೆ, ಪ್ರಿಯಾಂಕಾ ಮತ್ತು ಮನೆಯಿಂದ ಹೊರಹೋದ ಚೈತ್ರಾ ವಾಸುದೇವನ್ ಅವರಿಂದ ನೇರವಾಗಿ ನಾಮಿನೇಟ್ ಆಗಿರುವ ಗಾಯಕ ವಾಸುಕಿ ವೈಭವ್ ನಾಮಿನೇಟ್ ಆಗಿದ್ದಾರೆ.
ಇನ್ನೊಂದು ಕಡೆ ಬಿಗ್ ಬಾಸ್ ಮನೆಯಲ್ಲಿ ಹಬ್ಬದ ಊಟ ಇತ್ತು. ಸ್ಪರ್ಧಿಗಳ ಮನೆಯಿಂದಲೇ ತಂದ ಊಟ, ಸಿಹಿ ತಿಂಡಿಗಳನ್ನು ನೀಡಿ ಸಂಭ್ರಮಿಸಲಾಯಿತು. ನಾಯಕನ ಆಯ್ಕೆಯಾಗದ ಕಾರಣ ನಾಯಕ ಯಾರನ್ನು ನಾಮಿನೇಟ್ ಮಾಡುತ್ತಾರೆ ಎಂಬ ಪ್ರಶ್ನೆ ಬಿಗ್ ಬಾಸ್ ಉತ್ತರಿಲೇ ಇಲ್ಲ.
ಇದೆರ ನಡುವೆ ಬಿಗ್ ಬಾಸ್ ಮನೆಯವರಿಗೆ ಒಂದು ಟಾಸ್ಕ್ ನೀಡಿದರು. ಒಂದಿಷ್ಟು ಶಬ್ದಗಳನ್ನು ನೀಡಿ ಮನೆ ಮಂದಿಯಲ್ಲ ಸೇರಿ ಒಂದು ಹಾಸ್ಯ ನಾಟಕ ಮಾಡಬೇಕು ಎಂದು ತಿಳಿಸಿದರು. ನಾಯಕ ನಾಯಕಿಯನ್ನಾಗಿ ನಿರ್ದೇಶಕ ಕುರಿ ಪ್ರತಾಪ್ ಆಯ್ಕೆ ಮಾಡಿಕೊಂಡಿದ್ದು ಶೈನ್ ಶೆಟ್ಟಿ ಮತ್ತು ಚೈತ್ರಾ ಕೊಟ್ಟೂರು.
ಜೈಜಗದೀಶ್ ಅವರ ಮನೆಯಿಂದ ಅನ್ನ ರಸಂ, ಶೈನ್ ಶೆಟ್ಟಿ ಅವರ ಮನೆಯಿಂದ ನಿರ್ದೋಸೆ, ಹರೀಶ್ ಅವರ ಮನೆಯಿಂದ ಕ್ಯಾರೆಟ್ ಹಲ್ವಾ ಹೀಗೆ ಭಿನ್ನ ವಿಭಿನ್ನ ಪದಾರ್ಥಗಳು ಮನೆಗೆ ಬಂದವು.
ನಾಟಕದ ರಿಹರ್ಸಲ್ ನಡೆದಿದ್ದು ರಾಜು ತಾಳಿಕೋಟಿ ಈ ಕಿರುಚಿತ್ರ ನಿರ್ಮಾಣಕ್ಕೆ ಹಣ ಹಾಕಲಿದ್ದಾರೆ ಎಂದು ಘೋಷಣೆ ಮಾಡಲಾಯಿತು. ಆದರೆ ಶೈನ್ ಶೆಟ್ಟಿ ಮತ್ತು ಚೈತ್ರಾ ಕೊಟ್ಟೂರು ಅಭಿನಯ ಕಂಡು ಒಂದು ಕ್ಷಣ ಮನೆಯವರು ನಿಬ್ಬೆರಗಾಗಿದ್ದೆಂತೂ ಸತ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.