
ಕಳೆದವಾರ ವೀಕೆಂಡ್ ಎಪಿಸೋಡ್ ನಲ್ಲಿ ಚೈತ್ರಾ ಕುಂದಾಪುರ ಪದ ಬಳಕೆ ಬಗ್ಗೆ ಕಿಚ್ಚ ಸುದೀಪ್ ಬುದ್ದಿ ಹೇಳಿದ್ದರು. ಕಿಚ್ಚ ಬುದ್ದಿ ಹೇಳಿದ್ದಕ್ಕೆ ಚೈತ್ರಾ ಅಸಮಾಧಾನ ಕೂಡ ಹೊರ ಹಾಕಿದ್ದರು.
ಕಳೆದವಾರ ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್ಗೆ ಹೇಳಿದ್ದಕ್ಕೆ ತಾಯಿಗೆ ಅವಮಾನಿಸಿದಂತೆ ಎಂದು ಸುದೀಪ್ ಅವರು ಕಟುವಾಗಿ ಖಂಡಿಸಿದ್ದರು. ಆದರೆ ಚೈತ್ರಾ ಮಾತ್ರ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿಕೊಂಡಿಲ್ಲ. ಅಕ್ಟೋಬರ್ 21ರ ಎಪಿಸೋಡ್ ನಲ್ಲಿ ಮತ್ತೆ ಅದೇ ರಾಗ ಅದೇ ಹಾಡು.
ಪರಿಣೀತಿ 28 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? ಇಲ್ಲಿದೆ ಅವರ ಫಿಟ್ನೆಸ್ ಮಂತ್ರ
ಗೋಲ್ಡ್ ಸುರೇಶ್ ಅವರು ಹಂಸಾ ಅವರದ್ದು ಲವ್ ಸ್ಟೋರಿ ನಡೆಯುತ್ತಿತ್ತು ಎಂದು ಕಮೆಂಟ್ ಮಾಡಿದ್ದಕ್ಕೆ ಬೇಸರಗೊಂಡ ಹಂಸಾ ಈ ಬಗ್ಗೆ ಚೈತ್ರಾ ಬಳಿ ಹಂಚಿಕೊಂಡರು. ಈ ವೇಳೆ ಚೈತ್ರಾ ‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಮೊದಲೇ ನಾನು ಸ್ಪರ್ಧಿಗಳಿಗೆ ಹೇಳಿದ್ದೇನೆ ಎಂದರು.
ವಿಚ್ಛೇದನ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಜೈಲರ್ 2 ರಲ್ಲಿ ರಜನಿ ಜೊತೆ ಧನುಷ್?
ಚೈತ್ರಾ ಅವರ ಈ ಮಾತು. ಜೊತೆಗೆ ಕಿಚ್ಚನ ಬುದ್ಧಿಮಾತಿನ ಬಗ್ಗೆ ಅಸಮಾಧಾನಗೊಂಡಿರುವ ಬಗ್ಗೆ ಮುಂದಿನ ವೀಕೆಂಡ್ ಎಪಿಸೋಡ್ ನಲ್ಲಿ ಚರ್ಚೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.