
ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ʼಬಿಗ್ ಬಾಸ್ ಕನ್ನಡ ಸೀಸನ್ 11ʼ ರನ್ನರ್ ಅಪ್ ಅವರು ಹೀರೋ ಎಂಬ ಮಾತು ಕೇಳಿಬಂದಿತ್ತು. ಅದೀಗ ನಿಜವಾಗಿದೆ. ಕಲರ್ಸ್ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದೆ.
ತ್ರಿವಿಕ್ರಮ್ ಹೀರೋ!
ಹೌದು, ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ತ್ರಿವಿಕ್ರಮ್ ಅವರೇ ಹೀರೋ. ಈ ಮೂಲಕ ಅವರು ಎರಡನೇ ಬಾರಿಗೆ ಕಲರ್ಸ್ ಕನ್ನಡದಲ್ಲಿ ಹೀರೋ ಆಗುತ್ತಿದ್ದಾರೆ. ಈ ಹಿಂದೆ ʼಪದ್ಮಾವತಿʼ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದಲ್ಲಿ ತ್ರಿವಿಕ್ರಮ್ ಕಾಣಿಸಿಕೊಂಡಿದ್ದರು. ಈಗ ತ್ರಿವಿಕ್ರಮ್‌ಗೆ ಪ್ರತಿಮಾ ನಾಯಕಿ. ಮೇಲ್ನೋಟಕ್ಕೆ ಇದು ಬಾಲ್ಯವಿವಾಹದ ಕಥೆ ಎಂದು ಕಾಣುತ್ತದೆ.
ತ್ರಿವಿಕ್ರಮ್ ಗೆ ಪ್ರತಿಮಾ ಮ್ಯಾಚ್ ಆಗಲ್ಲ, ಮುದ್ದು ಸೊಸೆ ಸೀರಿಯಲ್ ಶುರುವಾಗೋ ಮುನ್ನವೇ ಫ್ಯಾನ್ಸ್ ಅಸಮಾಧಾನ
ಪ್ರೋಮೋದಲ್ಲಿ ಏನಿದೆ?
ಈಗಾಗಲೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ಹೈಸ್ಕೂಲ್‌ನಲ್ಲಿ ಓದುತ್ತಿರುವ ವಿದ್ಯಾಗೆ ಓದುವ ಹುಚ್ಚು. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿನಿ ಪಟ್ಟ ಪಡೆದುಕೊಳ್ಳುವ ಅವಳಿಗೆ ತಂದೆ ಬೇಗ ಮದುವೆ ಮಾಡಲು ರೆಡಿಯಾಗುತ್ತಾನೆ. ಅಜ್ಜಿಗೆ ಹುಷಾರಿಲ್ಲ ಎಂದು ಹೇಳಿ ಶಾಲೆಯಿಂದ ಮಗಳನ್ನು ಕರೆದುಕೊಂಡು ಬರುತ್ತಾನೆ. ಆಗ ಮನೆಗೆ ಗಂಡಿನ ಕಡೆಯವರು ಬರುತ್ತಾರೆ. ಆ ಗಂಡೇ ತ್ರಿವಿಕ್ರಮ್. ಹುಡುಗನ ಕಡೆಯವರು ವಿದ್ಯಾಳನ್ನು ಒಪ್ಪುತ್ತಾರೆ, ಮದುವೆಯಾದಮೇಲೆ ವಿದ್ಯಾ ಓದುವುದು ಬೇಡ ಎನ್ನುತ್ತಾರೆ. ಆಗ ವಿದ್ಯಾ ಬೇಸರ ಮಾಡಿಕೊಳ್ತಾಳೆ.
ತ್ರಿವಿಕ್ರಮ್ ಪಾತ್ರ ಹೇಗಿದೆ?
ಓದಬೇಕೆಂಬ ಹುಡುಗಿಗೆ ಬಾಲ್ಯವಿವಾಹ ಮಾಡಿದರೆ ಏನಾಗುವುದು ಎನ್ನೋದು ಬಹುಶಃ ಈ ಧಾರಾವಾಹಿಯಲ್ಲಿ ಇರಬಹುದು. ಇನ್ನು ತ್ರಿವಿಕ್ರಮ್ ಪಾತ್ರ ಹೇಗಿದೆ ಎನ್ನೋದು ಆದಷ್ಟು ಬೇಗ ರಿವೀಲ್ ಆಗಬೇಕಿದೆ. ಬಿಗ್ ಬಾಸ್ ಶೋನಲ್ಲಿ ಅನೇಕರು ತ್ರಿವಿಕ್ರಮ್ ಅವರನ್ನು ನೋಡಿ ಇಷ್ಟಪಟ್ಟಿದ್ದರು. ಆದಷ್ಟು ಬೇಗ ಅವರು ತೆರೆ ಮೇಲೆ ಕಾಣಿಸಿಕೊಳ್ತಿರೋದು ವೀಕ್ಷಕರಿಗೆ ಖುಷಿ ಕೊಟ್ಟಿದೆ.
