ಬಿಗ್ ಬಾಸ್ ಮನೇಲಿರೋ ಧರ್ಮ ಭೂಮಿ ತೂಕದವ್ರಂತೆ! ಅಷ್ಟೊಂದು ಸಾಚಾ ಅಂತಿರೋದ್ಯಾಕೆ?

Published : Nov 02, 2024, 07:52 PM ISTUpdated : Nov 02, 2024, 07:54 PM IST
ಬಿಗ್ ಬಾಸ್ ಮನೇಲಿರೋ ಧರ್ಮ ಭೂಮಿ ತೂಕದವ್ರಂತೆ! ಅಷ್ಟೊಂದು ಸಾಚಾ ಅಂತಿರೋದ್ಯಾಕೆ?

ಸಾರಾಂಶ

ಲಾಯರ್ ಜಗದೀಶ್ ಹಾಗೂ ರಂಜಿತ್ ಇಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಹಾಕಿದ್ದು, ಈಗ ಅವರಿಬ್ಬರ ಗಲಾಟೆ ಇಲ್ಲ. ಆದರೆ, ಉಳಿದವರಲ್ಲಿ ಬಹಳಷ್ಟು ಸ್ಪರ್ಧಿಗಳ ಬಾಯಿ ಭಾರೀ ಜೋರಾಗಿಯೇ ಇದೆ. ಅದು ಚೈತ್ರಾ..

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಯುತ್ತಿರುವುದು ಗೊತ್ತೇ ಇದೆ. ಇದೀಗ ಮಧ್ಯಂತರ ಹಂತದ ಕಡೆ ಹೋಗುತ್ತಿರುವ ಬಿಗ್ ಬಾಸ್ ಶೋದಲ್ಲಿ ಮನೆಯೊಳಗೆ ಸಾಕಷ್ಟು ಗಲಾಟೆ, ವಾದ-ವಿವಾದಗಳು ನಡೆಯುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರಿಬ್ಬರ ಜಗಳ-ಹೊಡೆದಾಟಗಳು ಜನರನ್ನು ರಂಜಿಸಿದ್ದಕ್ಕಿಂತ ಹೆಚ್ಚಾಗಿ ಅಸಹ್ಯ ಹುಟ್ಟಿಸಿದ್ದವು. ಬಿಗ್ ಬಾಸ್ ಮನೆಗೆ ಒಂದು ನ್ಯಾಯ-ನಿಯಮ ಇಲ್ಲವೇ ಎಂದು ಜನರು ಆಡಿಕೊಳ್ಳುವಂತಾಗಿದೆ. 

ಲಾಯರ್ ಜಗದೀಶ್ ಹಾಗೂ ರಂಜಿತ್ ಇಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಹಾಕಿದ್ದು, ಈಗ ಅವರಿಬ್ಬರ ಗಲಾಟೆ ಇಲ್ಲ. ಆದರೆ, ಉಳಿದವರಲ್ಲಿ ಬಹಳಷ್ಟು ಸ್ಪರ್ಧಿಗಳ ಬಾಯಿ ಭಾರೀ ಜೋರಾಗಿಯೇ ಇದೆ. ಅದು ಚೈತ್ರಾ ಕುಂದಾಪುರ ಆಗಿರಬಹುದು ಅಥವಾ ಹಂಸ ಆಗಿರಬಹುದು. ಚಾಲಾಕಿ ಹನುಮಂತ, ಶ್ರೀಮಂತ ಗೋಲ್ಡ್ ಸುರೇಶ್, ಯಾರೇ ಆದ್ರೂ  ಅವರೆಲ್ಲ ಆಟಕ್ಕೋಸ್ಕರವಾದರೂ ಏನಾದ್ರೂ ಡಿಫ್ರಂಡ್‌ ಆಗಿ ಮಾತಾಡ್ತಾರೆ. ಆದ್ರೆ ಧರ್ಮಕೀರ್ತಿ ರಾಜ್ ಮಾತ್ರ ಸೈಲೆಂಟ್‌!

ಸದ್ಯ ಸ್ಪರ್ಧಿ ಧರ್ಮ ಕೀರ್ತಿರಾಜ್ ಅವರು ತಮ್ಮ ಹೆಸರಿಗೆ ತಕ್ಕಂತೆ ನ್ಯಾಯಯುತವಾಗಿ ಆಡುತ್ತಿದ್ದಾರೆ. ಅತಿಯಾಗಿ ಮಾತನಾಡದೇ, ಕೆಟ್ಟ ಮಾತಾಡದೇ ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಂಡು ಆಟ ಆಡುತ್ತಿದ್ದಾರೆ. ಹೀಗಾಗಿ ಹಲವು ಬಿಗ್ ಬಾಸ್ ವೀಕ್ಷಕರಿಗೆ ಧರ್ಮ ತುಂಬಾ ಇಷ್ಟವಾಗಿದ್ದಾರೆ. ಅವರ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ಒಪಿನಿಯನ್ ಓಡಾಡತೊಡಗಿದೆ. ಅದೇನು ಗೊತ್ತಾ? 

'ಮೋಸ, ವಂಚನೆ, ದೌರ್ಜನ್ಯ, ಅವಿವೇಕ ಹಾಗೂ ಅಸಂಬದ್ಧ ಮಾತುಗಳು ಇವೆಲ್ಲವನ್ನೂ ಮೀರಿ ಈ ಬಿಗ್ ಬಾಸ್‌ನಲ್ಲಿ 'ಭೂಮಿ ತೂಕ'ದ ಮನುಷ್ಯನಾಗಿ ಉಳ್ದಿರೋದು ಮಾತ್ರ ಧರ್ಮ ಕೀರ್ತಿರಾಜ್ ಒಬ್ಬರೇ..' ಎಂಬ ಫೋಟೋಗಳು, ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ನಟ ಧರ್ಮ ಕೀರ್ತಿರಾಜ್ ಹಾಗೇ ಇರುವುದು ಹೌದು. ಆದರೆ, ಮುಂದಿನ ದಿನಗಳಲ್ಲಿ ಅವರು ತಮ್ಮ ವರಸೆ ಬದಲಿಸುತ್ತಾರಾ? ಕಾದು ನೋಡಬೇಕು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!