ಬಿಗ್ ಬಾಸ್ ಕನ್ನಡ 11ರಲ್ಲಿ ಈ ವಾರ ವಾಹಿನಿ ಟಾಸ್ಕ್ ನಡೆದಿದ್ದು, ಎರಡು ತಂಡಗಳನ್ನು ರಚಿಸಲಾಗಿದೆ. ವಿಶೇಷವೆಂದರೆ ಈ ಬಾರಿ ವೀಕ್ಷಕರೇ ಯಾವ ತಂಡ ಗೆಲ್ಲಬೇಕೆಂದು ವೋಟ್ ಮಾಡುವ ಮೂಲಕ ತೀರ್ಮಾನಿಸಲಿದ್ದಾರೆ.
ಬಿಗ್ ಬಾಸ್ ಕನ್ನಡ 11ರ ಶೋ 10 ನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ಮನೆಯಲ್ಲಿ ಸುದ್ದಿ ವಾಹಿನಿಗಳ ಬಗ್ಗೆ ಟಾಸ್ಕ್ ನೀಡಲಾಗಿದೆ. ಅದಕ್ಕಾಗಿ ಮನೆಯಲ್ಲಿ ಎರಡು ತಂಡ ಮಾಡಿ 2 ಟಿವಿ ವಾಹಿನಿಗಳಾಗಿದೆ ಮಾಡಲಾಗಿದೆ. ಅಂದರೆ 2 ತಂಡಗಳನ್ನು ಮಾಡಲಾಗಿದೆ. ವಿಶೇಷವೆಂದರೆ ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಎರಡು ತಂಡದಲ್ಲಿ ಅತೀ ಹೆಚ್ಚು ಮನರಂಜನೆ ಕೊಟ್ಟಿರುವ ವಾಹಿನಿಯ ತಂಡ ಯಾವುದು ಎಂದು ವೀಕ್ಷಕರೇ ನಿರ್ಧರಿಸಿ ವೋಟ್ ಮಾಡಬೇಕಿದೆ. ಜಿಯೋ ಸಿನಿಮಾ ಆಪ್ ಮೂಲಕ ವೀಕ್ಷಕರು ಮತ ಚಲಾಯಿಸಬೇಕಿದೆ.
ವಾರದ ಮೊದಲ ಸಂಚಿಕೆ ಪ್ರಸಾರವಾದ ಬಳಿಕ ಜಿಯೋ ಸಿನಿಮಾ ಆಪ್‌ನಲ್ಲಿ ವೋಟಿಂಗ್ ಲೈನ್ ತೆರೆಯಲಾಗಿದೆ. ಬುಧವಾರ ಬೆಳಗ್ಗೆವರೆಗೂ ವೋಟಿಂಗ್ ಲೈನ್ಸ್ ಓಪನ್ ಇದೆ. ಯಾವ ತಂಡ ಇಷ್ಟವಾಗುತ್ತೋ ಅವರಿಗೆ ವೋಟ್ ಮಾಡುವ ಜವಾಬ್ದಾರಿ ವೀಕ್ಷಕರ ಮೇಲಿದೆ!
ಬಿಗ್‌ಬಾಸ್ ಮನೆಯಿಂದ ಹೊರಬಂದು ಸುದೀರ್ಘ ಪತ್ರ ಬರೆದು ಕಿಚ್ಚನಿಗೆ ಟ್ಯಾಗ್ ಮಾಡಿದ ಶೋಭಾ ಶೆಟ್ಟಿ!
ಒಂದು ತಂಡಕ್ಕೆ ಧೂಳ್ ಧಮಾಕಾ ಎಂದು ಹೆಸರಿಡಲಾಗಿದೆ. ಈ ವಾಹಿನಿಯ ತಂಡದಲ್ಲಿ ಸುರೇಶ್ ( ವಾಹಿನಿ ಮುಖ್ಯಸ್ಥ), ತ್ರಿವಿಕ್ರಮ್, ಭವ್ಯಾ, ಐಶ್ವರ್ಯಾ, ಗೌತಮಿ ಹಾಗೂ ಮಂಜು ಇದ್ದಾರೆ. ಎರಡನೇ ತಂಡ ಮಸ್ತ್ ಮಜಾ ಮಾಡಿ ಇದರಲ್ಲಿ ತಂಡದಲ್ಲಿ ಧನರಾಜ್ ( ವಾಹಿನಿ ಮುಖ್ಯಸ್ಥ), ಹನುಮಂತ, ಶಿಶಿರ್, ರಜತ್, ಮೋಕ್ಷಿತಾ ಹಾಗೂ ಚೈತ್ರಾ ಇದ್ದಾರೆ.
