ಸಾಧ್ಯ ಆದ್ರೆ ನನ್ನನ್ನು ಮತ್ತೆ ಕರೆಸಿಕೊಳ್ಳಿ: ಸುದೀಪ್ ಮುಂದೆ ಬಿಗ್‌ಬಾಸ್‌ ಗೆ ಕ್ಷಮೆ ಕೇಳಿದ ಜಗದೀಶ್

Published : Oct 19, 2024, 11:15 PM IST
 ಸಾಧ್ಯ ಆದ್ರೆ ನನ್ನನ್ನು  ಮತ್ತೆ ಕರೆಸಿಕೊಳ್ಳಿ: ಸುದೀಪ್ ಮುಂದೆ ಬಿಗ್‌ಬಾಸ್‌ ಗೆ ಕ್ಷಮೆ ಕೇಳಿದ  ಜಗದೀಶ್

ಸಾರಾಂಶ

ಬಿಗ್​ಬಾಸ್​ ಸೀಸನ್​ 11 ರಿಂದ ಹೊರಹಾಕಲ್ಪಟ್ಟ ಜಗದೀಶ್​, ಮನೆಯಿಂದ ಹೊರಬಂದ ಬಳಿಕ ಮತ್ತೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಹಂಸಾ ಸೇರಿದಂತೆ ಎಲ್ಲರ ಬಳಿಯೂ ಕ್ಷಮೆ ಕೇಳಿದ್ದಾರೆ. ಜಗದೀಶ್​ ಮತ್ತು ರಂಜಿತ್​ ಅವರನ್ನು ಹೊರಹಾಕಿದ ಬಳಿಕ ಮನೆಯ ಸದಸ್ಯರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕನ್ನಡದ ಬಿಗ್​ಬಾಸ್​ ಸೀಸನ್​ 11 ರಿಂದ ಹೊರಹಾಕಲ್ಪಟ್ಟಿರುವ ಜಗದೀಶ್​ ಮನೆಯಿಂದ ಹೊರಬಂದ ಬಳಿಕ ವಿಡಿಯೋ ಸಂದೇಶದಲ್ಲಿ ಸಾಧ್ಯವಾದ್ರೆ ನನ್ನು ಮತ್ತೆ ಕರೆಸಿಕೊಳ್ಳಿ ಎಂದು ಸ್ಪರ್ಧಿಗಳು ಮತ್ತು ಸುದೀಪ್‌ ಮುಂದೆ ಬಿಗ್‌ಬಾಸ್‌ ಮನವಿ ಮಾಡಿದ್ದಾರೆ.

ಮನೆಯ ಎಲ್ಲರ ಬಳಿಯೂ ಸ್ಯಾರಿ ಕೇಳಿದ ಜಗದೀಶ್, ಹಂಸಾ ಅವರಿಗೂ ಕ್ಷಮೆ ಕೇಳಿದ್ದಾರೆ. ಕೆಲವೊಂದು ಘಟನೆಗಳು ಆಗಬಾರದಿತ್ತು ಆದರೆ ಆಗಿ ಹೋಗಿದೆ. ಸಾಧ್ಯವಾದ್ರೆ ನನ್ನನ್ನು ಮತ್ತೆ ಕರೆಸಿಕೊಳ್ಳಿ ಎಂದು ಹೇಳುತ್ತಿರುವ ವಿಡಿಯೋ ಮುಂದಿನ ಸಂಚಿಕೆಯಲ್ಲಿ ಎಂದು ತೋರಿಸಲಾಗಿದೆ.

ಯಾಕೆಂದರೆ ಹಂಸಾ ವಿರುದ್ಧ ಕೆಟ್ಟ ಪದಗಳ ಬಳಕೆ ಮಾಡಿದ್ದು, ಮನೆಯಲ್ಲಿ ದೊಡ್ಡ ಗಲಾಟೆಗೆ ಕಾರಣವಾಗಿ ಜಗದೀಶ್ ಮತ್ತು ರಂಜಿತ್ ಅವರನ್ನು ಮನೆಯಿಂದ ಹೊರಹಾಕುವಂತಾಯ್ತು.

ಬಿಗ್​ಬಾಸ್​ ಮನೆಯಿಂದ ಹೊರಬಂದು ಪ್ರೆಸ್‌ಮೀಟ್‌ ಕರೆದ ವಕೀಲ್‌ ಸಾಬ್‌ ಜಗದೀಶ್!

ಇನ್ನು ವಾರದ ಕಥೆ ಕಿಚ್ಚನ ಜೊತೆ ಇಂದಿನ ಎಪಿಸೂಡ್‌ ನಾಳೆ ಕೂಡ ಮುಂದುವರೆಯಲಿದೆ. ಯಾಕೆಂದರೆ ಮನೆಯಲ್ಲಿ ಯಾರದ್ದು ಕೂಡ ಕಾಸ್ಟ್ಯೂಮ್ ಬದಲಾವಣೆ ಆಗಿಲ್ಲ. ಜೊತೆಗೆ ಕಿಚ್ಚನ ಕಾಸ್ಟ್ಯೂಮ್  ಕೂಡ ಇಂದು ಧರಿಸಿದ್ದೇ ಇದೆ. ಇಂದಿನ ವಾರದ ಕಥೆ ಕಿಚ್ಚನ ಜೊತೆ ನಾಳೆ ಕೂಡ ಮುಂದುವರೆಯಲಿದೆ ಎಂದು ಕಾಣುತ್ತಿದೆ. 

ಇನ್ನು  ಇಂದು ನಡೆದವಾರದ ಪಂಚಾಯಿತಿಯಲ್ಲಿ  ಸುದೀಪ್  ಮನೆಯವರಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನಿಮ್ಮಲ್ಲಿ ಎಷ್ಟು ಜನ ಪ್ರಾಣಿಕರಿದ್ದೀರಿ. ಅವರಿಬ್ಬರು ಮಾಡಿದ್ದು ತಪ್ಪಾದರೆ ನೀವು ಮಾಡಿದ್ದೇನು? ಎಂದು ಸುದೀಪ್ ಪ್ರಶ್ನಿಸಿದ್ದು  ಉಗ್ರಂ ಮಂಜು, ಚೈತ್ರಾ ಕುಂದಾಪುರ ,ಹಂಸಾ ,ಮಾನಸಾಗಂತೂ ತುಸು ಗಟ್ಟಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜಗದೀಶ್ ಮನೆಯಿಂದ ಹೊರ ಹೋಗಲು ರೂಲ್ಸ್ ಬ್ರೇಕ್ ಮಾಡಿದ್ದು ಕಾರಣ ಅಲ್ಲ. ಜಗದೀಶ್​ ಶೋ ಬಗ್ಗೆ ಕೆಟ್ಟದಾಗಿ ಮಾತಾಡಿದ್ರು. ಸ್ಪರ್ಧಿಗಳ ಬಗ್ಗೆ ಕೂಡ ಅಸಭ್ಯವಾಗಿ ಮಾತಾಡಿದ್ರು. ಅವರು ನಡೆದುಕೊಂಡ ರೀತಿಯನ್ನು ಕೂಡ ಬಿಗ್ ಬಾಸ್ ಗಮನಿಸಿದ್ದಾರೆ. ಈ ಶೋಗೆ ತನ್ನದೇ ಆದ ಘನತೆ ಗೌರವ ಇದೆ. ಶೋ ಮರ್ಯಾದೆ ಹಾಗೂ ನಿಮ್ಮ ಸೆಕ್ಯೂರಿಟಿ ಎಲ್ಲ ಗಮನಿಸಿಯೇ ಜಗದೀಶ್ ಅವರನ್ನು ಹೊರಗೆ ಕಳುಹಿಸಲಾಗಿದೆ ಎಂದು ಸುದೀಪ್ ಹೇಳಿದ್ರು

ಕಿಚ್ಚ ಮಾತಿನಂತೆಯೇ ಆಯ್ತು, ಅನಿರೀಕ್ಷಿತ ತಿರುವಿನಲ್ಲಿ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಔಟ್‌! ಹೋಗಿದ್ದೆಲ್ಲಿಗೆ?

ಬಿಗ್ ಬಾಸ್ ಮನೆಯ ಪ್ರತಿಯೊಬ್ಬ ಸದಸ್ಯರು ಖುಷಿ ಆಗಿದ್ದಾರೆ. ಜಗದೀಶ್ ಹೋಗಿದ್ದಕ್ಕೆ ಖುಷಿ ಇದೆ. ರಂಜಿತ್ ಹೋಗಿರೋದಕ್ಕೆ ಬೇಸರವಿದೆ ಎಂದು ಸುದೀಪ್ ಹೇಳಿದರು. ಇದರ ಬೆನ್ನಲ್ಲೇ ಅಭಿನಂದನೆಗಳು ಎಂದು ಬರೆದ ಕೇಕ್‌ ತರಿಸಿ ಸ್ಪರ್ಧಿಗಳಿಗೆ ಕೊಟ್ಟರು. ಬಳಿಕ ಎಲ್ಲರು ಕೇಕ್ ನೀಡಿದಕ್ಕೆ ಕಾರಣವನ್ನು ಕೇಳಿದ್ರು. ಕಟ್ ಮಾಡಿದ್ರು. ಬಳಿಕ ಎಲ್ಲರು ಕೇಕ್ ನೀಡಿದ ಕಾರಣವನ್ನು ಕೇಳಿದ್ರು. ಸುದೀಪ್ ಹೇಳಿದ ಮಾತು ಕೇಳಿ ಸ್ಪರ್ಧಿಗಳು ಶಾಕ್ ಆದರು.

ಕೇಕ್ ಕಳಿಸಿದ್ದು ನಾನೇ ಎಂದು ಕಿಚ್ಚ ಹೇಳಿದ್ರು. ನನಗೆ ಮಾಧ್ಯಮಗಳು ಕೇಳ್ತಿದ್ರು. ಬಿಗ್ ಬಾಸ್​  ಸೀಸನ್​ ಗಳಲ್ಲಿ ನಿಮಗೆ ಯಾವ ಸೀಸನ್ ಇಷ್ಟವಿಲ್ಲ ಎಂದು. ನಾನು ಸೀಸನ್ 6 ಎನ್ನುತ್ತಿದ್ದೆ. ಈಗ ಸೀಸನ್ 11 ಎಂದು ಹೇಳುವಂತಾಗಿದೆ. ಅದಕ್ಕೆ ಈ ಕೇಕ್ ಎಂದ್ರು. ಇದನ್ನು ಕೇಳಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಶಾಕ್ ಆದ್ರು.​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...