
‘ಬಿಗ್ ಬಾಸ್ ಕನ್ನಡ 13’ರಲ್ಲಿ ದಿನದಿಂದ ದಿನಕ್ಕೆ ಕಿರಿಕ್, ಕಿತ್ತಾಟ, ಕಾಂಟ್ರವರ್ಸಿ ಎಲ್ಲವೂ ಜೋರಾಗುತ್ತಿದೆ. ನಾಮಿನೇಷನ್ ಕಾವು ಏರುತ್ತಿದ್ದಂತೆ ಮನೆಯೊಳಗಿನ ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಗಳೂ ಬಯಲಾಗುತ್ತಿವೆ. ಇದರ ನಡುವೆ ಮಾಡ್ರನ್ ಮಹಾಕವಿ ಮಂಜ ಮತ್ತೆ ಸಿಡಿದೆದ್ದಿದ್ದರೆ, ಮತ್ತೊಂದೆಡೆ ಅವರ ಕಿರಿಕಿರಿಯಿಂದ ಸೌಂದರ್ಯ ಶೆಟ್ಟಿ ಕಣ್ಣೀರಿಟ್ಟಿರುವ ಪ್ರೋಮೋ ಗಮನ ಸೆಳೆಯುತ್ತಿದೆ.
ಮಂಜನ ವರ್ತನೆಯಿಂದ ಸೌಂದರ್ಯಗೆ ಕಿರಿಕಿರಿ?
ಬಿಗ್ ಬಾಸ್ ಮನೆಯಲ್ಲೀಗ ಸೌಂದರ್ಯ ಶೆಟ್ಟಿ ತಮ್ಮದೇ ಸ್ಟೈಲ್‌ನಲ್ಲಿ ಆಟ ಶುರು ಮಾಡಿದ್ದಾರೆ. ಈಗಾಗಲೇ ಆಸಿಯಾಗೆ ಸಖತ್ ಇಮಿಟೇಟ್ ಮಾಡಿ ಗಮನ ಸೆಳೆದಿದ್ದ ಸೌಂದರ್ಯ, ಇದೀಗ ಮಂಜನ ವಿಚಾರದಲ್ಲಿ ಮಾತ್ರ ಸಂಪೂರ್ಣವಾಗಿ ಅಪ್ಸೆಟ್ ಆಗಿದ್ದಾರೆ. ಮಂಜನ ಕಿರಿಕಿರಿಯಿಂದ ತಾಳ್ಮೆ ಕಳೆದುಕೊಂಡಿರುವ ಸೌಂದರ್ಯ, ನನಗೆ ಆಗ್ತಿಲ್ಲ... ತುಂಬಾ ಕಿರಿಕಿರಿ ಆಗ್ತಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಅಷ್ಟೇ ಅಲ್ಲ, ಮಂಜನಿಗೆ ಪದೇಪದೇ ಸುಮ್ಮನೆ ಇರಿ ಎಂದು ಮನವಿ ಮಾಡಿಕೊಂಡಿದ್ದರೂ ಅವರು ಕೇಳುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಕೊನೆಗೆ, ನಾನು ವಾಶ್‌ರೂಮ್‌ಗೆ ಹೋಗಿ ಮಲಗ್ತೀನಿ ಎಂದು ಕಣ್ಣೀರಿಡುವ ದೃಶ್ಯ ಪ್ರೇಕ್ಷಕರ ಗಮನ ಸೆಳೆದಿದೆ. ಸೌಂದರ್ಯ ಇಷ್ಟೊಂದು ಎಮೋಷನಲ್ ಆಗಲು ಮಂಜ ಏನು ಮಾಡಿದರು? ಅಸಲಿ ಕಾರಣವೇನು? ಎನ್ನುವುದು ಇಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.
ನಾಮಿನೇಷನ್ ಬಳಿಕ ಮಂಜನ ಆರ್ಭಟ
ಇತ್ತ ನಾಮಿನೇಷನ್ ವಿಚಾರವೇ ಮಂಜನ ಕೋಪಕ್ಕೆ ಪ್ರಮುಖ ಕಾರಣವಾಗಿದೆ. ತಮ್ಮ ಹೆಸರನ್ನು ನಾಮಿನೇಟ್ ಮಾಡಿದ್ದಕ್ಕೆ ಅಸಮಾಧಾನಗೊಂಡ ಮಂಜ, ಮನೆಯೊಳಗೆ ನಡೆಯುತ್ತಿರುವ ಪಕ್ಷಪಾತ ಮತ್ತು ಪಿತೂರಿಯ ಬಗ್ಗೆ ನೇರವಾಗಿಯೇ ಧ್ವನಿ ಎತ್ತಿದ್ದಾರೆ. ಇಲ್ಲಿ ಪ್ರತಿಯೊಂದನ್ನೂ ಟಾರ್ಗೆಟ್ ಮಾಡಲಾಗ್ತಿದೆ. ಮನೆಯೊಳಗೆ ಸ್ಪಷ್ಟವಾಗಿ ಪಾರ್ಷಿಯಾಲಿಟಿ ನಡೀತಾ ಇದೆ. ಏನ್ ಮಾತಾಡ್ತೀರಾ ನೀವು? ಎಂದು ಸಹ-ಸ್ಪರ್ಧಿಗಳ ವಿರುದ್ಧ ಮಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಅವರು, ಮನೆಯ ಸದಸ್ಯರು ತಮ್ಮ ಹಿಂದೆ ಮಾತನಾಡಿಕೊಳ್ಳುವುದನ್ನೂ ತಾವು ಕೇಳಿಸಿಕೊಂಡಿರುವುದಾಗಿ ಹೇಳಿ ಮತ್ತಷ್ಟು ಕಿಡಿಕಾರಿದ್ದಾರೆ. ಇಂಥವರು ಈ ಮನೆಯಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ, ಯೋಗ್ಯರೇ ಅಲ್ಲ ಎಂದು ಖಡಕ್ ಆಗಿ ಹೇಳಿರುವ ಮಂಜ, ಮನೆಯ ವಾತಾವರಣವನ್ನೇ ಬಿಸಿ ಮಾಡಿದ್ದಾರೆ.
‘ಎಲ್ಲರನ್ನೂ ಮನೆಗೆ ಕಳಿಸಿಯೇ ಹೋಗ್ತೀನಿ!’
ಮಂಜನ ಆಕ್ರೋಶ ಇಲ್ಲಿಗೇ ಮುಗಿದಿಲ್ಲ. ಮನೆಯ ಸದಸ್ಯರ ವಿರುದ್ಧ ತೊಡೆ ತಟ್ಟಿ ಸವಾಲು ಹಾಕಿರುವ ಅವರು, ನಿಮ್ಮನ್ನೆಲ್ಲಾ ಮನೆಗೆ ಕಳಿಸಿನೇ ನಾನು ಹೋಗೋದು ಎನ್ನುವ ರೀತಿಯಲ್ಲಿ ಸವಾಲು ಹಾಕಿದ್ದಾರೆ. ಇದರಿಂದ ಈಗಾಗಲೇ ಬಿಗ್ ಬಾಸ್ ಮನೆಯೊಳಗಿನ ವಾತಾವರಣ ಮತ್ತಷ್ಟು ಬಿಸಿಯಾಗಿದೆ. ಒಂದು ಕಡೆ ನಾಮಿನೇಷನ್ ವಿಚಾರದಲ್ಲಿ ಮಂಜನ ಆರ್ಭಟ, ಮತ್ತೊಂದೆಡೆ ಅವರ ವರ್ತನೆಯಿಂದ ಸೌಂದರ್ಯ ಕಣ್ಣೀರು ಹಾಕಿರುವುದು ಕುತೂಹಲ ಹೆಚ್ಚಿಸಿದೆ.
ಮಂಜನಿಗೆ ಸೌಂದರ್ಯ ಯಾಕೆ ಇಷ್ಟೊಂದು ಬೇಸರಗೊಂಡಿದ್ದಾರೆ? ಸೌಂದರ್ಯ ಮನವಿ ಮಾಡಿದರೂ ಮಂಜ ಯಾಕೆ ಸುಮ್ಮನಾಗಲಿಲ್ಲ? ನಾಮಿನೇಷನ್ ವಿಚಾರದಲ್ಲಿ ಮಂಜ ಮತ್ತು ಮನೆಯ ಸದಸ್ಯರ ನಡುವೆ ನಡೆದ ಮುಖಾಮುಖಿ ಯಾವ ಹಂತಕ್ಕೆ ತಲುಪಿತು? ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ‘ಬಿಗ್ ಬಾಸ್ ಕನ್ನಡ 13’ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಸದ್ಯ ಸೌಂದರ್ಯ ಕಣ್ಣೀರು ಮತ್ತು ಮಂಜನ ಖಡಕ್ ಸವಾಲ್‌ಗಳು ಬಿಗ್ ಬಾಸ್ ಮನೆಯ ಮುಂದಿನ ಎಪಿಸೋಡ್‌ಗೆ ಭರ್ಜರಿ ಹೈಪ್ ಕ್ರಿಯೇಟ್ ಮಾಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.