ಮೇಘಾ ಶೆಟ್ಟಿ ನಿರ್ಮಾಣದ ʼಮುದ್ದು ಸೊಸೆʼ ಧಾರಾವಾಹಿ; Bigg Boss Kannada Runner Up ಹೀರೋ ಆಗ್ತಾರಾ?
ಭವ್ಯಾ ಗೌಡ ಇರಬೇಕಿತ್ತು!
ʼಪುಟ್ಟಗೌರಿ ಮದುವೆ 3ʼ ಇರಬಹುದೇ ಎಂದು ವೀಕ್ಷಕರಿಗೂ ಅನುಮಾನ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಸ್ನೇಹಿತರಾಗಿದ್ದರು. ಇವರ ಜೋಡಿ ಅನೇಕರಿಗೆ ಇಷ್ಟವಾಗಿದ್ದರೆ, ಇನ್ನೂ ಕೆಲವರಿಗೆ ತ್ರಿವಿಕ್ರಮ್-ಮೋಕ್ಷಿತಾ ಪೈ ಇಷ್ಟವಾಗಿದ್ದರು. ಹೀಗಾಗಿ ತ್ರಿವಿಕ್ರಮ್‌ಗೆ ಜೋಡಿಯಾಗಿ ಭವ್ಯಾ ಇರಬೇಕಿತ್ತು, ಮೋಕ್ಷಿತಾ ಪೈ ಜೊತೆಗೆ ತ್ರಿವಿಕ್ರಮ್ ಇರಬೇಕಿತ್ತು, ಪ್ರತಿಮಾ ತುಂಬ ಚಿಕ್ಕವಳ ಥರ ಕಾಣಿಸ್ತಾಳೆ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.
ನೀ ಬಂದು ನಿಂತಾಗ... ಬಾರಾ.. ಬಾರಾ... ಎಂದ ಸತ್ಯ: ಈ ನಗುವಿಗೆ ನಾನು ಸೋತೆ ಸೋತೆ ಅಂತಿದ್ದಾರೆ ಫ್ಯಾನ್ಸ್
ತ್ರಿವಿಕ್ರಮ್‌ಗೆ ಒಳ್ಳೆಯದಾಗಲಿ
“ಕಳೆದ 4 ವರ್ಷಗಳಿಂದ ಯಾವುದೇ ಕೆಲಸ , ಸಿನಿಮಾ,ಧಾರಾವಾಹಿಗಳು ಸಿಗದೇ ಒಬ್ಬಂಟಿ ತ್ರಿವಿಕ್ರಮ್ . ಬಿಗ್ ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ರನ್ನರ್ ಆಗಿದ್ದಾರೆ. ಈಗ ಆ ಶೋ ಇಂದ ಜನರ ಮನಸಿಗೆ ಹತ್ತಿರವಾಗಿದ್ದು ಇದೀಗ ಅವರಿಗೆ ಮುದ್ದು ಸೊಸೆ ಎಂಬ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದೆ ಇದಕ್ಕೆ ಅವನ ಅಭಿಮಾನಿಗಳು ಅದ ಅವನಿಗೆ ಸಪೋರ್ಟ್ ಮಾಡುತ್ತಾ ಧಾರಾವಾಹಿ ಮೂಲಕ ಅವನ ಜೀವನಕ್ಕೆ ಒಳ್ಳೇದು ಆಗಲಿ ಎಂದು ಬಯಸೋಣ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಈ ಧಾರಾವಾಹಿಯಲ್ಲಿ ಹರಿಣಿ ಶ್ರೀಕಾಂತ್ ಕೂಡ ನಟಿಸುತ್ತಿದ್ದಾರೆ. ಈ ಧಾರಾವಾಹಿ ಯಾವಾಗ? ಎಷ್ಟು ಗಂಟೆಗೆ ಪ್ರಸಾರ ಆಗಲಿದೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಒಟ್ಟಿನಲ್ಲಿ ಯಾವ ಧಾರಾವಾಹಿ ಅಂತ್ಯ ಆಗಲಿದೆಯೋ ಏನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.