ಮೊದಲ ಟಾಸ್ಕ್ ನಲ್ಲಿ ವಾರ್ತೆಗಳನ್ನು ಓದಬೇಕಿತ್ತು. ಇದರಲ್ಲಿ ಸುರೇಶ್ ತಂಡದಿಂದ ಐಶ್ವರ್ಯಾ ಮತ್ತು ಧನ್‌ರಾಜ್ ತಂಡದಿಂದ ಚೈತ್ರಾ ಕುಂದಾಪುರ ಅವರು ವಾರ್ತಾ ವಾಚಕಿಯರಾಗಿ ಬಂದಿದ್ದರು. ಇದರಲ್ಲಿ ಉಸ್ತುವಾರಿಯವರು ತಮ್ಮ ಎದುರಾಳಿ ತಂಡಕ್ಕೆ ಅಂಕ ನೀಡಬೇಕಿತ್ತು. ಶಿಶಿರ್ ಮತ್ತು ಗೌತಮಿ ಉಸ್ತುವಾರಿಯಾಗಿದ್ದರು. ಇದರಲ್ಲಿ ಸುರೇಶ್ ತಂಡ ಗೆದ್ದಿತು. ನ್ಯೂಸ್ ಓದಿದ ರೀತಿಗೆ ಹೆಚ್ಚು ಅಂಕ ದೊರೆಯಿತು. ಆದರೆ ಕಂಟೆಂಟ್ ತುಂಬಾ ಚೆನ್ನಾಗಿ ಇದ್ದಿದ್ದು ಧನ್‌ರಾಜ್ ಅವರ ತಂಡದ್ದು ಎಂಬುದರಲ್ಲಿ ಎರಡು ಮಾತಿಲ್ಲ.
ಕ್ಲೈಮ್ಯಾಕ್ಸ್‌ನಲ್ಲಿ ತೆಲುಗು ಬಿಗ್ ಬಾಸ್, ವಿನ್ನರ್ ಯಾರೆಂದು ಭಾರೀ ಚರ್ಚೆ, ಕನ್ನಡಿಗ ನಿಖಿಲ್ or ಗೌತಮ್?
ಇನ್ನು ಎರಡನೇ ಟಾಸ್ಕ್ ಕುಕ್ಕಿಂಗ್ ಆಗಿತ್ತು. ಧನು ತಂಡದಿಂದ ಹನುಮಂತ ಮತ್ತು ಸುರೇಶ್ ತಂಡದಿಂದ ತ್ರಿವಿಕ್ರಮ್ ಅವರು ಬಂದಿದ್ದರು. ಸುರೇಶ್ ಮತ್ತು ಮೋಕ್ಷಿತಾ ಪೈ ಅವರು ಉಸ್ತುವಾರಿಗಳಾಗಿದ್ದರು. ಅಡುಗೆ ಮಾಡುವವರು ಕಿವಿಗೆ ಹೆಡ್ ಫೋನ್ ಇಟ್ಟುಕೊಂಡು ಹಾಡು ಕೇಳಿಸಿಕೊಳ್ಳಬೇಕಿತ್ತು. ದೂರದಲ್ಲಿ ನಿಂತ ತಂಡದ ಇತರ ಸದಸ್ಯರು ಅಡುಗೆ ಮಾಡುವವರಿಗೆ ಯಾವ ಪದಾರ್ಥವನ್ನು ಎಷ್ಟು ಹಾಕಬೇಕು ಎಂದು ತಿಳಿಸಬೇಕಿತ್ತು. ತಮ್ಮ ತಂಡ ಹೇಳಿದ್ದನ್ನು ಅರ್ಥ ಮಾಡಿಕೊಂಡು ಅಡುಗೆ ಮಾಡಬೇಕಿತ್ತು. ಉಸ್ತುವಾರಿಗಳು ಟೇಸ್ಟ್ ನೋಡಿ ಅಂಕ ಕೊಡಬೇಕಿತ್ತು. ಈ ಟಾಸ್ಕ್ ನಲ್ಲಿ ಕೂಡ ಸುರೇಶ್ ತಂಡವೇ ಗೆದ್ದಿತು.
ಅಡುಗೆ ಮಾಡಿದ ಸಮೋಸವನ್ನು ಬಿಗ್‌ಬಾಸ್ ಮನೆಯವರಿಗೆ ತಿನ್ನಲು ಕೊಟ್ಟರು. ಆಗ ಹಲವರು ತಿಂದು ಹನುಮಂತ ಮಾಡಿದ್ದು ರುಚಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಟಾಸ್ಕ್ ಆಗಲೇ ಮುಕ್ತಾಯವಾಗಿತ್ತು. ಮತ್ತು ತ್ರಿವಿಕ್ರಮ್ ಮಾಡಿದ ಅಡುಗೆಗೆ ಹೆಚ್ಚು ಅಂಕ ಸಿಕ್ಕಿ ಗೆದ್ದಿತ್ತು. ನಾಳಿನ ದಿನ ಯಾವ ಟಾಸ್ಕ್ ಇರಲಿದೆ ಎಂಬುದನ್ನು ಕಾದು ನೋಡಬೇಕು. ಜೊತೆಗೆ ವೀಕ್ಷಕರು ವಾರಾಂತ್ಯ ಯಾವ ತಂಡವನ್ನು ಗೆಲ್ಲಿಸುತ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ.