ಅತಿ ಹೆಚ್ಚು ವೋಟ್‌ ಗಿಟ್ಟಿಸಿದ ಚಂದನ್‌ ಆಚಾರ್ ಗೇಮ್‌ ಪ್ಲ್ಯಾನ್‌ಗೆ ಮನಸೋತ ಜನ!

By Suvarna News  |  First Published Jan 5, 2020, 3:26 PM IST

ಬಿಗ್ ಬಾಸ್ ಸೀಸನ್-7 ರಲ್ಲಿ ಕಿರಿಕ್ ಪಾರ್ಟಿ ಹುಡುಗನ ಗೇಮ್‌ಪ್ಲಾನ್‌ಗೆ ಸಿಗ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ! ಇದಕ್ಕೆ ಆತನ ಒಂಟಿತನವೇ ಸಾಕ್ಷಿಯೆಂದು ವೀಕ್ಷಕರು ಹೇಳುತ್ತಾರೆ!
 


ಏನಪ್ಪಾ! ಇವನು ಇಷ್ಟೊಂದು ಕಿರಿಕ್ ಮಾಡ್ತಾನೆ, ಒಂದು ಸೇಬು ತಿಂದ್ರೆ ಏನೇನೋ ಹೇಳಿ ಹಿಂಸೆ ಕೊಟ್ಬಿಡೋದಾ?  ಅಂತ ಮಾತನಾಡಿದ ಜನರಿಗೆ ಈಗ ಈತ ಫೇವರೆಟ್ ಬಾಯ್ ಆಗಿದ್ದಾನೆ. 

Tap to resize

Latest Videos

undefined

ಬಿಗ್ ಬಾಸ್‌ ಮನೆಗೆ ಕಾಲಿಟ್ಟ ದಿನದಂದಲೂ ಯಾವುದೇ ಗುಂಪು ಮಾಡಲು ಆಗದಿದ್ದನ್ನು ಮಾಡಿ ತೋರಿಸುವ ಸ್ಪರ್ಧಿ ಅಂದ್ರೆ ಚಂದನ್ ಆಚಾರ್.  ಸತತವಾಗಿ 11 ವಾರಗಳ ಕಾಲ ನಾಮಿನೇಟ್‌ ಆದರೂ ಸೇಫ್‌ ಆದ ಸ್ಪರ್ಧಿ ಚಂದನ್ ಹೊಸ ಇತಿಹಾಸ ಸೃಷ್ಟಿಸಿದ್ದರು.  ಟಾಸ್ಕ್‌ನಲ್ಲಿ ಯಾವುದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡಿ ಜನರನ್ನು ಮನೋರಂಜಿಸುತ್ತಾರೆ. 

ಮನೆಗೆ ಕಾಲಿಟ್ಟಾಗಿನಿಂದಲೂ ನಾಮಿನೇಟ್ ಆದ ಚಂದನ್ 11 ನೇ ವಾರವೂ ಅತಿ ಹೆಚ್ಚು ವೋಟ್ ಪಡೆದುಕೊಂಡು ಸೇಫ್‌ ಆದ ಮೊದಲ ಸ್ಪರ್ಧಿ ಅಷ್ಟೇ ಅಲ್ಲದೆ ಈ ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ.  ವಾರದಲ್ಲಿ ಒಬ್ಬೊಬ್ಬ ಸ್ಪರ್ಧಿಯ ಪೋಷಕರು ಮನೆ ಆಗಮಿಸುತ್ತಿದ್ದರು. ಈ ವೇಳೆ ಚಂದನ್ ತಾಯಿ ಬಂದಾಗ ಇತರರು ಆವನ ಗುಣದ ಬಗ್ಗೆ ಹಾಸ್ಯ ಮಾಡುತ್ತಿದ್ದರು. ಆದರೆ ಅದ್ಯಾವುದನ್ನು ಮಾಡದೇ ಧರಿಸಿದ ಚಪ್ಪಲಿಗಳನ್ನು ಪಕ್ಕಕ್ಕೆ ಬಿಟ್ಟು ತಾಯಿ ಕಾಲಿಗೆ ನಮಸ್ಕರಿಸಿದ್ದರು.

ಈ ಎಲ್ಲಾ ಗುಣಗಳು ಒಟ್ಟಾಗಿ ಸೇರಿಕೊಂಡು ಚಂದನ್ ಉತ್ತಮ ವ್ಯಕ್ತಿಯಾಗಿ ಜನರ ಪ್ರೀತಿ ಗೆದ್ದಿದ್ದಾರೆ.

click me!